»   » 'ಕೌಂಟರ್ ಡೈಲಾಗ್'ಗಳ ಸಮರಕ್ಕೆ ಚಾಲೆಂಜಿಂಗ್ ಸ್ಟಾರ್ ಬ್ರೇಕ್.!

'ಕೌಂಟರ್ ಡೈಲಾಗ್'ಗಳ ಸಮರಕ್ಕೆ ಚಾಲೆಂಜಿಂಗ್ ಸ್ಟಾರ್ ಬ್ರೇಕ್.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಕೌಂಟರ್ ಡೈಲಾಗ್ ಸಂಸ್ಕ್ರತಿ ಹೆಚ್ಚಾಗಿದೆ. ಇದರಿಂದ ಸ್ಟಾರ್ ನಟರ ಮಧ್ಯೆ ವಾರ್ ನಡೆಯುತ್ತಿದೆ ಎಂಬ ಮಾತು ಕೂಡ ಇದೆ.

ಇತ್ತೀಚೆಗಷ್ಟೇ ನಟ ಧ್ರುವ ಸರ್ಜಾ 'ಭರ್ಜರಿ' ಚಿತ್ರದಲ್ಲಿ ಒಂದು ಡೈಲಾಗ್ ಹೊಡೆದಿದ್ದರು. ಇದು ಗಾಂಧಿನಗರದಲ್ಲಿ ಸಖತ್ ಹವಾ ಸೃಷ್ಟಿಸಿತ್ತು. ಯಾಕಂದ್ರೆ, ಈ ಡೈಲಾಗ್ ಕನ್ನಡದ ಸ್ಟಾರ್ ನಟರಿಗೆ ಕೌಂಟರ್ ಕೊಟ್ಟಂತಿದೆ ಎಂಬ ಮಾತು ಕೇಳಿ ಬಂತು.

ಈ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಕೌಂಟರ್ ಡೈಲಾಗ್ ವಿವಾದದ ಬಗ್ಗೆ ಮಾತನಾಡಿದ್ದು, ಎಲ್ಲರ ಕೌಂಟರ್ ಗಳಿಗೂ ಬ್ರೇಕ್ ಹಾಕಿದ್ದಾರೆ. ಹಾಗಿದ್ರೆ, ದರ್ಶನ್ ಏನಂದ್ರು? ಮುಂದೆ ಓದಿ......

ಡೈಲಾಗ್ ಸಮರಕ್ಕೆ 'ದಾಸ' ಎಂಟ್ರಿ

ಧ್ರುವ ಸರ್ಜಾ 'ಭರ್ಜರಿ' ಚಿತ್ರದಲ್ಲಿ ಹೊಡೆದಿದ್ದ ಡೈಲಾಗ್ ನಿಂದ ಇಂಡಸ್ಟ್ರಿಯಲ್ಲಿ ಕೌಂಟರ್ ಡೈಲಾಗ್ ಸಮರ ಚರ್ಚೆಯಾಗಿತ್ತು. ಇದು ರಾಕಿಂಗ್ ಸ್ಟಾರ್ ಯಶ್ ಗೆ ಕೊಟ್ಟಿರೋ ಕೌಂಟರ್ ಎಂದು ಅನೇಕರು ಮಾತನಾಡಿಕೊಂಡರು. ಆದ್ರೆ, ಇದಕ್ಕೆ ದಾಸ ಉತ್ತರ ಕೊಟ್ಟಿದ್ದಾರೆ.

'ಭರ್ಜರಿ' ಕಲೆಕ್ಷನ್ ಮಾಡಿದ ಬಹದ್ದೂರ್ ಗಂಡು: ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು

ಪಂಚಿಂಗ್ ಡೈಲಾಗ್ ಬಿಟ್ಟಿದ್ದರಂತೆ ದರ್ಶನ್

ಸದ್ಯಕ್ಕೆ ದರ್ಶನ್ ಅವರು ಪಂಚಿಂಗ್ ಡೈಲಾಗ್ ಗಳನ್ನ ಹೇಳುವುದು ಬಿಟ್ಟಿದ್ದಾರಂತೆ. ಹೀಗಂತ ಸ್ವತಃ ದರ್ಶನ್ ಅವರೇ ಮೈಸೂರು ಯುವ ದಸರಾ ವೇದಿಕೆಯಲ್ಲಿ ಅಭಿಮಾನಿಗಳ ಮುಂದೆ ಹೇಳಿದರು.

ನಾವು ಯಾರಿಗೂ ಕೌಂಟರ್ ಕೊಡ್ತಿಲ್ಲ

''ಇದಕ್ಕೆ ಅವರು ಕೌಂಟರ್ ಕೊಟ್ರು, ಅವರಿಗೆ ಇವರು ಕೌಂಟರ್ ಕೊಟ್ರು ಅಂತ ಹೇಳಿ ಕೇಳ್ತಾನೆ ಇರ್ತೀವಿ. ಆದ್ರೆ, ನಾವು ಯಾರಿಗೂ ಕೌಂಟರ್ ಕೊಡಲ್ಲ'' - ದರ್ಶನ್, ನಟ

ನಾವು ಪಾತ್ರಧಾರಿ ಮಾತ್ರ

''ಯಾರೋ ಡೈಲಾಗ್ ಬರೆಯುವವರು ಹೀಗೆ ಬರಿತಾರೆ. ಅದಕ್ಕೆ ನಿರ್ದೇಶಕರು ಹೀಗೆ ಬೇಕು ಅಂತ ಹೇಳ್ತಾರೆ. ನಾವು ಕಲಾವಿದರಾಗಿ ಮಾತ್ರ ಹೇಳ್ತಿವಿ. ಆಮೇಲೆ, ಅದನ್ನ, ಇದನ್ನ ನೋಡ್ಬಿಟ್ಟು, ಅವರಿಗೆ ಇವರು ಕೌಂಟರ್ ಕೊಟ್ರು, ಇವರಿಗೆ ಅವರು ಕೌಂಟರ್ ಕೊಟ್ರು ಅಂತ ಲಿಂಕ್ ಮಾಡ್ತಾರೆ'' - ದರ್ಶನ್, ನಟ

ಲಿಂಕ್ ಮಾಡ್ತಾರೆ ಅಷ್ಟೇ

''ಖಂಡಿತಾ ಯಾರಿಗೂ ಯಾರೂ ಕೌಂಟರ್ ಕೊಡ್ತಿಲ್ಲ. ಎಲ್ಲರೂ ಅವರವರ ಹೊಟ್ಟೆ ಪಾಡಿಗೆ ಮಾಡ್ತಿದ್ದಾರೆ. ಎಲ್ಲರು ಅವರವರ ದಾರಿ ನೋಡ್ಕೊಂಡು ಹೋಗ್ತಿದ್ದಾರೆ ಅಷ್ಟೇ'' - ದರ್ಶನ್, ನಟ

English summary
Challenging star Darshan Talk About Dialogue war in Kannada industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada