Darshan: 47 ದಿನ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದರ್ಶನ್ ಪಾವತಿಸಿದ್ದು ಎಷ್ಟು ಲಕ್ಷ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರುವಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ತೀವ್ರ ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿದ್ದರು. ಈ ಸಂಬಂಧ ಬಳ್ಳಾರಿಯ ವಿವ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಬಳಿಕ ಎಂಆರ್‌ಐ ಸ್ಕ್ಯಾನ್ ಮಾಡಿಸಿದ ಬಳಿಕ ದರ್ಶನ್‌ಗೆ ನೋವು ಇರುವುದು ಬೆಳಕಿಗೆ ಬಂದಿತ್ತು. ಇದರ ಜೊತೆಗೆ ಕಾಲಿನ ಸಮಸ್ಯೆ ಇರುವುದಾಗಿಯೂ ಹೇಳಿದ್ದರು.
ಈ ಎರಡು ಅಂಶಗಳನ್ನು ಇಟ್ಟುಕೊಂಡು ದರ್ಶನ್‌ಗೆ ಮಾಧ್ಯಂತರ ಜಾಮೀನು ಕೊಡಿಸುವಲ್ಲಿ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಯಶಸ್ವಿಯಾಗಿದ್ದರು. ಆ ಬಳಿಕ ದರ್ಶನ್ ಬಳ್ಳಾರಿಯಿಂದ ಮಧ್ಯಂತರ ಜಾಮೀನಿನ ಮೇಲೆ ರಿಲೀಸ್ ಆಗಿ, ಸೀದಾ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಲಕ್ಷ ಲೆಕ್ಕದಲ್ಲಿ ಬಿಲ್ ಅನ್ನು ಪಾವತಿ ಮಾಡಿದ್ದಾರೆ ಎನ್ನಲಾಗಿದೆ.

ಬೆನ್ನು ನೋವು ತೀವ್ರಗೊಂಡಿದ್ದರಿಂದ ದರ್ಶನ್‌ಗೆ ಚಿಕಿತ್ಸೆ ಅನಿವಾರ್ಯತೆಯಿದೆ ಇದ್ದಿದ್ದರಿಂದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಸಿಕ್ಕಿದ ದಿನದಿಂದ ರೆಗ್ಯುಲರ್ ಜಾಮೀನು ಸಿಗುವವರೆಗೂ ಸುಮಾರು ಐದು ವಾರಗಳ ಕಾಲ ಬಿಜಿಎಸ್‌ನಲ್ಲಿ ಚಿಕಿತ್ಸೆ ಪಡೆಯಲಾಗಿತ್ತು. ಇದರ ವೆಚ್ಚ ಎಷ್ಟು ಅನ್ನೋದು ಈಗ ರಿವೀಲ್ ಆಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಅನ್ನು ಪರಪ್ಪನ ಅಗ್ರಹಾ ಜೈಲ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಐಷಾರಾಮಿ ಸೇವೆ ಪಡೆದ ಆಧಾರದ ಮೇಲೆ ಬಳ್ಳಾರಿ ಜೈಲ್‌ಗೆ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿತ್ತು. ಇನ್ನು 47 ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದ ದರ್ಶನ್ ದೊಡ್ಡ ಮೊತ್ತದ ಹಣವನ್ನು ಆಸ್ಪತ್ರೆಗೆ ಸಲ್ಲಿಸಿದಿದಾರೆ. ಅದೆಷ್ಟು? ಆಸ್ಪತ್ತೆಯಲ್ಲಿ ಯಾವೆಲ್ಲ ಚಿಕಿತ್ಸೆಯನ್ನು ಪಡೆದಿದ್ದಾರೆ ಅನ್ನೋದನ್ನು ನೋಡಬುಕ್ಕೆ ಮುಂದೆ ಓದಿ.
ಇತ್ತೀಚೆಗಷ್ಟೇ ರಿಲೀಸ್ ಆಗಿರುವ ದರ್ಶನ್ ಸುಮಾರು ಏಳುವಾರಗಳ ಕಾಲ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದಕ್ಕೆ ಸುಮಾರಿ 17 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದ್ದರೆ ಎಂದು ಪಬ್ಲಿಕ್ ಟಿವಿ ಇಂಗ್ಲಿಷ್ ಪೋರ್ಟಲ್‌ನಲ್ಲಿ ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಕೇವಲ 47 ದಿನಗಳಿಗೆ ಪಾವತಿ ಮಾಡಿದ್ದು ಅವರ ಅಭಿಮಾನಿಗಳೇ ಮೂಗಿನ ಮೇಲೆ ಬೆರಳು ಇಟ್ಟಿಕೊಳ್ಳುವಂತೆ ಮಾಡಿದೆ.
ಇನ್ನು ಆಸ್ಪತ್ರೆ ಬಿಲ್‌ನಲ್ಲಿ ದರ್ಶನ್ ನೀಡಿರುವ ವಾರ್ಡ್ ರೂಮ್ ಚಾರ್ಜ್ ಕೂಡ ಸೇರಿಕೊಂಡಿದೆ. ಹಾಗೇ ಪಿಸಿಯೋಥೆರಪಿ, ವೈದ್ಯರ ಕನ್ಸಲ್ ಟೇಟರ್ ಚಾರ್ಜ್, ಮೆಡಿಕಲ್ ಟೆಸ್ಟ್, ಎಕ್ಸ್ ರೇಗಳು ಹಾಗೂ ಹಲವು ರೀತಿಯ ಟೆಸ್ಟ್‌ಗಳನ್ನು ಮಾಡಿದ್ದಾರೆ. ಹೀಗೆ ವೈದ್ಯರು ಮಾಡಿದ ಹತ್ತು ಹಲವು ಟೆಸ್ಟ್‌ಗಳನ್ನು ಮಾಡಿದ್ದಕ್ಕೆ ಸುಮಾರು 17 ಲಕ್ಷ ರೂಪಾಯಿಗಳಷ್ಟು ಬಿಲ್ ಚಾರ್ಜ್ ಆಗಿದೆ ಎಂದು ವರದಿ ಮಾಡಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಎರಡನೇ ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್ ಸದ್ಯ ಜಾಮೀನು ಪಡೆದು ಹೊರ ಬಂದಿದ್ದಾರೆ. ಕೋರ್ಟ್‌ನಿಂದ ಅನುಮತಿ ಪಡೆದು ದರ್ಶನ್ ಸದ್ಯ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಸೆಟ್ ಆಗಿದ್ದಾರೆ. ಜನವರಿ 5ನೇ ತಾರೀಕಿನ ವರೆಗೂ ಮೈಸೂರಿನಲ್ಲಿ ಇರುವುದಕ್ಕೆ ನ್ಯಾಯಾಲಯ ಅನುಮತಿಯನ್ನು ನೀಡಿದೆ. ಇನ್ನು ದರ್ಶನ್ ಜೊತೆಗೆ ಪವಿತ್ರಾ ಗೌಡ ಕೂಡ ಜಾಮೀನು ಪಡೆದು ಹೊರಬಂದಿದ್ದಾರೆ. ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











