ಮಧ್ಯರಾತ್ರಿ ಮನೆಗೆ ಬಂದು ಪ್ರಜ್ವಲ್ ಗೆ ಸರ್ಪೈಸ್ ನೀಡಿದ ದರ್ಶನ್
ನಿನ್ನೆ (ಜುಲೈ 4) ರಂದು ನಟ ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಾರಿಯ ಅವರ ಹುಟ್ಟುಹಬ್ಬವನ್ನು ನಟ ದರ್ಶನ್ ವಿಶೇಷ ಆಗುವಂತೆ ಮಾಡಿದ್ದಾರೆ.
ಪ್ರಜ್ವಲ್ ಹುಟ್ಟುಹಬ್ಬದ ದಿನ ಮಧ್ಯರಾತ್ರಿ ಮನೆಗೆ ಬಂದು ದರ್ಶನ್ ಸರ್ಪೈಸ್ ನೀಡಿದ್ದಾರೆ. ದರ್ಶನ್ ಬರುವ ಸೂಚನೆ ಕೂಡ ಸಿಕ್ಕಿರದ ಪ್ರಜ್ವಲ್ ದರ್ಶನ್ ರನ್ನು ನೋಡಿ ಖುಷಿಯಾಗಿದ್ದಾರೆ.
ಇದೇ ಸಮಯದಲ್ಲಿ ನಟ ದೇವರಾಜ್ ದಂಪತಿ, ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಒಟ್ಟಿಗೆ ಒಂದು ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಜ್ವಲ್ ಹಂಚಿಕೊಂಡಿದ್ದಾರೆ.

ಪ್ರಜ್ವಲ್ ಸರ್ಕಾರಿ ಶಾಲೆ ದತ್ತು ತಗೆದುಕೊಂಡಿದ್ದು, ಈ ಬಗ್ಗೆ ದರ್ಶನ್ ಖುಷಿಯಿಂದ ಟ್ವೀಟ್ ಮಾಡಿದ್ದರು. ''ನಮ್ಮ ಹುಡ್ಗ ಪ್ರಜ್ಜು ಒಂದು ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸುದ್ಧಿ ಕೇಳಿ ತುಂಬಾನೇ ಖುಷಿಯಾಯ್ತು. ಇಂಥ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಹೀಗೆ ಸದಾ ಮುಂಚೂಣಿಯಲ್ಲಿರಲಿ ಎಂದು ಹಾರೈಸುತ್ತೇನೆ.'' ಎಂದಿದ್ದಾರೆ ದರ್ಶನ್.
ದೇವರಾಜ್ ಕುಟುಂಬಕ್ಕೆ ದರ್ಶನ್ ಬಹಳ ಆಪ್ತರು. ಇತ್ತೀಚಿಗೆ 'ತಾರಕ್', 'ಯಜಮಾನ' ಹಾಗೂ 'ಅಮರ್' ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ. ಪ್ರಜಲ್ ದೇವರಾಜ್ ಮುಂದಿನ ಸಿನಿಮಾದಲ್ಲಿ ದರ್ಶನ್ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ.


Click it and Unblock the Notifications











