ತೆಲುಗು ಜನರಿಗೆ ಕುರುಕ್ಷೇತ್ರದ ಬಗ್ಗೆ ದರ್ಶನ್ ಹೇಳಿದ್ದೇನು?
ಕನ್ನಡದ ಮೆಗಾ ಸಿನಿಮಾ ಕುರುಕ್ಷೇತ್ರ ತೆಲುಗು ಸೇರಿದಂತೆ ಬಹುಭಾಷೆಯಲ್ಲಿ ಬರ್ತಿದೆ. ಇತ್ತೀಚಿಗಷ್ಟೆ ತೆಲುಗಿನಲ್ಲಿ ಕುರುಕ್ಷೇತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಸ್ವತಃ ದರ್ಶನ್, ಅರ್ಜುನ್ ಸರ್ಜಾ, ಸೋನು ಸೂದ್, ನಿರ್ದೇಶಕ ನಾಗಣ್ಣ, ನಿರ್ಮಾಪಕ ಮುನಿರತ್ನ ಸೇರಿದಂತೆ ಚಿತ್ರತಂಡ ಆಂಧ್ರಕ್ಕೆ ಹೋಗಿ ಪ್ರಚಾರ ಮಾಡಿದ್ದರು.
ಈ ಸುದ್ದಿಗೋಷ್ಠಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆಲುಗು ಭಾಷೆಯಲ್ಲಿ ಮಾತನಾಡಿದರು. ಈ ವಿಡಿಯೋ ಯೂಟ್ಯೂಬ್, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ಅನೇಕರಿಗೆ ಈ ವಿಡಿಯೋದಲ್ಲಿ ದರ್ಶನ್ ಏನು ಮಾತನಾಡಿದ್ದಾರೆ ಎಂಬುದು ಗೊತ್ತೆ ಇಲ್ಲ. ಆಂಧ್ರದಲ್ಲಿ ದರ್ಶನ್ ತೆಲುಗಿನಲ್ಲಿ ಮಾತಾಡಿದ್ದಾರೆ ಎಂಬ ಕಾರಣಕ್ಕೆ ಶೇರ್ ಮಾಡ್ತಿದ್ದಾರೆ. ಹೀಗೆ, ಈ ವಿಡಿಯೋವನ್ನ ಅರ್ಥವಾಗದೇ ಶೇರ್, ಲೈಕ್ ಮಾಡೋ ಬದಲು ಡಿ ಬಾಸ್ ಏನು ಹೇಳಿದ್ದಾರೆ ಎಂದು ತಿಳಿಯಿರಿ. ದರ್ಶನ್ ತೆಲುಗು ಭಾಷಣದ ಕನ್ನಡ ಭಾಷಾಂತರ ಮುಂದಿದೆ. ಓದಿ....

ಎಲ್ಲ ಕಾಲದ ನಟರು ಇದ್ದಾರೆ
''1970 ರಿಂದ 2019ರ ನಡುವಿನ ಸ್ಟಾರ್ ಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಿರಿಯ ನಟ ಶ್ರೀನಾಥ್ ಅಭಿನಯಿಸಿದ್ದಾರೆ. 70ರ ದಶಕದಲ್ಲಿ ಬಹುದೊಡ್ಡ ನಟ ಅವರು. ನಮ್ಮ ಅಂಬರೀಶ್ ಅವರಿದ್ದಾರೆ. ರವಿಚಂದ್ರನ್, ಅರ್ಜುನ್ ಸರ್ಜಾ ಎಲ್ಲರೂ ಇದ್ದಾರೆ'' - ದರ್ಶನ್

ಇದು ತುಂಬಾ ಹಿಂದೆ ನಿರ್ಧರಿಸಿದ್ದು
''ಈ ಸಿನಿಮಾ ಮಾಡಬೇಕು ಎನ್ನುವುದು ನಿನ್ನೆ ಮೊನ್ನೆಯದಲ್ಲ. ಮುನಿರತ್ನ ಅವರ ಜೊತೆ ಅನಾಥರು ಸಿನಿಮಾ ಮಾಡಿದ್ದೆ. ಈ ರೀತಿ ಒಂದು ಸಿನಿಮಾ ಮಾಡೋಣ ಅಂತಿದ್ರು. ಹೇ ಸುಮ್ಮನೆ ಹೇಳಬೇಡಿ, ಇಂತಹ ಸಿನಿಮಾ ಈಗ ಯಾರು ಮಾಡೋಕೆ ಆಗುತ್ತೆ ಅಂತ. ಐತಿಹಾಸಿಕ, ಪೌರಾಣಿಕ ಚಿತ್ರ ಮಾಡೋದು ತುಂಬಾ ರಿಸ್ಕ್ ಅಂತ ಅಂದುಕೊಂಡ್ವಿ. ಬಟ್, ಅವರು ಮಾಡೋಣ ಅಂತ ಡಿಸೈಡ್ ಮಾಡಿದ್ರು. ಆಗಸ್ಟ್ ತಿಂಗಳಲ್ಲಿ ಶುರು ಮಾಡಿ, ಜನವರಿಗೆ ಮುಗಿಸಿದ್ವಿ. ಮೊದಲು ನಾವು 2ಡಿ ಮಾತ್ರ ಪ್ಲಾನ್ ಮಾಡಿದ್ವಿ. ಮುಂದೆ ಚಿತ್ರೀಕರಣ ಮಾಡ್ತಾ 3ಡಿನೂ ಮಾಡೋಣ ಅಂತ ನಿರ್ಧರಿಸಿದರು''- ದರ್ಶನ್

ಇಂದಿನ ಮಕ್ಕಳಿಗೆ ಗೊತ್ತಾಗಬೇಕಿದೆ
''ನನಗೆ ಒಬ್ಬ ಮಗ ಇದ್ದಾನೆ. ಭೀಮ ಹೇಗಿದ್ದಾನೆ ಅಂದ್ರೆ ದಪ್ಪಕ್ಕೆ, ಉದ್ದಕ್ಕೆ ಇರ್ತಾನೆ ಅಂತಾನೆ. ಯಾಕಂದ್ರೆ, ಅವನು ಛೋಟಾ ಭೀಮ್ ಮಾತ್ರ ನೋಡಿರ್ತಾನೆ. ಇಂದಿನ ಮಕ್ಕಳಿಗೆ ಭೀಮ, ದುರ್ಯೋಧನ, ಅರ್ಜುನ ಯಾರು ಎಂಬುದು ಗೊತ್ತಿಲ್ಲ. ನಾವೆಲ್ಲ ಡಿಡಿ ಚಾನಲ್ ನಲ್ಲಿ ಮಹಾಭಾರತ ಮತ್ತು ರಾಮಾಯಣ ನೋಡಿದ್ದೀವಿ''- ದರ್ಶನ್

3ಡಿಯಲ್ಲಿ ಥ್ರಿಲ್ಲಿಂಗ್ ಆಗಿದೆ
''ಇದು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಎಂಜಾಯ್ ಮಾಡುವಂತಹ ಚಿತ್ರ. ಇನ್ನೊಂದು ಏನಂದ್ರೆ 3ಡಿಯಲ್ಲಿ ಈ ಸಿನಿಮಾ ಬರುವುದರಿಂದ ಎಲ್ಲರಿಗೂ ಒಳ್ಳೆಯ ಬಾಡೂಟ. ಅವಾತರ್ ಅಥವಾ ಹಾಲಿವುಡ್ ಸಿನಿಮಾ 3ಡಿಯಲ್ಲಿ ನೋಡಿರಬಹುದು. ಆದ್ರೆ, ಒಂದು ಪೌರಾಣಿಕ ಚಿತ್ರ ನೋಡುವುದು ಸರ್ಪ್ರೈಸ್. ನಾನು ಇವತ್ತೇ ನೋಡಿದ್ದು. ನನಗೆ ಇಷ್ಟೊಂದು ಥ್ರಿಲ್ ಆಗ್ತಿದೆ. ಹಾಗಾದ್ರೆ ಎಲ್ಲರಿಗೂ ಹೇಗಿರಬೇಡ. ಈ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಇರಲಿ ಎಂದು ವಿನಂತಿಸಿಕೊಳ್ಳುತ್ತೇನೆ'' ಎಂದು ದರ್ಶನ್ ತೆಲುಗಿನಲ್ಲೇ ಮಾತನಾಡಿದ್ರು.


Click it and Unblock the Notifications











