ಅಕ್ಟೋಬರ್ ನಲ್ಲಿ 'ಡೆವಿಲ್' ಅಬ್ಬರ ಶುರು ; ಬರೆದಿಟ್ಕೊಳ್ಳಿ ಎಂದ ಕಾಟೇರ...!
ವರ್ಷಕ್ಕೆ ಎರಡು ಸಿನಿಮಾ ಮಾಡುವ ಸಂಪ್ರದಾಯ ಬೆಳೆಸಿಕೊಂಡು ಬಂದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಒಂದು ಸಿನಿಮಾ ಮುಗಿಸಿ, ಅದು ಪೋಸ್ಟ್ ಪ್ರೊಡಕ್ಷನ್ ಹಂತ ತಲುಪುತ್ತಿದ್ದಂತೇ ಮತ್ತೊಂದು ಸಿನಿಮಾ ಚಿತ್ರೀಕರಣ, ತಯಾರಿಯಲ್ಲಿ ತೊಡಗಿಕೊಳ್ಳುವ ದರ್ಶನ್, ಅಕ್ಟೋಬರ್ ಗೆ ಮತ್ತೊಂದು ಹಬ್ಬಕ್ಕೆ ಸಿದ್ಧರಾಗಿ ಎಂದು ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.
ಹೌದು, ಕಾಟೇರ ಚಿತ್ರದ 50ನೇ ದಿನದ ಸಂಭ್ರಮದಲ್ಲಿ ಮಿಂದೆದ್ದ ದರ್ಶನ್, ಇದೇ ಸಮಯದಲ್ಲಿ ತಮ್ಮ ಮುಂದಿನ ಚಿತ್ರ ಡೆವಿಲ್ ಚಿತ್ರದ ಬಿಡುಗಡೆ ಕುರಿತು ಅಭಿಮಾನಿಗಳ ಮನದಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಚಿತ್ರಮಂದಿರಗಳನ್ನು ಖಾಲಿ ಇಟ್ಟುಕೊಳ್ಳಿ, ಮರೆಯದೇ ನಮಗೆ ಚಿತ್ರಮಂದಿರ ಕೊಡಿ ಎಂದು ಹಕ್ಕೊತ್ತಾಯ ಮಾಡಿದರು. ಏನಾದರೂ ಮಾಡಿ ಧಮ್ ಕಟ್ಟಿಯಾದರೂ ಕೆಲಸ ಮಾಡೋಣ, ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಿಗೆ ಡೆವಿಲ್ ಚಿತ್ರವನ್ನ ಬಿಡುಗಡೆ ಮಾಡೋಣ ಎಂಬ ಮನವಿ ಪತ್ರವನ್ನ ನಾನಾಗಲೇ ಪ್ರಕಾಶ್ ಅವರಲ್ಲಿ ಸಲ್ಲಿಸಿದ್ದೇನೆ ಎಂದರು.

ಮಲ್ಟಿಪ್ಲೆಕ್ಸ್ ನಲ್ಲಿ ಹೀಗೆಲ್ಲ ಮಾಡೋಕೆ ಆಗುತ್ತಾ..?
ಇನ್ನೂ ಇದೇ ಸಮಯದಲ್ಲಿ ಮಲ್ಟಿಪ್ಲೆಕ್ಸ್ ನವರ ಮೇಲೆ ಕೂಡ ದರ್ಶನ್ ಕಿಡಿ ಕಾರಿದರು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ನಿಂತು ಮಾತನಾಡುವುದಕ್ಕೆ ನಮಗೆ ಅಧಿಕಾರ ಇದೆ. ಇದೇ ರೀತಿ ಮಲ್ಟಿಪ್ಲೆಕ್ಸ್ ನಲ್ಲಿ ಹೋಗಿ ಸಂಭ್ರಮಾಚರಣೆ ಮಾಡೋಕೆ ಆಗುತ್ತಾ ಎಂಬ ಪ್ರಶ್ನೆಯನ್ನ ಕೇಳಿದರು. ಮಲ್ಟಿಪ್ಲೆಕ್ಸ್ಗಳಲ್ಲಿ ಬಹಳ ವೇರಿಯೇಷನ್ ನಡೆಯುತ್ತಿರುತ್ತದೆ. ಆದರೆ ಸಿಂಗಲ್ ಸ್ಕ್ರೀನ್ನಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್ನಲ್ಲಿಯೂ ಇಂತಿಷ್ಟೆಂದು ನಿರ್ಮಾಪಕರ ಕೈಗೆ ಸೇರುತ್ತದೆ. ಸಿಂಗಲ್ ಸ್ಕ್ರೀನ್ಗಳಿಂದಲೇ ಸ್ಟಾರ್ಗಳು ಹುಟ್ಟೋದು, ನಿರ್ಮಾಪಕರು ಬದುಕೋದು ಎಂದರು ಚಾಲೆಂಜಿಂಗ್ ಸ್ಟಾರ್ ದರ್ಶನ್
ಪ್ರಸನ್ನ ಚಿತ್ರಮಂದಿರದ ಜೊತೆ ಅವಿನಾಭಾವ ಸಂಬಂಧ..!
ಕಾಟೇರ ಚಿತ್ರದ 50 ದಿನಗಳ ಸಂಭ್ರಮಾಚರಣೆಗೆ ವೇದಿಕೆಯಾಗಿದ್ದ ಪ್ರಸನ್ನ ಚಿತ್ರಮಂದಿರದ ಅಂಗಳದಲ್ಲಿ ಮಾತನಾಡಿದ ದರ್ಶನ್, ಪ್ರಸನ್ನ ಚಿತ್ರಮಂದಿರದ ಜೊತೆ ತಮಗೆ ಇರುವ ನಂಟಿನ ಗುಟ್ಟನ್ನ ಬಿಚ್ಚಿಟ್ಟರು.
ಅಂಬರೀಶ' ಚಿತ್ರದ ಬಿಡುಗಡೆ ಸಮಯದಲ್ಲಿ, ಬೆಂಗಳೂರಿನ ಕೆಜಿ ರಸ್ತೆಯಲ್ಲಿ ನಮಗೆ ಪ್ರಮುಖ ಚಿತ್ರಮಂದಿರ ಸಿಕ್ಕಿರಲಿಲ್ಲ ಆಗ ನಾನು ಸಾಕಷ್ಟು ಗಲಾಟೆ ಮಾಡಿದ್ದೆ ಎಂದ ದರ್ಶನ್, ಅಪ್ಪಿ-ರಾಘು ಬಳಿ ಫೋನ್ನಲ್ಲಿ ಏನೇನೋ ಮಾತನಾಡಿದ್ದೆ ಎಂದರು. ಮನೆಯ ಬಳಿ ಹೋಗಿಯೂ ಗಲಾಟೆ ಮಾಡಿದ್ದಿದೆ ಎಂದರು. ಕೊನೆಗೆ ಅಯ್ಯೋ ಇವನ ಸಹವಾಸ ಬೇಡ ಅಂದುಕೊಂಡು ಚಿತ್ರಮಂದಿರ ಕೊಟ್ಟಿದ್ದರು. ಆ ನಂತರ ಇದನ್ನೇ ನಾವು ಮುಖ್ಯ ಚಿತ್ರಮಂದಿರ ಮಾಡಿಕೊಂಡಿದ್ದೆವು ಎಂದು ಆ ದಿನಗಳನ್ನ ಮೆಲುಕು ಹಾಕಿದರು ದರ್ಶನ್


Click it and Unblock the Notifications