ಅಭಿಷೇಕ್ - ಅವಿವಾ ಆರತಕ್ಷತೆ; ಅಭಿ - ಸುಮಲತಾ ಕೆನ್ನೆ ಮುಟ್ಟಿ ಸಂತಸ ವ್ಯಕ್ತಪಡಿಸಿದ ದರ್ಶನ್
ಮೊನ್ನೆ ಜೂನ್ 5ರಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೊನ್ನೆ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿ ಇಂದು ( ಜೂನ್ 7 ) ಆರತಕ್ಷತೆ ಮಾಡಿಕೊಂಡಿದೆ.
ಈ ಅದ್ದೂರಿ ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರರಂಗದ ಹಲವಾರು ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಹಾಜರಾಗಿದ್ದಾರೆ. ಕನ್ನಡದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಆಗಮಿಸಿದ್ದರು.

ಬಿಳಿ ಶರ್ಟ್, ಹಸಿರು ಪ್ಯಾಂಟ್ ಧರಿಸಿ ಬಂದಿದ್ದ ದರ್ಶನ್ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ದರ್ಶನ್ ಜತೆ ಸುಮಲತಾ ಅಂಬರೀಶ್ ಸಹ ನವ ಜೋಡಿಯ ಜತೆ ಫೋಟೊಗೆ ಪೋಸ್ ನೀಡಿದ್ದಾರೆ.
ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ದರ್ಶನ್ ಅಭಿಮಾನಿಗಳು ಜೈ ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಕೂಗಿದರು. ದರ್ಶನ್ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರ ಕೆನ್ನೆಯನ್ನೂ ಮುಟ್ಟಿ ಸಂತಸ ವ್ಯಕ್ತಪಡಿಸಿದರು.
More from Filmibeat
English summary
Darshan Thoogudeepa attended Abhishek Ambareesh reception and wished the couple.


Click it and Unblock the Notifications











