"ಚೆನ್ನಾಗಿ ತಿಂದ್ಕೊಂಡ್, ಉಂಡ್ಕೊಂಡು ಇದ್ದವನೇ ಸಾಯಂಕಾಲಕ್ಕೆ ಹೊರಟು ಹೋದ.. ಜಿಮ್ ಬಗ್ಗೆ ಭಯ ಯಾಕೆ?: ದರ್ಶನ್

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಚಿತ್ರಕ್ಕಾಗಿ ದೇಹ ಹುರಿಗೊಳಿಸಿ ಶರ್ಟ್‌ಲೆಸ್‌ ಆಗಿ ದರ್ಶನ ಕೊಟ್ಟಿದ್ದಾರೆ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ವರ್ಕೌಟ್‌ ಬಿಟ್ಟು ದರ್ಶನ್ ದಪ್ಪ ಆಗಿಬಿಟ್ಟಿದ್ದರು. ಕಳೆದ ಒಂದು ವರ್ಷದಿಂದ ಮತ್ತೆ ದೇಹ ದಂಡಿಸಿ ಹೆಚ್ಚು ಕಮ್ಮಿ 42 ಕೆಜಿ ತೂಕ ಇಳಿಸಿದ್ದಾರೆ.

ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡುವುದು ಒಳ್ಳೆಯದಲ್ಲ. ಇದರಿಂದ ಹೃದಯಾಘಾತದಂತಹ ಸಮಸ್ಯೆಗಳು ಎದುರಾಗಬಹುದು ಎಂದು ಹೇಳುತ್ತಿರುತ್ತಾರೆ. ಇತ್ತೀಚೆಗೆ ಕೆಲವರು ಚಿಕ್ಕ ವಯಸ್ಸಿಗೆ ಕೊನೆಯುಸಿರೆಳೆಯಲು ಇದೇ ಕಾರಣ ಎನ್ನುವವರು ಇದ್ದಾರೆ. ನಟ ದರ್ಶನ್ ಹಲವು ವರ್ಷಗಳಿಂದ ಜಿಮ್‌ನಲ್ಲಿ ವರ್ಕೌಟ್ ಮಾಡ್ತಾ ಬರ್ತಿದ್ದಾರೆ. ಈ ಹಿಂದೆ ಕೂಡ 'ಐರಾವತ' ಚಿತ್ರದಲ್ಲಿ ಶರ್ಟ್ ಲೆಸ್‌ ಆಗಿ ದರ್ಶನ ಕೊಟ್ಟು ಅಭಿಮಾನಿಗಳ ಮನ ಗೆದ್ದಿದ್ದರು. ಇನ್ನು 'ಕ್ರಾಂತಿ' ಚಿತ್ರದಲ್ಲಿ ಸಿಕ್ಸ್‌ಪ್ಯಾಕ್ ಗ್ರಾಫಿಕ್ಸ್ ಎನ್ನುವವರಿಗೂ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

ಆರ್‌ಜೆ ಸುನೀಲ ಫ್ರಾಂಕ್ ಕಾಲ್ಸ್ ಯೂಟ್ಯೂಬ್‌ ಚಾನಲ್‌ಗೆ ನಟ ದರ್ಶನ್ ಸಂದರ್ಶನ ನೀಡಿದ್ದಾರೆ. 'ಕ್ರಾಂತಿ' ಸಿನಿಮಾ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ತೂಕ ಇಳಿಸಿದ್ದರ ಬಗ್ಗೆಯೂ ವಿವರಿಸಿದ್ದಾರೆ.

42 ಕೆಜಿ ತೂಕ ಇಳಿಸಿದ್ದೀನಿ

42 ಕೆಜಿ ತೂಕ ಇಳಿಸಿದ್ದೀನಿ

"ಕ್ರಾಂತಿ ಚಿತ್ರಕ್ಕಾಗಿ ದಪ್ಪ ಇದ್ದವನು ಸಣ್ಣ ಆಗಿದ್ದೀನಿ. ಇಲ್ಲಿವರ್ಗೂ ಲೆಕ್ಕ ಹಾಕಿದ್ರೆ, ಅಂದಾಜು 42 ಕೆಜಿ ಕಮ್ಮಿ ಆಗಿದ್ದೀನಿ. ಲಾಕ್‌ಡೌನ್ ಸಮಯದಿಂದ ಇಲ್ಲಿವರೆಗೆ. ನಿನ್ನೆ ಶುರು ಮಾಡಿ ಇವತ್ತು ಕಮ್ಮಿ ಮಾಡಿದ್ದಲ್ಲ. ಒಂದು ಒಂದೂವರೆ ವರ್ಷದಿಂದ ತೂಕ ಕಮ್ಮಿ ಮಾಡಿಕೊಳ್ಳುತ್ತಿದ್ದೀನಿ. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಇಳಿಸಿಕೊಳ್ಳುತ್ತಿದ್ದೇನೆ" ಎಂದು ದರ್ಶನ್ ಹೇಳಿದ್ದಾರೆ.

"ಜಿಮ್ ಅಂದ್ರೆ ಭಯ ಯಾಕೆ"?

