»   » ಸೃಜನ್ 'ಹ್ಯಾಪಿ ಜರ್ನಿ' ನೋಡಿದ ದರ್ಶನ್ ಹೇಳಿದ್ದೇನು?

ಸೃಜನ್ 'ಹ್ಯಾಪಿ ಜರ್ನಿ' ನೋಡಿದ ದರ್ಶನ್ ಹೇಳಿದ್ದೇನು?

Posted By:
Subscribe to Filmibeat Kannada

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ 'ಹ್ಯಾಪಿ ಜರ್ನಿ' ಸಿನಿಮಾ ಈ ವಾರವಷ್ಟೇ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. 'ಹ್ಯಾಪಿ ಜರ್ನಿ' ಸಿನಿಮಾವನ್ನ ಪ್ರೇಕ್ಷಕರು ಹ್ಯಾಪಿಯಿಂದಲೇ ನೋಡಿ ಖುಷಿಪಟ್ಟಿದ್ದಾರೆ.

ಇದಕ್ಕೂ ಮುಂಚೆ ಸೃಜನ್ ಅವರ ಚಿತ್ರವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕ್ಷಿಸಿದ್ದರು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ದರ್ಶನ್ ಸೇರಿದಂತೆ ಹಲವು ತಾರೆಯರು ಸಿನಿಮಾ ನೋಡಿದ್ದರು.

Darshan Talk About happy journey Movie

'ಹ್ಯಾಪಿ ಜರ್ನಿ' ಚಿತ್ರದ ಬಗ್ಗೆ ದರ್ಶನ್ ಹೇಳಿದ್ದೇನು?

''ನಿಜವಾಗಲೂ ಒಂದೊಳ್ಳೆ ಸಿನಿಮಾ. ಸೃಜನ್ ಅವರು ತುಂಬ ಮಾತಾಡ್ತಾರೆ ಅಂತಾರೆ. ಆದ್ರೆ, ಈ ಚಿತ್ರದಲ್ಲಿ ಮಾತು ಕಮ್ಮಿ ಮಾಡಿ, ಕೆಲಸ ಮಾಡಿದ್ದಾರೆ. ಹ್ಯಾಪಿ ಜರ್ನಿಯಲ್ಲಿ 'ಥ್ರಿಲ್ಲಿಂಗ್ ಎಲಿಮೆಂಟ್ಸ್ ಚೆನ್ನಾಗಿದೆ. ಫೈಟ್ಸ್ ತುಂಬಾ ಚೆನ್ನಾಗಿದೆ. ಇದೊಂದು ಪೈಸಾ ವಸೂಲ್ ಸಿನಿಮಾ'' ಎಂದು ತಮ್ಮ ಗೆಳೆಯನ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಇಂತಹ ನಿರ್ಧಾರ ಮಾಡಿದ್ಯಾಕೆ?

ಸೃಜನ್ ಲೋಕೇಶ್ ಅಭಿನಯದ 'ಹ್ಯಾಪಿ ಜರ್ನಿ' ಈ ಚಿತ್ರವನ್ನು ಶ್ಯಾಮ್ ಶಿವಮೊಗ್ಗ ನಿರ್ದೇಶನ ಮಾಡಿದ್ದು, ಅಮಿತಾ ಸದಾಶಿವ್ ಚಿತ್ರದ ನಾಯಕಿಯಾಗಿದ್ದಾರೆ. ಕುರಿ ಪ್ರತಾಪ್ ಚಿತ್ರದ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ.

English summary
kannada actor, challenging star darshan watch srujan lokesh Starrer Happy Journey Movie
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada