ಈ ವರ್ಷ ಎದುರಾಳಿಗಳಾಗಿ ನಿಲ್ಲಲಿದ್ದಾರಾ ಜೋಡೆತ್ತುಗಳು?

ಸ್ಯಾಂಡಲ್ ವುಡ್ ನ ಜೋಡೆತ್ತುಗಳು ಅಂತಾನೆ ಖ್ಯಾತಿಗಳಿಸಿರುವ ಜೋಡಿ ಡಿ ಬಾಸ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್. ಮಂಡ್ಯ ಚುನಾವಣೆಯ ನಂತರ ಇಬ್ಬರು ಸ್ಟಾರ್ ನಟರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ನಡೆಯುವ ಯಾವುದೆ ಕಾರ್ಯಕ್ರಮ ಮತ್ತು ಲೆಸೆಬ್ರೇಶನ್ ನಿಂದ ಕೊಂಚ ದೂರ ಉಳಿಯುವ ಡಿ ಬಾಸ್ ಇತ್ತೀಚಿಗಷ್ಟೆ ಯಶ್ ಮಗಳ ಹುಟ್ಟು ಹಬ್ಬದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇಬ್ಬರ ಸ್ನೇಹ ಸಂಬಂಧ ಎಲೆಕ್ಷನ್ ನಂತರವು ಹಾಗೆ ಮುಂದುವರೆದಿದೆ.

ಜೋಡೆತ್ತುಗಳು ಈ ವರ್ಷ ಎದುರಾಳಿಗಳಾಗಿ ನಿಲ್ಲುವ ಸಾಧ್ಯತೆ ಇದೆ ಎನ್ನು ಮಾತುಗಳು ಕೇಳಿ ಬರುತ್ತಿವೆ. ಅಂದರೆ ಇಬ್ಬರು ಸ್ಟಾರ್ ನಟರು ಮುಕಾಮುಕಿಯಾಗಲಿದ್ದಾರಾ ಎಂದು ಅಚ್ಚರಿಯಾಗುತ್ತಿದೆಯಾ. ಅಚ್ಚರಿ ಎನಿಸಿದರು ನಿಜ. ಯಾಕಂದ್ರೆ ಈ ವರ್ಷ ಬಾರಿ ನಿರೀಕ್ಷೆ ಹುಟ್ಟುಹಾಕಿರುವ ದರ್ಶನ್ ಅಭಿನಯದ ರಾಬರ್ಟ್ ಮತ್ತು ಯಶ್ ಅಭಿನಯದ ಕೆಜಿಎಫ್-2 ಸಿನಿಮಾಗಳು ಟಾಪ್ ನಲ್ಲಿ ಇದೆ. ವಿಶೇಷ ಅಂದರೆ ಈ ಎರಡು ನಿರೀಕ್ಷೆಯ ಚಿತ್ರಗಳು ಈ ವರ್ಷ ಸಮ್ಮರ್ ಗೆ ತೆರೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ಸಮ್ಮರ್ ಗೆ ಬರ್ತಿದೆ ರಾಬರ್ಟ್

ಸಮ್ಮರ್ ಗೆ ಬರ್ತಿದೆ ರಾಬರ್ಟ್

ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ರಾಬರ್ಟ್ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಹೊಸ ವರ್ಷದ ಮೊದಲ ದಿನವೇ ದರ್ಶನ್ ರಾಬರ್ಟ್ ಚಿತ್ರದ ಡಬ್ಬಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಲುಕ್ ಮೂಲಕ ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ದುಪ್ಪಟ್ಟು ಮಾಡಿರುವ ರಾಬರ್ಟ್ ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಚಿತ್ರ ಈ ವರ್ಷದ ಸಮ್ಮರ್ ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ.

ಸಮ್ಮರ್ ಗೆ ಕೆಜಿಎಫ್-2 ರಿಲೀಸ್ ಪ್ಲಾನ್ ?

