ಸೆಂಚುರಿ ಬಾರಿಸಿದ ದರ್ಶನ್ 'ಯಜಮಾನ' ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 100 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗುತ್ತಿದೆ. ಶತಕದ ಗಡಿದಾಟಿದ್ರು 'ಯಜಮಾನ'ನಿಗೆ ಇದ್ದ ಬೇಡಿಕೆ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ 'ಯಜಮಾನ' ಈಗ ನೂರರ ಸಂಭ್ರಮ ಆಚರಿಸುವ ಮೂಲಕ ಗೆದ್ದು ಬೀಗುತ್ತಿದೆ.

ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿರುವ 'ಯಜಮಾನ'ನಿಗೆ ಅಭಿಮಾನಿಗಳ ಮಚ್ಚಿಗೆಯ ಮಹಾಪೂರವೆ ಹರಿದು ಬರುತ್ತಿದೆ. ಚಿತ್ರ ಮಾರ್ಚ್ 1 ಕ್ಕೆ ದೇಶದಾದ್ಯಂತ ತೆರೆಗೆ ಬಂದಿತ್ತು. ಇನ್ನು ಕೂಡ ಸಾಕಷ್ಟು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಂದ್ಹಾಗೆ 'ಯಜಮಾನ' ಚಿತ್ರಕ್ಕೆ ಪೊನ್ನು ಕುಮಾರ್ ಮತ್ತು ವಿ ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. 'ಯಜಮಾನ' ಸಿನಿಮಾ ಮೂಲಕ ವಿ ಹರಿಕೃಷ್ಣ ನಿರ್ದೇಶಕರಾಗಿಯು ಗುರುತಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆ ಜವಾಬ್ದಾರಿಯ ಜೊತೆಗೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

Darshan starrer Yajamana film completed hundred days

'ಯಜಮಾನ' ಪಕ್ಕಾ ಫ್ಯಾಮಿಲಿ ಚಿತ್ರ ಜೊತೆಗೆ ಮಾಸ್ ಟಚ್ ಕೂಡ ಇದೆ. ಆಕ್ಷನ್, ಸೆಂಟಿಮೆಂಟ್ ಎಲ್ಲವು 'ಯಜಮಾನ'ಲ್ಲಿದೆ. ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯರಾಗಿ ರಶ್ಮಿಕಾ ಮಂದಣ್ಣ ಮತ್ತು ತ್ಯಾನ್ಯಾ ಹೋಪ್ ಮಿಂಚಿದ್ದಾರೆ.

More from Filmibeat

English summary
Challenging star Darshan starrer Yajamana film completed hundred days. This movie is irected by V Harikrishna and Ponnu Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X