Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಪ್ಪು ನಿಧನ ಹೊಂದಿದಾಗ ದರ್ಶನ್ 15 ದಿನ ಕ್ರಾಂತಿ ಶೂಟಿಂಗ್ ನಿಲ್ಲಿಸಿದ್ದ ವಿಷಯ ಗೊತ್ತಾ ಎಂದ ನಿರ್ಮಾಪಕ!
ಚಂದನವನದಲ್ಲಿ ಫ್ಯಾನ್ ವಾರ್ ಈಗ ಸಿಕ್ಕಾಪಟ್ಟೆ ಹೆಚ್ಚಿದೆ. ಹೆಚ್ಚಾಗಿದೆ ಎನ್ನುವುದಕ್ಕಿಂತ ಮಿತಿ ಮೀರಿದೆ ಎನ್ನಬಹುದು. ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿದ್ದ ಈ ಫ್ಯಾನ್ ವಾರ್ ಇದೀಗ ಹೊರಗೂ ಸಹ ಹಬ್ಬಿದೆ. ಅದರಲ್ಲಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು.
ಇನ್ನು ಈ ಫ್ಯಾನ್ ವಾರ್ ವಿಷಯವನ್ನು ಸದುಪಯೋಗಪಡಿಸಿಕೊಂಡ ಮೂರನೇ ವ್ಯಕ್ತಿಗಳು ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದು ವಿಕೃತಿ ಮೆರೆದಿದ್ದರು. ಇನ್ನು ಯಾರೋ ಮಾಡಿದ ಕೆಲಸದಿಂದ ಕೆಸರೆರಚಾಟ ನಡೆಸಿಕೊಂಡಿದ್ದು ಮಾತ್ರ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು. ಹೌದು, ಈ ಕೃತ್ಯವನ್ನು ಎಸಗಿದ್ದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳೇ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದರೆ, ಇದನ್ನು ಯಾವುದೇ ಕಾರಣಕ್ಕೂ ಅಪ್ಪು ಫ್ಯಾನ್ಸ್ ಮಾಡಿಲ್ಲ ಎಂದು ಪುನೀತ್ ಫ್ಯಾನ್ಸ್ ಪ್ರತಿವಾದಿಸಿದ್ದರು.
ಹೀಗೆ ಇಬ್ಬರ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಕಿಚ್ಚು ಮತ್ತಷ್ಟು ಹೆಚ್ಚಾಯಿತು. ಇದೊಂದು ಘಟನೆ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿತು. ಅಷ್ಟೇ ಅಲ್ಲದೇ ಇದರಲ್ಲಿ ಸ್ಟಾರ್ ವಾರ್ ಸಹ ಇದೆ, ಹೀಗಾಗಿಯೇ ಯಾರೂ ಸಹ ಆ ವಿಷಯದ ಕುರಿತು ತುಟಿ ಬಿಚ್ಚುತ್ತಿಲ್ಲ ಎಂಬ ಅಭಿಪ್ರಾಯವನ್ನೂ ಸಹ ಸಿನಿ ರಸಿಕರು ವ್ಯಕ್ತಪಡಿಸಿದ್ದರು. ಈ ಕುರಿತಾಗಿ ನಿರ್ಮಾಪಕ ಉಮೇಶ್ ಬಣಕರ್ ಪ್ರತಿಕ್ರಿಯಿಸಿದ್ದು, ಇಲ್ಲಿ ಯಾವುದೇ ಸ್ಟಾರ್ ವಾರ್ ಇಲ್ಲ, ಎಲ್ಲವೂ ಸಹ ಕಿಡಿಗೇಡಿಗಳ ಕೆಲಸ ಎಂಬುದನ್ನು ತಿಳಿಸಿದ್ದಾರೆ.

ಅಪ್ಪು ನಿಧನ ಹೊಂದಿದ ವಿಷಯ ತಿಳಿದು 15 ದಿನ ಶೂಟಿಂಗ್ ನಿಲ್ಲಿಸಿದ್ರು ದರ್ಶನ್
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್ ಇದೆ ಎಂಬ ವಿಷಯದ ಕುರಿತು ಮಾತನಾಡಿದ ಉಮೇಶ್ ಬಣಕರ್ ಅದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ವಿಷಯ ತಿಳಿದಾಗ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ದರ್ಶನ್ ಆ ಕೂಡಲೇ ಶೂಟಿಂಗ್ ನಿಲ್ಲಿಸಿದರು ಹಾಗೂ 15 ದಿನಗಳ ಕಾಲ ಯಾವುದೇ ಶೂಟಿಂಗ್ ಬೇಡ ಎಂದು ಹೇಳಿದ್ದರು, ಇಬ್ಬರ ನಡುವೆ ಅಂತಹ ಸ್ನೇಹ ಇತ್ತು ಎಂದು ತಿಳಿಸಿದರು.

ಈ ಫ್ಯಾನ್‌ವಾರ್ ಎಲ್ಲಾ ಕಿಡಿಗೇಡಿಗಳ ಕೆಲಸ
ಇನ್ನೂ ಮುಂದುವರಿದು ಮಾತನಾಡಿದ ಬಣಕರ್ ಈ ಫ್ಯಾನ್‌ವಾರ್ ಎಂಬುದನ್ನು ನಿಜವಾದ ಅಭಿಮಾನಿಗಳು ಮಾಡಲು ಸಾಧ್ಯವಿಲ್ಲ, ಇಬ್ಬರ ಮಧ್ಯೆ ತಂದಿಟ್ಟು ತಮಾಷೆ ನೋಡಿ ತೀಟೆ ತೀರಿಸಿಕೊಳ್ಳುವವರು ಮಾಡುವ ಕೆಲಸವಿದು ಎಂದು ಹೇಳಿಕೆ ನೀಡಿದರು. ಹೇಗಿದ್ದರೂ ಜಿಯೋದಲ್ಲಿ ಮೂರು ತಿಂಗಳಿಗಳಿಗೊಮ್ಮೆ ಹಣ ಕಟ್ಟಿ ಡೇಟಾ ಬಳಸುವ ಅವಕಾಶವಿದೆ, ಹೀಗಾಗಿ ಕೆಲಸವಿಲ್ಲದ ಕಿಡಿಗೇಡಿಗಳು ಇಬ್ಬರ ಅಭಿಮಾನಿಗಳ ನಡುವೆ ಅಂತರ್ಜಾಲ ಬಳಸಿ ಬೆಂಕಿ ಹಚ್ಚುತ್ತಿದ್ದಾರೆ ಎಂದು ತಿಳಿಸಿದರು.

ವಿನೋದ್ ಪ್ರಭಾಕರ್ ಹೇಳಿದ್ದೂ ಸಹ ಇದೇ
ಇನ್ನು ದರ್ಶನ್ ಆಪ್ತ ಗೆಳೆಯರಲ್ಲಿ ಒಬ್ಬರಾದ ವಿನೋದ್ ಪ್ರಭಾಕರ್ ಸಹ ದರ್ಶನ್ ಅವರು ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದಾಗ ಯಾವ ರೀತಿ ಪ್ರತಿಕ್ರಿಯಿಸಿದ್ರು ಎಂಬುದನ್ನು ತಿಳಿಸಿದ್ದರು. ಪುನೀತ್ ದರ್ಶನ್ ಪಡೆದು ಹಿಂದಿರುವಾಗ ಕಾರಿನಲ್ಲಿ ದರ್ಶನ್ ಪುನೀತ್ ಅವರ ಜತೆಗಿನ ಹಳೆಯ ನೆನಪುಗಳನ್ನು ನೆನೆದು ಭಾವುಕರಾಗಿದ್ರು ಹಾಗೂ ಅವರು ಎಷ್ಟು ತಲೆ ಕೆಡಿಸಿಕೊಂಡಿದ್ರು ಎಂಬುದು ಅಲ್ಲಿದ್ದವರಿಗೆ ಮಾತ್ರ ಗೊತ್ತು ಎಂದು ವಿನೋದ್ ಪ್ರಭಾಕರ್ ಹೇಳಿಕೆ ನೀಡಿದ್ದರು.

ಇಬ್ಬರೂ ಸಹ ಫ್ಯಾನ್ ವಾರ್ ಬೆಂಬಲಿಸದ ನಟರು
ಇನ್ನು ದರ್ಶನ್ ಆಗಲಿ ಅಥವಾ ಪುನೀತ್ ರಾಜ್‌ಕುಮಾರ್ ಆಗಲಿ ತಮ್ಮ ಅಭಿಮಾನಿಗಳಿಗೆ ಫ್ಯಾನ್ ವಾರ್ ಮಾಡಲು ಪ್ರೇರೇಪಿಸುವಂತ ಹೇಳಿಕೆಗಳನ್ನು ನೀಡಿಲ್ಲ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿತ್ತಾಡುವಾಗ ಪ್ರತಿಕ್ರಿಯಿಸಿದ್ದ ದರ್ಶನ್ ಹಾಗೂ ಪುನೀತ್ ಇನ್ನೊಬ್ಬ ನಟನ ಬಗ್ಗೆ ಕೀಳಾಗಿ ಮಾತನಾಡುವವರು ನಮ್ಮ ಅಭಿಮಾನಿಗಳಾಗಲು ಸಾಧ್ಯವಿಲ್ಲ, ನಿಜವಾದ ಅಭಿಮಾನಿಗಳು ಇನ್ನೊಬ್ಬ ನಟನ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು.