ಹೋಟೆಲ್, ಆಟೋ, ಬೈಕ್ ಎಲ್ಲೆಲ್ಲೂ ದರ್ಶನ್ 'ಕುರುಕ್ಷೇತ್ರ'

By Pavithra

'ತಾರಕ್' ಸಿನಿಮಾದ ನಂತರ ದರ್ಶನ್ ಅಭಿಮಾನಿಗಳು ನೋಡಲು ಕಾತುರದಿಂದ ಕಾದಿರುವ ಸಿನಿಮಾ 'ಕುರುಕ್ಷೇತ್ರ'. ಪ್ರತಿ ಹಂತದಲ್ಲೂ ಕುತೂಹಲಗಳನ್ನ ಮೂಡಿಸುತ್ತಾ ಚಿತ್ರೀಕರಣ ಮಾಡುತ್ತಿರುವ ಕುರುಕ್ಷೇತ್ರ ಸಿನಿಮಾ ಸುದ್ದಿ ಕೂಡ ಅಷ್ಟೇ ಜೋರಾಗಿ ವೈರಲ್ ಆಗ್ತಿದೆ. 'ಸಂಗೊಳ್ಳಿ ರಾಯಣ್ಣ' ಸಿನಿಮಾದ ನಂತರ ದರ್ಶನ್ ಮತ್ತೊಮ್ಮೆ ಪೌರಾಣಿಕ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಸದ್ಯ, ಬಿಡುಗಡೆಯಾಗಿರುವ ಕುರುಕ್ಷೇತ್ರ ಸಿನಿಮಾದ ಟೀಸರ್ ಮತ್ತು ಫೋಟೋಗಳನ್ನ ನೋಡಿರುವ ಅಭಿಮಾನಿಗಳು ಈ ಚಿತ್ರದ ಕನ್ನಡ ಸಿನಿಮಾರಂಗದಲ್ಲಿ ಇತಿಹಾಸವನ್ನ ಸೃಷ್ಠಿ ಮಾಡಲಿದೆ ಎನ್ನುತ್ತಿದ್ದಾರೆ. ಅದ್ಧೂರಿ ತಾರಾಗಣ, ಬಹುಕೋಟಿ ವೆಚ್ಚ, ಭರ್ಜರಿ ಸೆಟ್ ಹೀಗೆ ಹಲವು ವಿಶೇಷತೆಗಳಿಂದ ಕೂಡಿರುವ 'ಕುರುಕ್ಷೇತ್ರ' ಸಿನಿಮಾ ಜನವರಿ ಅಂತ್ಯಕ್ಕೆ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ.

ಸಿನಿಮಾ ಬಿಡುಗಡೆಗೆ ಮುಂಚಿತವಾಗಿಯೇ ದರ್ಶನ್ ಕುರುಕ್ಷೇತ್ರ ಪೋಸ್ಟರ್ ಗಳು ವೈರಲ್ ಆಗಿದ್ದು, ಎಲ್ಲಿ ನೊಡಿದ್ರು ಕುರುಕ್ಷೇತ್ರ ಲುಕ್ ರಾರಾಜಿಸುತ್ತಿದೆ. ಹೋಟೆಲ್, ಆಟೋ, ಬೈಕ್ ಗಳಲ್ಲಿ ದರ್ಶನ್ ಪೋಟೊಗಳು ಕಾಣಿಸುತ್ತಿವೆ. ಹಾಗಾದ್ರೆ ದರ್ಶನ್ 'ಕುರುಕ್ಷೇತ್ರ' ಲುಕ್ ಎಲ್ಲೇಲ್ಲಿ ವೈರಲ್ ಆಗಿದೆ ? ಮುಂದೆ ಓದಿ

ಹೋಟೆಲ್ ನಲ್ಲಿ ಕುರುಕ್ಷೇತ್ರ

ಹೋಟೆಲ್ ನಲ್ಲಿ ಕುರುಕ್ಷೇತ್ರ

ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ಗೆ ದರ್ಶನ್ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಹೋಟೆಲ್ ತುಂಬೆಲ್ಲಾ ದರ್ಶನ್ ಅವರ 'ಕುರುಕ್ಷೇತ್ರ'ದ ಪೋಸ್ಟರ್ ಅಂಟಿಸಿ ಪ್ರಚಾರ ಮಾಡುತ್ತಿದ್ದಾರೆ. ಸದ್ಯ ಆ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೈಕ್ ಗಳ ಮೇಲೆ ಕುರುಕ್ಷೇತ್ರ