ಜಿಮ್ ಅಂದ್ರೆ ರಿಸ್ಕ್ ಅನ್ನಿಸಲಿಲ್ವಾ? ಕೆಲವ್ರು ಜಿಮ್ ಮಾಡಲು ಇತ್ತೀಚೆಗೆ ಹೆದರಿಕೊಳ್ಳುತ್ತಿದ್ದಾರೆ ಎನ್ನುವ ನಿರೂಪಕನ ಪ್ರಶ್ನೆಗೆ ಉತ್ತರಿಸಿರುವ ದರ್ಶನ್ "ಜಿಮ್ ಅಂದ್ರೆ ಭಯ ಯಾಕೆ. ತಿನ್ಕೊಂಡು ಉಣ್ಕೊಂಡು ಇದ್ದವನೇ ಸಾಯಂಕಾಲ ಹೊರಟೋದ. ನಾವು ನೋಡ್ತಿರುವಂತೆ, ನಮಗೆ ಗೊತ್ತಿರುವಂತೆ. ಅವನಿಗೆ ಬಿಪಿ, ಶುಗರ್ ಏನು ಇಲ್ಲ. ಬೆಳಗ್ಗೆ ತಿಂದ. ಮಧ್ಯಾಹ್ನ ಯಾಕೋ ಸ್ವಲ್ಪ ಕಷ್ಟ ಆಗುತ್ತಿದೆ ಎಂದ. 3 ಗಂಟೆಗೆ ಪಾರ್ಟಿನೇ ಇಲ್ಲ"

ಎಲ್ಲಾ ಹಣೆಬರಹ ಅಷ್ಟೇ

ಎಲ್ಲಾ ಹಣೆಬರಹ ಅಷ್ಟೇ

"ಒಂದು ಭಗವಂತ ಬರೆದಿಟ್ಟಿರುತ್ತಾನೆ. ನೀನು ಈ ಟೈಂಗೆ ಬರ್ಬೇಕು ಅಂತ. ಅದಕ್ಕೆ ಫಿಕ್ಸ್ ಆಗಿಬಿಡಿ. ಏನೇನೋ ಥಿಂಕ್ ಮಾಡ್ಬೇಡಿ. ಇದು ಮಾಡಿದ್ರೆ, ಅದು ಆಗ್ತೀನಿ. ಅದು ಮಾಡಿದ್ರೆ ಇದು ಆಗ್ತೀನಿ ಅಂತೆಲ್ಲಾ ಕೂರಬೇಡಿ. ಕುಡ್ಕೊಂಡು, ತಿನ್ಕೊಂಡು ಇದ್ದವರೆಲ್ಲಾ ಎಷ್ಟೋ ದಿನ ಬದುಕಿದ್ದಾರೆ. ಪಾಪ ಏನೂ ಮಾಡದೇ ಚೆನ್ನಾಗಿದ್ದವರು ಪಟ್ ಅಂತ ಹೋಗ್ಬಿಡ್ತಾರೆ. ಏನು ಊಹಿಸೋಕೆ ಸಾಧ್ಯ? ಎಲ್ಲಾ ಹಣೆಬರಹ ಅಷ್ಟೆ."

'ಕ್ರಾಂತಿ' ಚಿತ್ರದಲ್ಲಿ ಗ್ರಾಫಿಕ್ಸ್ ಮಾಡಿಲ್ಲ

'ಕ್ರಾಂತಿ' ಚಿತ್ರದಲ್ಲಿ ಗ್ರಾಫಿಕ್ಸ್ ಮಾಡಿಲ್ಲ

"ಕ್ರಾಂತಿ ಚಿತ್ರದಲ್ಲಿ ಸಿಕ್ಸ್‌ಪ್ಯಾಕ್ ಗ್ರಾಫಿಕ್ಸ್ ಮಾಡಿರೋದಲ್ಲ. ಮೇಕಿಂಗ್ ಶಾರ್ಟ್ಸ್ ಎಲ್ಲಾ ಇದೆ. 100 ಜನರಲ್ಲಿ 10 ಜನ ಆಗದೇ ಇರುವವರು ಇರುತ್ತಾರೆ. ಅವರಿಗಾದರೂ ಆನ್ಸರ್ ಮಾಡ್ಬೇಕಲ್ಲ. ಮೇಕಿಂಗ್ ಇಟ್ಟಿದ್ದೀವಿ. ಖಂಡಿತ ಗ್ರಾಫಿಕ್ಸ್ ಇದೆ. ಏನೂ ಕಷ್ಟ ಬೀಳುವುದು ಬೇಕಾಗಿಲ್ಲ. ಬಟ್ಟೆ ಬಿಚ್ಚಿ ನಿಂತರೆ ಗ್ರಾಫಿಕ್ಸ್‌ನವರು ಸಿಕ್ಸ್‌ಪ್ಯಾಕ್, ಹೇಯ್ಟ್ ಪ್ಯಾಕ್, 10 ಪ್ಯಾಕ್ ಯಾವುದು ಬೇಕಾದರೂ ಮಾಡುತ್ತಾರೆ. ಅಂತಗ ಟೆಕ್ನಾಲಜಿ ಬಂದಿದೆ. ಅಲ್ಲಿ ನೀವು ಜನಕ್ಕೆ ಮೋಸ ಮಾಡಬಹುದು. ನಾನು ಅಲ್ಲಿ ಇಲ್ಲಿ ಓಡಾಡುತ್ತಿರುತ್ತೀನಿ. ಇದೇನಯ್ಯಾ ಅಲ್ಲಿ ಹಂಗೆ ಕಾಣಿಸ್ತಾನೆ, ಇಲ್ಲಿ ಇಷ್ಟು ದಪ್ಪ ಇದ್ದಾನೆ ಅಂದ್ರೆ, ಜನಕ್ಕೆ ಡೌಟ್ ಬರುತ್ತಲ್ಲ" ಎಂದಿದ್ದಾರೆ.

More from Filmibeat

English summary
Darshan Talks About His Weight Loss and Kranti Movie Shirtless scene. Darshan loses 42kg in Last one year. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X