Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಿನಕರ್ ಜೊತೆ ದರ್ಶನ್ ಸಿನಿಮಾ ಯಾವಾಗ? ಡಿ ಬಾಸ್ ಬಳಿ ಇರುವ ಸಿನಿಮಾಗಳೆಷ್ಟು? ಇಲ್ಲಿದೆ ಮಾಹಿತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ತೀರ ಅಪರೂಪ. ಸಿನಿಮಾಗಳ ಬಗ್ಗೆ ಅಪ್ ಡೇಟ್ ಬಿಟ್ಟರೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಸಕ್ರೀಯರಾಗಿರುವುದು ತುಂಬಾ ಕಡಿಮೆ. ಆದರೆ ಲೈವ್ ಬರುವುದಾಗಿ ಹೇಳಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ದರ್ಶನ್ ಲೈವ್ ನಲ್ಲಿ ಏನು ಹೇಳುತ್ತಾರೆ, ಯಾವ ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು.
ಬಾನುವಾರ ಲೈವ್ ಬಂದಿದ್ದ ಡಿ ಬಾಸ್ ಸಾಕಷ್ಟು ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ. ಮುಖ್ಯವಾಗಿ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದ ರಾಬರ್ಟ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮಿಸುವಂತೆ ಮಾಡಿದರು. ರಾಬರ್ಟ್ ರಿಲೀಸ್ ಡೇಟ್ ಫಿಕ್ಸ್ ಆಗುತ್ತಿದ್ದಂತೆ ದರ್ಶನ ಮುಂದಿನ ಸಿನಿಮಾ ಯಾವುದು? ಸಹೋದರ ದಿನಕರ್ ಜೊತೆ ಯಾವಾಗ ಸಿನಿಮಾ ಮಾಡುತ್ತಾರೆ? ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ಮುಂದಿನ ಸಿನಿಮಾಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ.
ರಾಬರ್ಟ್ ಸಿನಿಮಾ ಬಿಡುಗಡೆ ಯಾವಾಗ: ದರ್ಶನ್ ಹೇಳಿದ್ದು ಹೀಗೆ?

ಸಹೋದರ ದಿನಕರ್ ಜೊತೆ ದರ್ಶನ್ ಸಿನಿಮಾ ಯಾವಾಗ?
ಸಹೋದರ ದಿನಕರ್ ಜೊತೆ ದರ್ಶನ್ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಅನೇಕ ದಿನಗಳಿಂದ ಕೇಳಿಬರುತ್ತಿದೆ. ಆದರೆ ಯಾವಾಗ ಎನ್ನುವ ಪ್ರಶ್ನೆಗೆ ಅಭಿಮಾನಿಗಳಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ದರ್ಶನ್ ಈ ಬಗ್ಗೆ ಮಾತನಾಡಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, 'ದಿನಕರ್ ಮತ್ತು ನನ್ನ ಸಿನಿಮಾವನ್ನು ಯಾವಾಗ ಬೇಕಾದರೂ ಮಾಡಬಹುದು. ಇರುವ ಪ್ರಾಜೆಕ್ಟ್ ಮುಗಿಸುವುದಕ್ಕೆ ಸಮಯವಿಲ್ಲ.' ಎಂದಿದ್ದಾರೆ. ಮೊದಲು ಚಿತ್ರಮಂದಿರಗಳು ಓಪನ್ ಆಗಲಿ ಎಂದು ಕಾಯುತ್ತಿದ್ದೆವು ಇದೀಗ ಓಪನ್ ಆಗಿದೆ ಎಂದು ದರ್ಶನ್ ಹೇಳಿದ್ದಾರೆ.

ಮೊದಲು ರಾಬರ್ಟ್ ಬಳಿಕ ಮತ್ತೊಂದು ಸಿನಿಮಾ
'ದರ್ಶನ್ ಏನು ಮಾಡ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತೆ. ಮುಂದಿನ ಸಿನಿಮಾ ಅನೌನ್ಸ್ ಮಾಡಿದ ಬಳಿಕ ಎಲ್ಲರೂ ರಾಬರ್ಟ್ ಬಿಟ್ಟು ಆ ಸಿನಿಮಾ ಕಡೆ ಹೆಚ್ಚು ಗಮನ ಹರಿಸುತ್ತೀರಿ. ಎಲ್ಲರೂ ಅದನ್ನು ಇಷ್ಟಪಡೋಕೆ ಶುರು ಮಾಡುತ್ತೀರಿ. ಈ ಸಿನಿಮಾಗಾಗಿ ಒಂದು ವರ್ಷದಿಂದ ಕಷ್ಟ ಪಟ್ಟಿದ್ದೇವೆ. ವ್ಯವಹಾರಿಕವಾಗಿಯೂ ತೊಂದರೆ ಆಗುತ್ತೆ. ಸದ್ಯ ರಾಬರ್ಟ್ ಬಿಟ್ಟು ಬೇರೆ ಏನು ಮಾಡುತ್ತಿಲ್ಲ'ಎಂದಿದ್ದಾರೆ.

ದರ್ಶನ್ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು
'ಸಿನಿಮಾಗಳೆಲ್ಲಾ ಸಾಲ ಸಾಲಾಗಿ ರೆಡಿಯಾಗಿದೆ. ಶೈಲಜಾ ನಾಗ್, ಸಂದೇಶ ನಾಗರಾಜ್, ಮಿಲನ ಪ್ರಕಾಶ್, ರಾಕ್ ಲೈನ್ ವೆಂಕಟೇಶ್, ಹೈದರಾಬಾದ್ ಪ್ರಸಾದ್ ಹೀಗೆ ಸುಮಾರು ಜನರ ಜೊತೆ ಸಿನಿಮಾಗಳು ರೆಡಿಯಾಗುತ್ತಿದೆ. ಒಂದೊಂದಾಗಿ ಪ್ರಾರಂಭ ಮಾಡುತ್ತೇನೆ' ಎಂದು ಹೇಳಿದ್ದಾರೆ. ಆದರೆ ರಾಬರ್ಟ್ ಬಳಿಕ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನವ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಫೇಸ್‌ಬುಕ್ ಲೈವ್‌ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ದಾಸ ದರ್ಶನ್

ರಾಜವೀರ ಮದಕರಿ ನಾಯಕ
ರಾಜವೀರ ಮದಕರಿ ನಾಯಕ ಸಿನಿಮಾ ಸದ್ಯ ಚಿತ್ರೀಕರಣ ಪ್ರಾರಂಭ ಮಾಡಿ ನಿಲ್ಲಿಸಲಾಗಿದೆ. ಹಾಗಾಗಿ ರಾಬರ್ಟ್ ಬಳಿಕ ಮದಕರಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾತಂಡ ಈಗಾಗಲೇ ಲೊಕೇಶನ್ ಹುಡುಕಾಟ ಮಾಡಿದೆ. ಹಾಗಾಗಿ ಸದ್ಯದಲ್ಲೇ ಈ ಸಿನಮಾದ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಲಾಕ್ ಡೌನ್ ಬಳಿಕ ದರ್ಶನ್ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಸದ್ಯ ರಾಬರ್ಟ್ ರಿಲೀಸ್ ನ ಬ್ಯುಸಿಯಲ್ಲಿರುವ ದರ್ಶನ್ ಸದ್ಯದಲ್ಲೇ ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.