ಬೈಕ್ ಗಳ ಮೇಲೆ ಕುರುಕ್ಷೇತ್ರ

ಕನ್ನಡ ಸಿನಿಮಾದ ಹೆಸರುಗಳನ್ನ ಬೈಕ್ ಹಳೆ ಸೀಟ್ ಕವರ್ ಗಳ ಮೇಲೆ ಹಾಕಿಕೊಳ್ಳೊದು ನೋಡಿರಬಹುದು. ಈಗ ಬೈಕ್ ಬಂಪರ್ ಪ್ಲೇಟ್ ಹಾಗೂ ಮುಂದೆ ಹೆಡ್ ಲೈಟ್ ಮಾಸ್ಕ್ ಗಳ ಮುಂದೆ ಕುರುಕ್ಷೇತ್ರ ಚಿತ್ರದ ಫಸ್ಟ್ ಲುಕ್ ಸ್ಟಿಕ್ಕರ್ ಗಳು ರಾರಾಜಿಸುತ್ತಿವೆ.

ಆಟೋಗಳಲ್ಲಿ ಚಾಲೆಂಜಿಂಗ್ ಸ್ಟಾರ್

ಆಟೋಗಳಲ್ಲಿ ಚಾಲೆಂಜಿಂಗ್ ಸ್ಟಾರ್

ಕೇವಲ ಹೋಟೆಲ್, ಬೈಕ್ ಗಳಲ್ಲಿ ಮಾತ್ರವಲ್ಲದೆ ಆಟೋಗಳಲ್ಲಿಯೂ 'ಕುರುಕ್ಷೇತ್ರ' ಚಿತ್ರದ ಫೋಟೋಗಳನ್ನ ಅಭಿಮಾನಿಗಳು ಹಾಕಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಚಿಕ್ಕ ಸ್ಟ್ಯಾಂಡಿ ರೀತಿಯಲ್ಲಿ ದರ್ಶನ್ ಅಭಿನಯದ ಕುರುಕ್ಷೇತ್ರದ ಫೋಟೋವನ್ನ ತಮ್ಮ ಆಟೋದಲ್ಲಿ ಹಾಕಿಕೊಂಡಿರುವ ಫೋಟೋ ಸಖತ್ ಫೇಮಸ್ ಆಗಿದೆ.

ಎಲ್ಲೆಡೆ ದರ್ಶನ್ ಕುರುಕ್ಷೇತ್ರದ್ದೇ ಸುದ್ದಿ

ಎಲ್ಲೆಡೆ ದರ್ಶನ್ ಕುರುಕ್ಷೇತ್ರದ್ದೇ ಸುದ್ದಿ

ಕುರುಕ್ಷೇತ್ರ ಸಿನಿಮಾದ ಸುದ್ದಿ ಸಖತ್ ವೈರಲ್ ಆಗ್ತಿದೆ. ಕನ್ನಡ ಸಿನಿಮಾರಂಗದಲ್ಲಿ ಐತಿಹಾಸಿಕ ಸಿನಿಮಾಗಳೇ ಕಡಿಮೆ. ಆಗೊಂದು ಹೀಗೊಂದು ಬರುವ ಚಿತ್ರಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾದಿರುತ್ತಾರೆ. ಸದ್ಯ, ಕನ್ನಡ ಸಿನಿ ರಸಿಕರು ಕಾದಿರುವುದು ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರಕ್ಕಾಗಿ. ಚಿತ್ರೀಕರಣದ ಕೊನೆಯ ಹಂತ ತಲುಪಿರುವ 'ಕುರುಕ್ಷೇತ್ರ'ದ ಫಸ್ಟ್ ಲುಕ್ ಎಲ್ಲೆಡೆ ವೈರಲ್ ಆಗಿದೆ.

More from Filmibeat

English summary
Photo of Kurukshetra starring Kannada actor Darshan is viral. Everywhere the news of Kurukshetra cinema is flowing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X