ದರ್ಶನ್ ಜೈಲಿನಲ್ಲಿರುವ ಹೊತ್ತಲ್ಲಿ ಹಳೇ ಸಿನಿಮಾ ರೀ- ರಿಲೀಸ್; ರಿಪೀಟ್ ಆಗುತ್ತಾ 'ಸಾರಥಿ' ಮ್ಯಾಜಿಕ್?

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುವಂತಾಗಿದೆ. ಸದ್ಯ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇಂತಹ ಸಮಯದಲ್ಲೇ ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್‌ ಆಗುತ್ತಿದೆ.

ಐಪಿಎಲ್, ಎಲೆಕ್ಷನ್ ಮುಗಿದು ತಿಂಗಳಾದರೂ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹಾಗಾಗಿ ಹಳೇ ಸಿನಿಮಾಗಳನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಮುಂದುವರೆದಿದೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ತೆರೆಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಎ' ಸೇರಿದಂತೆ ಹಲವು ಸಿನಿಮಾಗಳು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದವು. ಈ ವಾರ ದರ್ಶನ್ ನಟನೆಯ 'ಶಾಸ್ತ್ರಿ' ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.

Darshan starrer superhit film ready to Re release this week

ನಟ ದರ್ಶನ್ ಜೈಲಿನಲ್ಲಿರುವ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡ್ತಾರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಆದರೆ 13 ವರ್ಷಗಳ ಹಿಂದೆ ದರ್ಶನ್ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ ದರ್ಶನ್ ಜೈಲಿನಿಂದ ಹೊರಬಂದು ರಾಜ್ಯಾದ್ಯಂತ ವಿಜಯಯಾತ್ರೆ ಮಾಡಿದ್ದರು. ಅವರ ವೈಯಕ್ತಿಕ ವಿಚಾರವನ್ನು ಬದಿಗಿಟ್ಟು ಜನ ಸಿನಿಮಾ ನೋಡಿ ಹರಸಿದ್ದರು. ಇದೀಗ ವಿತರಕ ಶಂಕರ್ ಎಂಬುವವರು 'ಶಾಸ್ತ್ರಿ' ಸಿನಿಮಾವನ್ನು ಮರು ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಪಿ. ಎನ್ ಸತ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ರೌಡಿಸಂ ಸಿನಿಮಾ ಇದು. ದರ್ಶನ್ ಜೋಡಿಯಾಗಿ ಮಾನ್ಯ ನಟಿಸಿದ್ದರು. ಆಪ್ತ ಅಣಜಿ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಶಿವಣ್ಣನ 'ಓಂ' ಛಾಯೆ ಚಿತ್ರದಲ್ಲೂ ಕಾಣುತ್ತಿತ್ತು. ಈ ಚಿತ್ರದಿಂದ ಬಂದ ಸಂಭಾವನೆ ಹಣದಲ್ಲೇ ದರ್ಶನ್ ಟೀ. ನರಸೀಪುರ ರಸ್ತೆಯಲ್ಲಿ ಫಾರ್ಮ್‌ಹೌಸ್ ಜಾಗ ಖರೀದಿಸಿದ್ದರು. ತಮ್ಮ ಸಿನಿಮಾ ಈ ಮಟ್ಟಿಗೆ ಹಣ ಗಳಿಸುತ್ತದೆ ಎನ್ನುವುದು ದರ್ಶನ್‌ಗೆ ಗೊತ್ತಾಗಿದ್ದು ಕೂಡ ಇದೇ ಚಿತ್ರದಿಂದ ಅಂತೆ. ಈ ವಿಚಾರವನ್ನು ಖುದ್ದು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

'ಶಾಸ್ತ್ರಿ' ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ಸಂಯೋಜನೆ ಮಾಡಿದ್ದರು. 2005ರಲ್ಲಿ ತೆರಕಂಡಿದ್ದ ಈ ಚಿತ್ರದಲ್ಲಿ 2017ರಲ್ಲಿ ಡಿಜಿಟಲ್ ಆಗಿ ರೀ-ರಿಲೀಸ್ ಆಗಿತ್ತು. ಇದೀಗ ಈ ವಾರ ಮತ್ತೆ ಸಿನಿಮಾ ತೆರೆಗೆ ಬರಲಿದೆ. ಚಿತ್ರಮಂದಿರಗಳು ಖಾಲಿಯಾಗಿದ್ದು ಜನ ಬರುತ್ತಿಲ್ಲ. ಹಾಗಾಗಿ 'ಶಾಸ್ತ್ರಿ' ಚಿತ್ರ ರಿಲೀಸ್ ಮಾಡಲು ಮುಂದಾಗಿರುವುದಾಗಿ ಶಂಕರ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಈ ವಾರವೇ ಸಿನಿಮಾ ಬರೋದು ಬಹುತೇಕ ಖಚಿತ ಎಂದಿದ್ದಾರೆ.

Darshan starrer superhit film ready to Re release this week

ಸ್ಟಾರ್ ನಟರು ಸಿನಿಮಾಗಳನ್ನು ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಸಿನಿಮಾಗಳು ಯಾವಾಗ ತೆರೆಗೆ ಬರುತ್ತದೆ ಎನ್ನುವ ಅಂದಾಜು ಯಾರಿಗೂ ಇಲ್ಲ. ಬರ್ತಾ ಬರ್ತಾ ಸ್ಟಾರ್ ನಟರು ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಮಾಡಿದ್ದಾರೆ. ಇನ್ನು 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳ ರಿಲೀಸ್ ಡೇಟ್ ಘೋಷಣೆ ಆಗಲಿಲ್ಲ. ಹೀಗೆ ಮುಂದುವರೆದರೆ ಹಳೇ ಸಿನಿಮಾಗಳನ್ನೇ ರೀ ರಿಲೀಸ್ ಮಾಡುತ್ತಾ ಕೂರಬೇಕಾಗುತ್ತದೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಚಿತ್ರರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

More from Filmibeat

English summary
Darshan's hi film Converted into Digital Format with 5.1 Surround Sound
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X