ದರ್ಶನ್ ಅಭಿನಯದ 'ರಾಬರ್ಟ್' ಚಿತ್ರಕ್ಕೆ ಮುಹೂರ್ತ ಫಿಕ್ಸ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರ 50 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಸದ್ಯ 'ಒಡೆಯ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಡಿ ಬಾಸ್ ಈಗ 'ರಾಬರ್ಟ್' ಚಿತ್ರದ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ.
ಟೈಟಲ್ ಮೂಲಕವೆ ಭಾರಿ ನಿರೀಕ್ಷೆ ಮೂಡಿಸಿರುವ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 'ರಾಬರ್ಟ್' ತರುಣ್ ಸುಧೀರ್ ನಿರ್ದೇಶನದ ಎರಡನೆ ಚಿತ್ರ. ತರುಣ್ ಈ ಮೊದಲು 'ಚೌಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ತರುಣ್ ಸುಧೀರ್ ತನ್ನ ಕನಸಿನ ಎರಡನೆ ಚಿತ್ರವನ್ನು ಚಾಲೆಂಜಿಂಗ್ ಸ್ಟಾರ್ ಜೊತೆ ಮಾಡುತ್ತಿದ್ದಾರೆ. 'ಚೌಕ' ಚಿತ್ರದಲ್ಲಿ ದರ್ಶನ್ ರಾಬರ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಹೆಸರಿನಲ್ಲಿ ಸಿನಿಮಾ ಸೆಟ್ಟೇರಿರುವುದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.ಮುಂದೆ ಓದಿ..

ಮೇ 6ಕ್ಕೆ ರಾಬರ್ಟ್ ಮುಹೂರ್ತ
ಡಿ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 'ರಾಬರ್ಟ್' ಚಿತ್ರದ ಮುಹೂರ್ತಕ್ಕೆ ಸಮಯ ನಿಗದಿಯಾಗಿದೆ. ಮೇ 6ಕ್ಕೆ ಬಹುನಿರೀಯ 'ರಾಬರ್ಟ್' ಸಿನಿಮಾ ಅದ್ದೂರಿಯಾಗಿ ಸೆಟ್ಟೇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ವಿಶೇಷ ಅಂದ್ರೆ ಅವತ್ತಿನಿಂದಲೆ ಚಿತ್ರದ ಚಿತ್ರೀಕರಣ ಕೂಡ ಪ್ರಾರಂಭಿಸಲು ಪ್ಲಾನ್ ಮಾಡಿದೆಯಂತೆ ಚಿತ್ರತಂಡ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಿಂದಲೆ ಆರಂಭವಾಗಲಿದೆ. ನಂತರ ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಚಿತ್ರೀಕರಣ ನಡೆಯಲಿದೆ.

ಕುತೂಹಲ ಮೂಡಿಸಿದೆ ಪೋಸ್ಟರ್
ರಾಬರ್ಟ್ ಚಿತ್ರದ ಎರಡು ಪೋಸ್ಟರ್ಸ್ ರಿಲೀಸ್ ಆಗಿದೆ. ಮೊದಲ ಪೋಸ್ಟರ್ ನಲ್ಲಿ ಮಗುವಿನ ಕೈ ಹಿಡಿದಿರುವ ಒಬ್ಬ ವ್ಯಕ್ತಿ, ಹಿಂಬಾಗದಲ್ಲಿ ರಾವಣನ ಫೋಟೋ. "ಈ ಕೈ ಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣ ಮುಂದೆ ಗೆಲ್ಲೋದು ಗೊತ್ತು" ಎನ್ನುವ ಟ್ಯಾಗ್ ಲೈನ್ ಕೂಡ ಇದೆ. ಇನ್ನು ಮತ್ತೊಂದು ಪೋಸ್ಟರ್ ನಲ್ಲಿ ಹನುಮಂತನ ಬುಜದ ಮೇಲೆ ಕುಳಿತಿರುವ ಬಾಲಕ ರಾಮನ ಫೋಟೋ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. 'ರಾಬರ್ಟ್' ಅಂತ ಟೈಟಲ್ ಇಟ್ಟುಕೊಂಡು ರಾಮ ಮತ್ತು ಹನುಮನ ಪೋಸ್ಟರ್ ರಿಲೀಸ್ ಮಾಡಿರುವುದು ಚಿತ್ರಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ತರುಣ್ ನಿರ್ದೇಶನದ ಎರಡನೆ ಸಿನಿಮಾ
'ಚೌಕ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ತರುಣ್ ಮೊದಲ ಚಿತ್ರದ ಮೂಲಕವೆ ಚಿತ್ರಪ್ರಿಯರ ಗಮನ ಸೆಳೆದಿದ್ದಾರೆ. ವಿಭಿನ್ನ ಕಾನ್ಸೆಪ್ಟ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ತರುಣ್ ಈಗ 'ರಾಬರ್ಟ್' ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ. ತರುಣ್ ಮತ್ತು ದರ್ಶನ್ ಇಬ್ಬರು ಉತ್ತಮ ಗೆಳೆಯರು. ಈ ಸ್ನೇಹಿತರ ಸಿನಿಮಾ ಹೇಗಿ ಮೂಡಿ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಉಮಾಪತಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಬರ್ಟ್ ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಇನ್ನು ಬಹಿರಂಗ ಆಗಿಲ್ಲ.

ಒಡೆಯ ಮತ್ತು ಕುರುಕ್ಷೇತ್ರ ರಿಲೀಸ್ ಆಗಬೇಕಿದೆ
'ರಾಬರ್ಟ್' ಚಿತ್ರಕ್ಕೆ ಸಜ್ಜಾಗಿರುವ ಡಿ ಬಾಸ್ ಈಗ 'ಒಡೆಯ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಒಡೆಯ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 'ಒಡೆಯ' ಎಂ ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟು ಕೊಡದ ಚಿತ್ರತಂಡ ಸೈಲೆಂಟ್ ಆಗಿ ಚಿತ್ರೀಕರಣ ಮಾಡಿ ಮುಗಿಸುತ್ತಿದ್ದಾರೆ. ಇನ್ನು ದರ್ಶನ್ ಅಭಿನಯದ ಭಾರಿ ನಿರೀಕ್ಷೆಯ 'ಕುರುಕ್ಷೇತ್ರ' ಚಿತ್ರ ಕೂಡ ರಿಲೀಸ್ ಹಂತಕ್ಕೆ ಬಂದಿದೆ. ಐದು ಭಾಷೆಯಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಕುರುಕ್ಷೇತ್ರ ಸಧ್ಯದಲ್ಲೇ ತೆರೆಗೆ ಬರಲಿದೆ.


Click it and Unblock the Notifications











