ಆರ್‌ಆರ್‌ ನಗರ 'ಕುರುಕ್ಷೇತ್ರ' ಅಖಾಡಕ್ಕೆ ಶುಕ್ರವಾರ 'ಸುಯೋಧನ' ದರ್ಶನ್ ಎಂಟ್ರಿ

ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯ ಕಣ ಭಾರಿ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ನಡುವೆ ನೇರಾ ಹಣಾಹಣಿ ಕಾಣುತ್ತಿದ್ದು, ಪ್ರಚಾರದ ಕಣಕ್ಕೆ ಸೆಲೆಬ್ರಿಟಿಗಳು ಎಂಟ್ರಿಯಾಗುತ್ತಿದ್ದಾರೆ.

Recommended Video

ಮುನಿರತ್ನ ಈ ದೊಡ್ಡ ಗುಣಕ್ಕೆ ನಾನು ಅವರ ಬೆಂಬಲಕ್ಕೆ ನಿಂತಿದ್ದೇನೆ | Filmibeat Kannada

ಇತ್ತೀಚಿಗಷ್ಟೆ ಮುನಿರತ್ನ ಪರ ಬಹುಭಾಷಾ ನಟಿ ಖುಷ್ಬೂ ಪ್ರಚಾರ ಮಾಡಿದ್ದರು. ಇದೀಗ, ಆರ್ ಆರ್ ನಗರ ಕುರುಕ್ಷೇತ್ರ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಯಾಗುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ರಾಜರಾಜೇಶ್ವರಿ ನಗರದಲ್ಲಿ ಸುಯೋಧನ ದರ್ಶನ್ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಮುಂದೆ ಓದಿ...

ಶುಕ್ರವಾರ ದರ್ಶನ್ ಎಂಟ್ರಿ

ಶುಕ್ರವಾರ ದರ್ಶನ್ ಎಂಟ್ರಿ

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ನಟಿ ಖುಷ್ಬೂ ಪ್ರಚಾರ ಮಾಡಿದ ನಂತರ ಈಗ ನಟ ದರ್ಶನ್ ಸಹ ಮತಯಾಚಿಸಲಿದ್ದಾರೆ. ಸ್ವತಃ ಮುನಿರತ್ನ ಅವರೇ ಹೇಳಿರುವ ಪ್ರಕಾರ, ಶುಕ್ರವಾರ ಬೆಳಗ್ಗೆಯಿಂದ ರಾತ್ರಿವರೆಗೂ ಆರ್ ಆರ್ ನಗರದ ಎಲ್ಲಾ ವಾರ್ಡ್‌ಗಳಲ್ಲೂ ದರ್ಶನ್ ಪ್ರಚಾರ ಮಾಡಲಿದ್ದಾರೆ.

ಮಂಡ್ಯದಲ್ಲಿ ಎದುರಾಳಿ, ಆರ್‌ಆರ್‌ ನಗರದಲ್ಲಿ ಸ್ನೇಹಿತ!

ಮಂಡ್ಯದಲ್ಲಿ ಎದುರಾಳಿ, ಆರ್‌ಆರ್‌ ನಗರದಲ್ಲಿ ಸ್ನೇಹಿತ!

ಮಂಡ್ಯ ಲೋಕಸಭೆ ಚುನಾವಣೆ ವೇಳೆ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ ಎದುರಾಳಿ ಪಕ್ಷದಲ್ಲಿದ್ದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಪರವಾಗಿ ಮುನಿರತ್ನ ಮತ ಕೇಳಿದ್ದರು. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ದರ್ಶನ್ ಪ್ರಚಾರ ಮಾಡಿದ್ದರು.

ಮುನಿರತ್ನ ಬೆಂಬಲಕ್ಕೆ ದರ್ಶನ್

ಮುನಿರತ್ನ ಬೆಂಬಲಕ್ಕೆ ದರ್ಶನ್

ಲೋಕಸಭೆ ಚುನಾವಣೆ ವೇಳೆ ವಿರೋಧಿಗಳಂತೆ ಪ್ರಚಾರ ಮಾಡಿದ್ದರು. ಈಗ ಆರ್ ಆರ್ ನಗರದಲ್ಲಿ ಮುನಿರತ್ನ ಪರ ದರ್ಶನ್ ಪ್ರಚಾರ ಮಾಡ್ತಾರೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ದರ್ಶನ್ ಮತ್ತು ಮುನಿರತ್ನ ಅವರ ಸ್ನೇಹ ಎಂತಹದ್ದು, ಮಂಡ್ಯ ಚುನಾವಣೆಯ ಮರೆತುಹೋಯಿತೆ ಎಂಬ ಮಾತುಗಳು ಚರ್ಚೆಯಲ್ಲಿದೆ. ಆದ್ರೆ, ವೈಯಕ್ತಿಕವಾಗಿ ಮುನಿರತ್ನ ಮತ್ತು ದರ್ಶನ್ ಒಳ್ಳೆಯ ಬಾಂಧವ್ಯದಲ್ಲಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಕುರುಕ್ಷೇತ್ರ ನಂತರ ಮತ್ತೊಂದು ಚಿತ್ರ

ಕುರುಕ್ಷೇತ್ರ ನಂತರ ಮತ್ತೊಂದು ಚಿತ್ರ

ನಟ ದರ್ಶನ್ ಜೊತೆ ಮುನಿರತ್ನ ಅವರು ಕುರುಕ್ಷೇತ್ರ ಎಂಬ ಸಿನಿಮಾ ಮಾಡಿದ್ದರು. ಈ ಸಿನಿಮಾದ ನೂರನೇ ದಿನದ ಕಾರ್ಯಕ್ರಮದಲ್ಲಿ ಡಿ-ಬಾಸ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ವಿಂಗ್ ಕಮಾಂಡರ್ ಅಭಿನಂದನ್ ಅವರ ಪಾತ್ರದಲ್ಲಿ ದರ್ಶನ್ ನಟಿಸಲಿದ್ದಾರೆ ಎಂದು ಭರವಸೆ ನೀಡಿದ್ದರು.

More from Filmibeat

English summary
RR Nagar Bypoll: Challenging Star Darshan to campaign for RR Nagar BJP Candidate Munirathna on October 30th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X