ದೊಡ್ಡ ಮೊತ್ತಕ್ಕೆ ಮಾರಾಟವಾದ 'ರಾಬರ್ಟ್' ಆಡಿಯೋ ರೈಟ್ಸ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೆ 50ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ನೀಡಿದೆ. ಭಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಚಿತ್ರದಿಂದ ಸದ್ಯ ಬ್ರೇಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ.
ರಾಬರ್ಟ್ ಚಿತ್ರೀಕರಣ ಹಂತದಲ್ಲಿರುವಾಗಲೆ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ರಾಬರ್ಟ್ ಈಗಾಗಲೆ ದೊಡ್ಡ ಮೊತ್ತದ ಹಣವನ್ನು ಬಾಚಿಕೊಂಡಿದೆ.

ಆನಂದ್ ಆಡಿಯೋ ಪಾಲಾದ ರಾಬರ್ಟ್ ಹಾಡುಗಳು
ರಾಬರ್ಟ್ ಚಿತ್ರದ ಹಾಡುಗಳನ್ನು ಆನಂದ್ ಆಡಿಯೋ ಕಂಪೆನಿ ಖರೀದಿ ಮಾಡಿದೆ. ರಾಬರ್ಟ್ ಚಿತ್ರದ ಹಾಡುಗಳಿಗೆ ಬಹುದೊಡ್ಡ ಬೇಡಿಕೆ ಇತ್ತು. ಆಡಿಯೋ ರೈಟ್ಸ್ ಗಾಗಿ ಆಡಿಯೋ ಕಂಪೆನಿಗಳ ಪೈಪೋಟಿ ಜೋರಾಗಿತ್ತು. ಕೊನೆಯದಾಗಿ ಬಹುನಿರೀಕ್ಷೆಯ ಚಿತ್ರದ ಆಡಿಯೋ ಆನಂದ್ ಆಡಿಯೋ ಪಾಲಾಗಿದೆ. ಆದ್ರೆ ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಮೂಲಗಳ ಪ್ರಕಾರ ಅತೀ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ರಾಬರ್ಟ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಕ್ಟೋಬರ್ 2ರಿಂದ ಶೂಟಿಂಗ್
ರಾಬರ್ಟ್ ಚಿತ್ರದ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ನೀಡಲಾಗಿತ್ತು. ಅಲ್ಲದೆ ದರ್ಶನ್ ಸದ್ಯ ವೈಲ್ಡ್ ಲೈಫ್ ಫೋಟೋಗ್ರಫಿಗಾಗಿ ಕೀನ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಹಾಗಾಗಿ ಮುಂದಿನ ಹಂತದ ಚಿತ್ರೀಕರಣವನ್ನು ಅಕ್ಟೋಬರ್ 2ರಿಂದ ಪ್ರಾರಂಭಿಸಲಿದೆ ಚಿತ್ರತಂಡ. ಈಗಾಗಲೆ ಸುಮಾರು 50ರಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ ಚಿತ್ರತಂಡ.

ಚಿತ್ರತಂಡ ಸೇರಿದ ಜಂಗ್ಲಿ ನಾಯಕಿ
ರಾಬರ್ಟ್ ಚಿತ್ರದಲ್ಲಿ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಮಿಂಚಿದ್ದ ಕನ್ನಡದ ಬೆಡಗಿ ಆಶಾ ಭಟ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ ಅನೇಕ ದಿನಗಳ ನಂತರ ಆಶಾ ಭಟ್ ಚಿತ್ರತಂಡ ಸೇರಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಆಶಾ ಭಟ್ ಭಾಗಿಯಾಗಿದ್ದರು. ಆಕ್ಟೋಬರ್ 2ರಿಂದ ಮತ್ತೆ ಶೂಟಿಂಗ್ ನಲ್ಲಿ ಹಾಜರ್ ಆಗಲಿದ್ದಾರೆ ಆಶಾ.

ಜಗಪತಿ ಬಾಬು ವಿಲನ್
ರಾಬರ್ಟ್ ಚಿತ್ರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ವಿಲನ್ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಜಗಪತಿ ಬಾಬು ಮತ್ತು ದರ್ಶನ್ ಇಬ್ಬರು ಮುಖಾಮುಖಿಯಾಗುತ್ತಿದ್ದಾರೆ. ಈಗಾಗಲೆ ಜಗಪತಿ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ವಿನೋದ್ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಬರ್ಟ್ ಉಮಾಪತಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ.


Click it and Unblock the Notifications











