ದರ್ಶನ್‌ಗೆ ಕಗ್ಗಂಟಾದ ಜಾಮೀನು; ಸಿಕ್ಕರೆ ಮನೆಯಲ್ಲಿ ದಸರಾ.. ಇಲ್ಲದಿದ್ದರೆ ಜೈಲಿನಲ್ಲೇ ಆಯುಧ ಪೂಜೆ

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ಗೆ ಜಾಮೀನು ಸಿಗೋದು ದೊಡ್ಡ ಚಾಲೆಂಜ್ ಆಗಿಬಿಟ್ಟಿದೆ. ಈ ಬಾರಿ ಜಾಮೀನು ಸಿಗುತ್ತೆ, ಮುಂದಿನ ಬಾರಿ ಸಿಗುತ್ತೆ ಅಂತ ಕಾದು ಕೂತಿದ್ದ ಅವರ ಅಭಿಮಾನಿಗಳಿಗೆ ಪದೇ ಪದೆ ನಿರಾಸೆಯಾಗಿದೆ. ದರ್ಶನ್ ಜೊತೆ ಪವಿತ್ರಾ ಗೌಡಗೂ ಮತ್ತೆ ನಿರಾಸೆ ಆಗಿದ್ದು, ಜಾಮೀನು ಅರ್ಜಿಯನ್ನು ಅಕ್ಟೋಬರ್ 4ರಂದು ಮುಂದೂಡಲಾಗಿದೆ.

ಇಂದು (ಸೆಪ್ಟೆಂಬರ್ 30) ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಇತ್ತು. ಇಬ್ಬರಿಗೂ ನ್ಯಾಯಾಲಯದಿಂದ ಸಿಹಿ ಸುದ್ದಿ ಸಿಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದು ಮತ್ತೊಮ್ಮೆ ನಿರಾಸೆಯಾಗಿದೆ. ಈ ಬಾರಿ ನ್ಯಾಯಾಧೀಶರು ಇವರ ಜಾಮೀನು ಅರ್ಜಿಯನ್ನು ಮುಂದೂಡುವುದಕ್ಕೆ ಕಾರಣ ದರ್ಶನ್ ಪರ ವಕೀಲರೇ ಕಾರಣ.

Darshan Thoogudeepa and Pavithra Gowda Will get bail before Mysore Dussehra festival

ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ ಎಷ್ಟೋ ದಿನಗಳ ಬಳಿಕ ದರ್ಶನ್ ಬೇಲ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡಗೆ ಇನ್ನೂ ಜಾಮೀನು ಅರ್ಜಿ ಸಿಕ್ಕಿಲ್ಲ. ಅಲ್ಲದೆ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ಒಂದೇ ದಿನ ವಿಚಾರಣೆ ಮಾಡಲಾಗುತ್ತಿದೆ.

ಅಂದ್ಹಾಗೆ ಈ ಬಾರಿ ದರ್ಶನ್ ಜಾಮೀನು ಅರ್ಜಿ ಮುಂದೂಡಿಕೆಗೆ ಅವರ ವಕೀಲರೇ ಕಾರಣ. ಕಳೆದ ಬಾರಿ ವಿಚಾರಣೆ ವೇಳೆ ವಿಶೇಷ ಅಭಿಯೋಜಕರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದರು. ಅದರಂತೆ ಇಂದು (ಸೆಪ್ಟಂಬರ್ 30) ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ಆದರೆ, ದರ್ಶನ್ ಪರ ವಕೀಲರಾದ ಸುನೀಲ್ ವಾದ ಮಂಡಿಸಲು ನ್ಯಾಯಾಧೀಶರ ಬಳಿ ಕಾಲಾವಕಾಶ ಕೇಳಿದ್ದರು.

ವಿಶೇಷ ಅಭಿಯೋಜಕರು ಸಲ್ಲಿಸಿದ ಆಕ್ಷೇಪಣಾ ಅರ್ಜಿಯಲ್ಲಿ ಏನಿದೆ ಅನ್ನೋದನ್ನು ಅಧ್ಯಯನ ಮಾಡಬೇಕು. ಜೊತೆಗೆ ಹಿರಿಯ ವಕೀಲರು ಕಾರಣಾಂತರದಿಂದ ಗೈರಾಗಿರುವುದರಿಂದ ವಾದ ಮಂಡನೆ ಮಾಡುವುದಕ್ಕೆ ಸಮಯ ನೀಡಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಇದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿ ಅಕ್ಟೋಬರ್ 4ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇವರೊಂದಿಗೆ ಪವಿತ್ರಾ ಗೌಡ ಜಾಮೀನು ಅರ್ಜಿ ಕೂಡ ಅಂದೇ ನಡೆಯಲಿದೆ.

ದರ್ಶನ್ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರು ವಾದ ಮಂಡನೆ ಮಾಡುವ ಸಾಧ್ಯತೆಯಿದೆ. ಅಕ್ಟೋಬರ್ 4ರಂದು ದರ್ಶನ್‌ಗೆ ಯಾಕೆ ಜಾಮೀನು ಸಿಗಬೇಕು ಅಂತ ಮಂಡಿಸಿದ ವಾದ ನ್ಯಾಯಾಧೀಶರಿಗೆ ಸಮಂಜಸ ಅನಿಸಿದ್ದಲ್ಲಿ ದಸರಾ ಹಬ್ಬದೊಳಗೆ ದರ್ಶನ್‌ಗೆ ಜಾಮೀನು ಸಿಗಬಹುದು. ಹಾಗೇನಾದರೂ ಜಾಮೀನು ಸಿಕ್ಕರೆ, ಮನೆಯಲ್ಲೇ ದಸರಾ. ಇಲ್ಲದೇ ಹೋದಲ್ಲಿ ಜೈಲಿನಲ್ಲಿ ದಸರಾ ಹಬ್ಬ ಮಾಡಬೇಕಾಗುತ್ತೆ.

ಇನ್ನೊಂದು ಕಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ , ಸಹೋದರ ದಿನಕರ್ ತೂಗುದೀಪ ಹಾಗೂ ನಟ ಧನ್ವೀರ್ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ದರ್ಶನ್ ಜೊತೆ ಅರ್ಧ ಗಂಟೆಗಳ ಕಾಲ ಜಾಮೀನಿನ ಬಗ್ಗೆ ಚರ್ಚೆ ನಡೆಸಿ ನಿರ್ಗಮಿಸಿದ್ದಾರೆ. ಎಂದಿನಂತೆ ಈ ಬಾರಿ ಕೂಡ ದರ್ಶನ್ ನಿರಾಳರಾಗಿದ್ದರು. ಇದು ದಸರಾಗೂ ಮುನ್ನ ಜಾಮೀನು ಸಿಗುವ ಮುನ್ಸೂಚನೆಯಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Darshan Thoogudeepa and Pavithra Gowda Will get bail before Mysore Dussehra festival?:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X