ಶತಕದ ಹೊಸ್ತಿಲಲ್ಲಿ ಡಿ ಬಾಸ್ 'ಯಜಮಾನ' ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ರಿಲೀಸ್ ಆಗಿ 99 ದಿನಗಳು ಕಳೆದರು 'ಯಜಮಾನ'ನಿಗೆ ಇದ್ದ ಬೇಡಿಕೆ ಕಮ್ಮಿ ಆಗಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ 'ಯಜಮಾನ' ಚಿತ್ರಕ್ಕೀಗ 99 ದಿನಗಳ ಸಂಭ್ರಮ.
ಸದ್ಯ ಶತಕದ ಹೊಸ್ತಿಲಲ್ಲಿ ಇರುವ 'ಯಜಮಾನ'ನಿಗೆ ಅಭಿಮಾನಿಗಳ ಮಚ್ಚಿಗೆಯ ಮಹಾಪೂರವೆ ಹರಿದು ಬರುತ್ತಿದೆ. ಚಿತ್ರ ಮಾರ್ಚ್ 1 ಕ್ಕೆ ದೇಶದಾದ್ಯಂತ ತೆರೆಗೆ ಬಂದಿತ್ತು. ಇನ್ನು ಕೂಡ ಸಾಕಷ್ಟು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಅಂದ್ಹಾಗೆ 'ಯಜಮಾನ' ಚಿತ್ರಕ್ಕೆ ವಿ ಹರಿಕೃಷ್ಣ ಮತ್ತು ಪೊನ್ನು ಕುಮಾರನ್ ಅಕ್ಷನ್ ಕಟ್ ಹೇಳಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಜೊತೆಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಚಿತ್ರದಲ್ಲಿ ದರ್ಶನ್ ಪಕ್ಕಾ ಫ್ಯಾಮಿಲಿ ಮೆನ್ ಆಗಿ ಕಾಣಿಸಿಕೊಳ್ಳುವ ಜೊತೆಗೆ ಮಾಸ್ ಲುಕ್ ನಲ್ಲೂ ಮಿಂಚಿದ್ದಾರೆ. ಹಿರಿಯ ನಟ ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ.
ನೂರರ ಗಡಿ ದಾಟಲು ಇನ್ನೊಂದೆ ದಿನ ಭಾಕಿ ಇದೆ. ಸೆಂಚುರಿ ಬಾರಿಸುತ್ತಿರುವ ಯಜಮಾನ ಬಗ್ಗೆ ಚಿತ್ರತಂಡ ಫುಲ್ ಖುಷ್ ಆಗಿದೆ. ಒಂದೊಳ್ಳೆ ಸಂದೇಶವನ್ನು ಹೊತ್ತು ಚಿತ್ರಪ್ರಿಯರ ಮುಂದೆ ಬಂದಿದ್ದ 'ಯಜಮಾನ' ಗೆದ್ದು ಬೀಗಿದ್ದಾನೆ.


Click it and Unblock the Notifications











