»   » 'ಒಡೆಯರ್' ಶೀರ್ಷಿಕೆ ವಿವಾದ: ದರ್ಶನ್ ಅಭಿಮಾನಿಗಳ ಖಡಕ್ ಪ್ರತ್ಯುತ್ತರ ಏನು.?

'ಒಡೆಯರ್' ಶೀರ್ಷಿಕೆ ವಿವಾದ: ದರ್ಶನ್ ಅಭಿಮಾನಿಗಳ ಖಡಕ್ ಪ್ರತ್ಯುತ್ತರ ಏನು.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯ 51ನೇ ಚಿತ್ರ 'ಯಜಮಾನ' ಚಿತ್ರೀಕರಣದಲ್ಲಿ ದರ್ಶನ್ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, 52ನೇ ಚಿತ್ರ 'ಒಡೆಯರ್' ಅನೌನ್ಸ್ ಆಗಿದೆ.

'ಒಡೆಯರ್' ಟೈಟಲ್ ಕೇಳಿದ ಕೂಡಲೆ ಕನ್ನಡ ಕ್ರಾಂತಿ ದಳದ ಮುಖಂಡರು ಮುನಿಸಿಕೊಂಡಿದ್ದಾರೆ. 'ಒಡೆಯರ್' ಚಿತ್ರದ ಟೈಟಲ್ ಬದಲಿಸದೇ ಇದ್ದರೆ ದರ್ಶನ್ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಕನ್ನಡ ಕ್ರಾಂತಿ ದಳದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

'ಒಡೆಯರ್' ಶೀರ್ಷಿಕೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಖಡಕ್ಕಾಗಿ ಪ್ರತ್ಯುತ್ತರ ನೀಡಿದ್ದಾರೆ. ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

'ಒಡೆಯರ್' ಟೈಟಲ್ ಗೆ ವಿರೋಧ ಏಕೆ.?

ನಾಡು-ನುಡಿ ಸೇವೆಗಾಗಿ ಮೈಸೂರು ರಾಜವಂಶಸ್ಥರಾದ ಒಡೆಯರ್ ಕೊಡುಗೆ ಅಪಾರವಾಗಿದೆ. ಅವರ ಹೆಸರಿನಲ್ಲಿ ಕಮರ್ಶಿಯಲ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಖಂಡನೀಯ ವಿಚಾರ ಎಂದು ಕನ್ನಡ ಕ್ರಾಂತಿ ದಳದ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ದರ್ಶನ್ ಹೊಸ ಚಿತ್ರಕ್ಕೆ ಆರಂಭದಲ್ಲೇ ಎದುರಾಯ್ತ ಸಂಕಷ್ಟ

ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ

''ದರ್ಶನ್ ಸಿನಿಮಾಗೆ 'ಒಡೆಯರ್' ಎಂಬ ಶೀರ್ಷಿಕೆಗೆ ಗ್ರೀನ್ ಸಿಗ್ನಲ್ ನೀಡಿ ಫಿಲ್ಮ್ ಚೇಂಬರ್ ತಪ್ಪು ಎಸಗಿದೆ. ಒಂದು ವಾರದಲ್ಲಿ ಶೀರ್ಷಿಕೆ ಬದಲಾಗಬೇಕು. ಇಲ್ಲದಿದ್ದರೆ, ದರ್ಶನ್ ಮನೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು'' ಎಂದು ಕನ್ನಡ ಕ್ರಾಂತಿ ದಳ ಎಚ್ಚರಿಕೆ ನೀಡಿದೆ.

ದರ್ಶನ್ ಅಭಿಮಾನಿಗಳ ಖಡಕ್ ರಿಪ್ಲೈ

''ರಾಜವಂಶಕ್ಕೆ 'ಒಡೆಯರ್' ಅಂತೀರಾ ಅಂದ್ಮೇಲೆ, ಇವರು ಸಹ ತೂಗುದೀಪ ವಂಶದ ರಾಜರೇ. ಹಾಗಾದ್ರೆ, ಇವರು 'ಒಡೆಯರ್' ತಾನೇ. ರಾಜರನ್ನ ಮಾಡೋರು ಯಾರು.? ನಾವು. ಅಂದ್ಮೇಲೆ, ನಾವು ಯಾರನ್ನ ಬೇಕಾದರೂ ರಾಜರನ್ನ ಮಾಡ್ಬಹುದು. ಅವರನ್ನೇ 'ಒಡೆಯರ್' ಅಂತ ಹೇಳಬಹುದು. ನಮ್ಮ ಪಾಲಿಗೆ ದರ್ಶನ್ ಬಾಸ್ ಒಡೆಯರ್'' ಎಂದು ಟ್ವಿಟ್ಟರ್ ನಲ್ಲಿ ದರ್ಶನ್ ಅಭಿಮಾನಿ ಬಳಗ ಬರೆದುಕೊಂಡಿದೆ.

ಸೆಟ್ಟೇರುವ ಮುನ್ನವೇ ವಿವಾದ

ಇನ್ನೂ ಸೆಟ್ಟೇರುವ ಮುನ್ನವೇ 'ಒಡೆಯರ್' ಸಿನಿಮಾ ವಿವಾದಕ್ಕೆ ಸಿಲುಕಿದೆ. ಇದು ಎಲ್ಲಿಯವರೆಗೂ ಹೋಗಿ ತಲುಪುತ್ತೋ, ನೋಡ್ಬೇಕು.

English summary
Challenging Star Darshan fans have taken twitter account to voice out their opinion about 'Wodeyar' title.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada