twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಹೀರೋಗಳನ್ನು ಕಂಡು ಹೆದರಿತಾ ತೆಲುಗು ಚಿತ್ರರಂಗ? ಡಿ ಬಾಸ್ ಹೇಳಿದ್ದರ ಅರ್ಥವೇನು?

    |

    ಕನ್ನಡ ಚಿತ್ರರಂಗವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇದ್ದ ಸಮಯವೂ ಇತ್ತು. ಆದ್ರೀಗ, ಕಾಲ ಬದಲಾಗಿದೆ. ಇಡೀ ಭಾರತೀಯ ಸಿನಿಮಾರಂಗ ಸ್ಯಾಂಡಲ್‌ವುಡ್ ಕಡೆ ನೋಡುತ್ತಿದೆ. ಕನ್ನಡ ಚಿತ್ರಗಳ ಗುಣಮಟ್ಟು, ಮೇಕಿಂಗ್, ಸ್ಕ್ರಿಪ್ಟ್, ತಂತ್ರಜ್ಞರ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ.

    Recommended Video

    ಇಲ್ಲಿ ಯಾರಿಗೂ ಕನ್ನಡ ಅಭಿಮಾನ ಇಲ್ಲ ಅಂತ ಓಪನ್ ಆಗಿ ಹೇಳ್ತೀನಿ | Oneindia Kannada

    ಬೆಳವಣಿಗೆಗೆ ತಕ್ಕಂತೆ ಕನ್ನಡ ಚಿತ್ರರಂಗವೂ ಎಚ್ಚೆತ್ತಕೊಂಡು ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ಗೆ ಒತ್ತು ನೀಡುತ್ತಿದೆ. ಇಷ್ಟು ದಿನ ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದವರು ಈಗ ತೆಲುಗು, ತಮಿಳು, ಮಲಯಾಳಂ ಭಾಷೆ ಕಡೆ ಹೋಗುತ್ತಿದ್ದರು. ಅದ್ಯಾವಾಗ ಕನ್ನಡ ಸ್ಟಾರ್ ನಟರ ಪರಭಾಷೆ ಕಡೆ ಹೆಚ್ಚು ಗಮನ ಕೊಡಲು ಶುರು ಮಾಡಿದ್ರೋ ಈಗ ಅಲ್ಲಿ ಬೇರೆನೇ ಸಮಸ್ಯೆಗಳು ಎದುರಾಗಿದೆ.

    'ರಾಬರ್ಟ್' ಬಿಡುಗಡೆಗೆ ಅಡ್ಡಿ; ಫಿಲ್ಮ್ ಛೇಂಬರ್ ಗೆ ಆಗಮಿಸಿದ ದರ್ಶನ್'ರಾಬರ್ಟ್' ಬಿಡುಗಡೆಗೆ ಅಡ್ಡಿ; ಫಿಲ್ಮ್ ಛೇಂಬರ್ ಗೆ ಆಗಮಿಸಿದ ದರ್ಶನ್

    ದರ್ಶನ್ ನಟನೆಯ ರಾಬರ್ಟ್ ಚಿತ್ರದ ತೆಲುಗು ಬಿಡುಗಡೆಗೆ ಅಲ್ಲಿನ ವಿತರಕರು ಅಡ್ಡಿ ಮಾಡುತ್ತಿದ್ದಾರೆ. ಈ ಕುರಿತು ಗರಂ ಆಗಿರುವ ಡಿ ಬಾಸ್ 'ನಾವು ಬರ್ತಿದ್ದಿವಿ ಅಂತ ಟಾಲಿವುಡ್ ಚಿತ್ರರಂಗ ಹೆದರಿಕೊಂಡಿದ್ಯಾ? ಎಂದು ಗುಡುಗಿದ್ದಾರೆ. ಅಷ್ಟಕ್ಕೂ, ದರ್ಶನ್ ಹೇಳಿದ್ದೇನು? ರಾಬರ್ಟ್ ಚಿತ್ರದ ವಿವಾದ ಏನು? ಮುಂದೆ ಓದಿ...

    ನಮ್ಮನ್ನು ನೋಡಿ ಹೆದರಿದ್ರಾ?

    ನಮ್ಮನ್ನು ನೋಡಿ ಹೆದರಿದ್ರಾ?

    ರಾಬರ್ಟ್ ಚಿತ್ರದ ಬಿಡುಗಡೆಗೆ ಟಾಲಿವುಡ್‌ನಲ್ಲಿ ಅಡ್ಡಿಯಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ದರ್ಶನ್ ''ನಾವು ಬರ್ತಿದ್ದೀವಿ ಅಂದಗಾ ಅವರಿಗೆ ಹೆದರಿಕೆ ಇದ್ಯಾ? ನೀವೆಲ್ಲ ಬಂದು ಮಾರ್ಕೆಟ್ ಇಡ್ಕೊಂಡ್ರೆ ನಮ್ಮ ಹೀರೋಗಳು ಎಲ್ಲಿಗೆ ಹೋಗ್ಬೇಕು? ಅಂತ ಕೇಳ್ತಿದ್ದಾರೆ'' ಎಂದು ನಟ ದರ್ಶನ್ ತಿಳಿಸಿದ್ದಾರೆ.

    ನೀವು ಇಲ್ಲಿ ಬಂದು ರಿಲೀಸ್ ಮಾಡ್ತಿಲ್ವಾ?

    ನೀವು ಇಲ್ಲಿ ಬಂದು ರಿಲೀಸ್ ಮಾಡ್ತಿಲ್ವಾ?

    ''ನಾವು ಹೋಗಿ ಅಲ್ಲಿ ರಿಲೀಸ್ ಮಾಡ್ತಿದ್ರೆ ಅವರಿಗೆ ಕಷ್ಟ ಆಗುತ್ತೆ. ಹಾಗಾದ್ರೆ, ಅವರು ಹೀರೋಗಳು ಬಂದು ಕರ್ನಾಟಕದಲ್ಲಿ ಮಾಡ್ತಿಲ್ವಾ? ನಾವು ಎಲ್ಲಿ ಹೋಗ್ಬೇಕು?'' ಎಂದು ಡಿ ಬಾಸ್ ದರ್ಶನ್ ಪ್ರಶ್ನಿಸಿದ್ದಾರೆ.

    ತೆಲುಗು ಚಿತ್ರರಂಗದ ವಿರುದ್ಧ ದರ್ಶನ್ ಅಸಮಾಧಾನ: ಫಿಲಂ ಛೇಂಬರ್‌ಗೆ ದೂರು ಸಾಧ್ಯತೆತೆಲುಗು ಚಿತ್ರರಂಗದ ವಿರುದ್ಧ ದರ್ಶನ್ ಅಸಮಾಧಾನ: ಫಿಲಂ ಛೇಂಬರ್‌ಗೆ ದೂರು ಸಾಧ್ಯತೆ

    ಇಷ್ಟು ದಿನ ಇಲ್ಲದೇ ಇದ್ದ ನಿಯಮ ಈಗೇಕೆ?

    ಇಷ್ಟು ದಿನ ಇಲ್ಲದೇ ಇದ್ದ ನಿಯಮ ಈಗೇಕೆ?

    ಏಕಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಬಾರದು ಎಂಬ ನಿಯಮ ಇಷ್ಟು ದಿನ ಎಲ್ಲಿಯೂ ಚರ್ಚೆಯಾಗಿರಲಿಲ್ಲ. ಆದ್ರೆ, ಇದ್ದಕ್ಕಿದ್ದಂತೆ ಈಗ ಈ ನೀತಿ ಎಲ್ಲಿಂದ ಬಂತು ಎಂಬ ಅನುಮಾನ ಮೂಡುವುದು ಸಹಜ. ಏಕಕಾಲದಲ್ಲಿ ರಿಲೀಸ್ ಮಾಡಲು ಒಪ್ಪುವುದಿಲ್ಲವಾದರೇ, ಕರ್ನಾಟಕದಲ್ಲಿ ಪರಭಾಷೆಗಳನ್ನು ಬಿಡುಗಡೆ ಮಾಡುವುದು ನಿಲ್ಲಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.

    ಕನ್ನಡ ಚಿತ್ರಗಳ ಗುಣಮಟ್ಟ ಕಂಡು ಭಯಗೊಂಡರೇ?

    ಕನ್ನಡ ಚಿತ್ರಗಳ ಗುಣಮಟ್ಟ ಕಂಡು ಭಯಗೊಂಡರೇ?

    ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಚಿತ್ರರಂಗವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಪರಭಾಷಿಗರು, ಕನ್ನಡ ಸಿನಿಮಾಗಳ ಗುಣಮಟ್ಟ ಕಂಡು ಭಯಗೊಂಡರೆ ಎಂಬ ಅನುಮಾನ ಮೂಡಿದೆ. ಧ್ರುವ ಸರ್ಜಾ ಪೊಗರು, ದರ್ಶನ್ ರಾಬರ್ಟ್, ಪುನೀತ್ ಅವರ ಯುವರತ್ನ, ಸುದೀಪ್ ಅವರ ಕೋಟಿಗೊಬ್ಬ-3 ಚಿತ್ರಗಳು ಹೆಚ್ಚು ಗಮನ ಸೆಳೆದಿದೆ. ಈ ಎಲ್ಲ ಚಿತ್ರಗಳು ದೊಡ್ಡ ಮಟ್ಟದಲ್ಲಿ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಹಾಗಾಗಿ, ಟಾಲಿವುಡ್ ಇಂಡಸ್ಟ್ರಿ ಆತಂಕಗೊಂಡಿದೆಯೇ?

    ಮಾರ್ಚ್ 11 ರಾಬರ್ಟ್ ಎಂಟ್ರಿ

    ಮಾರ್ಚ್ 11 ರಾಬರ್ಟ್ ಎಂಟ್ರಿ

    ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಬೇಕಿದೆ. ಆದರೆ, ಟಾಲಿವುಡ್‌ನಲ್ಲಿ ಮಾರ್ಚ್ 11 ರಂದು ರಾಬರ್ಟ್ ಬಿಡುಗಡೆ ಮಾಡಲು ಅಡ್ಡಿ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಟಾಲಿವುಡ್ ನಿರ್ಮಾಪಕರು ಅಥವಾ ವಿತರಕರು ಇದೇ ಪಟ್ಟು ಮುಂದುವರಿಸಿದರೆ ಇದರ ಪರಿಣಾಮ ಏನಾಗಬಹುದು ಎಂಬುದರ ಬಗ್ಗೆಯೂ ಚಿಂತಿಸಬೇಕಿದೆ.

    English summary
    Challening star Darshan talks about Robert movie telugu version controversy.
    Friday, January 29, 2021, 14:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X