ಚೆಂದದ ಚಂದನವನದ ಅಂದ ಹೆಚ್ಚಿಸಲು ಬರುತ್ತಿದ್ದಾರೆ ನಮ್ಮ ಪ್ರೀತಿಯ ಯಜಮಾನ
Recommended Video

ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಟ್ರೈಲರ್ ಹಾಗೂ 4 ಹಾಡುಗಳು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಚೇತನ್ ಕುಮಾರ್ ಸಾಹಿತ್ಯವಿರುವ "ಶಿವನಂದಿ..." , ಕವಿರಾಜ್ ಬರೆದಿರುವ "ಒಂದು ಮುಂಜಾನೆ...", ಸಂತೋಷ್ ಆನಂದರಾಮ್ ಅವರ "ಯಜಮಾನ" ಟೈಟಲ್ ಹಾಡು ಹಾಗೂ ಯೋಗರಾಜ್ ಭಟ್ಟರ "ಬಸಣಿ..." ಹಾಡುಗಳು ಜನಪ್ರಿಯವಾಗಿವೆ.
'ಯಜಮಾನ' ಚಿತ್ರವು ಮಾರ್ಚ್ 1 ರಂದು ಬಿಡುಗಡೆಯಾಗುವುದಾಗಿ ಈಗಾಗಲೇ ಚಿತ್ರ ತಂಡವು ತಿಳಿಸಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ದರ್ಶನ್ ಅವರೊಂದಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಡಾಲಿ ಧನಂಜಯ್, ತಾನ್ಯ ಹೋಪ್, ರವಿಶಂಕರ್, ಸಾಧುಕೋಕಿಲ, ಮಂಡ್ಯ ರಮೇಶ್ ಹಾಗೂ ಹಲವರ ತಾರಾಗಣ ಚಿತ್ರದಲ್ಲಿದೆ.
ಮೀಡಿಯಾ ಹೌಸ್ ಸ್ಟುಡಿಯೋ ಸಂಸ್ಥೆಯ ಮೂಲಕ ಶೈಲಜಾ ನಾಗ್ ಹಾಗೂ ಬಿ.ಸುರೇಶ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕರೇ ಹೇಳುವ ಹಾಗೆ 'ಯಜಮಾನ' ಚಿತ್ರವು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನರ್ ಹಾಗೂ ಆಕ್ಷನ್ ಚಿತ್ರವಾಗಿದ್ದು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಲು ನಿಮ್ಮ ಮುಂದೆ ಬರಲಿದೆ.

ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ವಿ.ಹರಿಕೃಷ್ಣ ಹಾಗೂ ಪಿ.ಕುಮಾರ್ ಅವರು ಹೊತ್ತಿದ್ದಾರೆ. 'ಭರ್ಜರಿ' ಹಾಗೂ 'ಬಹದ್ದೂರ್' ಚಿತ್ರಗಳಲ್ಲಿ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದ ಶ್ರೀಶ ಕೂದುವಳ್ಳಿ ಅವರ ಅದ್ಭುತ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಶಶಿಧರ್ ಅಡಪ ಅವರು ಕಲಾ ನಿರ್ದೇಶನ ಮಾಡಿದ್ದಾರೆ.
ಟ್ರೈಲರ್ ಬಿಡುಗಡೆಯಾದ ಮೂರನೇ ದಿನ 15.5 ಮಿಲಿಯನ್ ವೀಕ್ಷಣೆಯೊಂದಿಗೆ ಯೂಟ್ಯೂಬ್ ನಲ್ಲಿ ನಂ.1 ನೇ ಸ್ಥಾನದಲ್ಲಿದೆ. ಈಗಾಗಲೇ ದರ್ಶನ್ ಅವರ ಕೋಟ್ಯಾಂತರ ಅಭಿಮಾನಿಗಳು ಕಾತರದಿಂದ ಕಾಯಿತ್ತಿದ್ದು ಎಲ್ಲರ ಚಿತ್ತ ಮೊದಲ ದಿನದ ಮೇಲಿದ್ದು, ಯಾವೆಲ್ಲ ರೆಕಾರ್ಡ್ ಗಳನ್ನು ಮುರಿಯುತ್ತದೆ ಎಂದು ಕಾದು ನೋಡಬೇಕಿದೆ.
ಒಟ್ಟಾರೆ ದರ್ಶನ್ ಅವರ ಸಿನಿಮಾ ಜೀವನದಲ್ಲಿ ಇದೊಂದು ವಿಶಿಷ್ಟ ಸಿನಿಮಾವಾಗಿದ್ದು, ಬರೋಬ್ಬರಿ ಒಂದೂವರೆ ವರ್ಷಗಳ ನಂತರ ಅವರ ಸಿನಿಮಾ ಬಿಡುಗಡೆಯಾಗುತ್ತಿದೆ. 'ತಾರಕ್' ನಂತರ ಅವರ ಯಾವೊಂದು ಸಿನಿಮಾವೂ ಬಿಡುಗಡೆಯಾಗರಲಿಲ್ಲ. ಈ ಚಿತ್ರವು ಅದ್ಭುತ ಯಶಸ್ಸನ್ನು ಕಾಣಲಿ ಎಂದು ಅಭಿಮಾನಿಗಳು ಹಾಗೂ ಕನ್ನಡ ವೀಕ್ಷಕರು ಹಾರೈಸುತ್ತಿದ್ದಾರೆ.


Click it and Unblock the Notifications











