For Quick Alerts
  ALLOW NOTIFICATIONS  
  For Daily Alerts

  'ಗಂಡುಗಲಿ ಮದಕರಿ ನಾಯಕ' ಚಿತ್ರದ ಟೈಟಲ್ ಅಲ್ಲ: ಅಧಿಕೃತ ಟೈಟಲ್ ಬಹಿರಂಗ

  |
  Sumalatha wish Darshan for his upcoming movie 'Gandugali madakari Nayaka'

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಮದಕರಿ ನಾಯಕ ಚಿತ್ರದ ಮುಹೂರ್ತ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಈಗಾಗಲೆ ಅಂದರೆ ಡಿಸೆಂಬರ್ 2ಕ್ಕೆ ಚಿತ್ರತಂಡ ಚಿತ್ರದುರ್ಗಕ್ಕೆ ತೆರಳಿ ಸ್ಕ್ರಿಪ್ಟ್ ಪೂಜೆ ಮಾಡಿ ಮುಹೂರ್ತ ಮಾಡಿಕೊಂಡಿತ್ತು. ವಿಶೇಷ ಅಂದರೆ ಮದಕರಿ ನಾಯಕ ಚಿತ್ರದ ಟೈಟಲ್ 'ಗಂಡುಗಲಿ ಮದಕರಿ ನಾಯಕ' ಎಂದು ಎಲ್ಲಕಡೆ ಸುದ್ದಿಯಾಗಿತ್ತು. ಎಲ್ಲರು ಕೂಡ ಗಂಡುಗಲಿ ಮದಕರಿ ನಾಯಕ ಎಂದೆ ಕರೆಯುತ್ತಿದ್ದರು.

  ಆದರೀಗ ಚಿತ್ರದ ಅಧಿಕೃತ ಟೈಟಲ್ ರಿವೀಲ್ ಆಗಿದೆ. ಮದಕರಿ ನಾಯಕ ಚಿತ್ರದ ಅಧಿಕೃತ ಟೈಟಲ್ 'ರಾಜವೀರ ಮದಕರಿನಾಯಕ' ಎಂದು ಚಿತ್ರತಂಡ ಬಹಿರಂಗಪಡಿಸಿದೆ. ಮದಕರಿ ನಾಯಕ ಚಿತ್ರ ಸೆಟ್ಟೇರಿದಾಗಿನಿಂದಲೂ ಗಂಡುಗಲಿ ಮದಕರಿ ನಾಯಕ ಎನ್ನುವ ಟೈಟಲ್ ವೈರಲ್ ಆಗಿತ್ತು.

  ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತ

  ಅಧಿಕೃತ ಟೈಟಲ್ ಅನ್ನು ಚಿತ್ರತಂಡ ಎಲ್ಲಿಯ ಈ ಬಗ್ಗೆ ಬಹಿರಂಗ ಪಡಿಸಿರಲಿಲ್ಲ. ಆದರಿವತ್ತು ಚಿತ್ರದ ಮುಹೂರ್ತ ಅದ್ದೂರಿಯಾಗಿ ಮಾಡಿಕೊಂಡು ಟೈಟಲ್ ಕೂಡ ರಿವೀಲ್ ಮಾಡಿದ್ದಾರೆ. ಇನ್ನೇನಿದ್ದರು ದರ್ಶನ್ 'ರಾಜವೀರ ಮದಕರಿನಾಯಕ'ನಾಗಿ ಆಳ್ವಿಕೆ ಮಾಡುವುದೊಂದೆ ಬಾಕಿ ಇದೆ. ಚಿತ್ರಕ್ಕೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ.

  'ರಾಜವೀರ ಮದಕರಿ ನಾಯಕ' ಸಿನಿಮಾ ರಾಜೇಂದ್ರ ಸಿಂಗ್ ಬಾಬು ಅವರ ಕನಸಿನ ಸಿನಿಮಾ. ಅನೇಕ ವರ್ಷಗಳಿಂದ ಮದಕರಿ ನಾಯಕ ಸಿನಿಮಾ ಮಾಡಬೇಕು ಎನ್ನುವ ಕನಸಿಟ್ಟುಕೊಂಡಿದ್ದ ರಾಜೇಂದ್ರ ಸಿಂಗ್ ಬಾಬು ಕನಸು ಈಗ ದರ್ಶನ್ ನಾಯಕನಾಗಿ ನಟಿಸುವ ಮೂಲಕ ನನಸಾಗುತ್ತಿದೆ.

  'ರಾಜವೀರ ಮದಕರಿನಾಯಕ' ರಾಜ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಇಂದು ಮುಹೂರ್ತ ಮಾಡಿಕೊಂಡಿರುವ 'ರಾಜವೀರ ಮದಕರಿ ನಾಯಕ' ಚಿತ್ರೀಕರಣಕ್ಕೆ ಈಗಾಗಲೆ ಚಿತ್ರದುರ್ಗ ಸಜ್ಜಾಗಿದೆ. ದುರ್ಗದಲ್ಲಿ ಅದ್ದೂರಿಯಾಗಿ ಸೆಟ್ ಕೂಡ ನಿರ್ಮಾಣವಾಗಿದೆ.

  Read more about: darshan ದರ್ಶನ್
  English summary
  Kannada actor Darshan sterr Madakari Nayakana movie title Rajaveera Madakari nayaka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X