ಸಮ್ಮರ್ ಗೆ ಕೆಜಿಎಫ್-2 ರಿಲೀಸ್ ಪ್ಲಾನ್ ?

ಕೆಜಿಎಫ್ ಮೊದಲ ಭಾಗ ರಿಲೀಸ್ ಆಗಿ ಒಂದು ವರ್ಷ ಕಳೆಯಿತು. ಪಾರ್ಟ್-2 ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೆಜಿಎಫ್-2 ಕೂಡ ಸಮ್ಮರ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಹಾಕಿಕೊಂಡಿದೆ. ಚಿತ್ರತಂಡ ಹೇಳಿದ ಪ್ರಕಾರ ಬೇಗ ಚಿತ್ರೀಕರಣ ಮುಗಿದರೆ ಸಮ್ಮರ್ ಗೆ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ ಎಂದಿದ್ದರು.

ಡಿಸೆಂಬರ್ ಯಶ್ ಗೆ ಲಕ್ಕಿ

ಡಿಸೆಂಬರ್ ಯಶ್ ಗೆ ಲಕ್ಕಿ

ರಾಕಿಂಗ್ ಯಶ್ ಗೆ ಡಿಸೆಂಬರ್ ತಿಂಗಳು ಲಕ್ಕಿ. ಈಗಾಗಲೆ ಅದು ಸಾಕಷ್ಟು ಸಿನಿಮಾಗಳಲ್ಲಿ ಪ್ರೋವ್ ಆಗಿದೆ. ಕೆಜಿಎಫ್ ಮೊದಲ ಭಾಗ ಕೂಡ ಡಿಸೆಂಬರ್ ನಲ್ಲಿ ರಿಲೀಸ್ ಆಗಿತ್ತು. ಸದ್ಯ ಕೆಜಿಎಫ್-2 ಚಿತ್ರೀಕರಣ ಇನ್ನು ಮುಗಿಯದಿರುವ ಕಾರಣ ಸಮ್ಮರ್ ಗೆ ಚಿತ್ರ ರಿಲೀಸ್ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಮ್ಮರ್ ಗೆ ಸಿನಿಮಾ ರಿಲೀಸ್ ಆದರೆ ಜೋಡೆತ್ತುಗಳು ಎದುರಾಳಿಗಳಾಗಿ ನಿಲ್ಲುವ ಸಾಧ್ಯತೆ ಇದೆ.

ಈ ವರ್ಷದ ನಿರೀಕ್ಷೆ ಸಿನಿಮಾಗಳು

ಈ ವರ್ಷದ ನಿರೀಕ್ಷೆ ಸಿನಿಮಾಗಳು

ಈ ವರ್ಷದ ನಿರೀಕ್ಷೆಯ ಸಿನಿಮಾಗಳಲ್ಲಿ ಕೆಜಿಎಫ್-2 ಮತ್ತು ರಾಬರ್ಟ್ ಸಿನಿಮಾಗಳು ಟಾಪ್ ನಲ್ಲಿ ಇದೆ. ಕೆಜಿಎಫ್-2 ಚಿತ್ರಕ್ಕಾಗಿ ಕನ್ನಡಿಗರು ಮಾತ್ರವಲ್ಲದೆ ಇಡಿ ದೇಶವೆ ಕಾತರದಿಂದ ಕಾಯುತ್ತಿದ್ದಾರೆ. ರಾಬರ್ಟ್ ಕೂಡ ಅಷ್ಟೆ ನಿರೀಕ್ಷೆಯನ್ನು ಹುಟ್ಟುಹಾಕಿದೆ. ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಶನ್ ನೊಡಲು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಈ ಎರಡು ಸಿನಿಮಾಗಳು ಸಮ್ಮರ್ ನಲ್ಲಿ ಬಂದರೆ ಕನ್ನಡ ಚಿತ್ರಾಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ.

More from Filmibeat

English summary
Kannada actor Darshan starrer Robert and Yash starrer KGF set to release in Summer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X