ಆರ್ ಆರ್ ನಗರ ಉಪಚುನಾವಣೆ: ಇಂದು ಮುನಿರತ್ನ ಪರ ನಟ ದರ್ಶನ್ ಕ್ಯಾಂಪೇನ್
ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯ ಕಣ ಭಾರಿ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಡುವೆ ನೇರಾ ಹಣಾಹಣಿ ಕಾಣುತ್ತಿದ್ದು, ಪ್ರಚಾರದ ಕಣಕ್ಕೆ ಈಗ ತಾರಾಮೆರಗು ಬಂದಿದೆ.
Recommended Video
ಇತ್ತೀಚಿಗಷ್ಟೆ ಮುನಿರತ್ನ ಪರ ನಟಿ ಶ್ರುತಿ ಪ್ರಚಾರ ಮಾಡಿದ್ದರು. ಬಳಿಕ ಬಹುಭಾಷಾ ನಟಿ ಖುಷ್ಬೂ ಪ್ರಚಾರ ಮಾಡಿದ್ದರು. ಇದೀಗ, ಆರ್ ಆರ್ ನಗರ ಕುರುಕ್ಷೇತ್ರ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಯಾಗುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಅಬ್ಬರದ ಪ್ರಚಾರ ಮಾಡಲಿದ್ದಾರೆ.
ಸ್ವತಃ ಮುನಿರತ್ನ ಅವರೇ ಹೇಳಿರುವ ಪ್ರಕಾರ, ಶುಕ್ರವಾರ ಬೆಳಗ್ಗೆಯಿಂದ ರಾತ್ರಿವರೆಗೂ ಆರ್ ಆರ್ ನಗರದ ಎಲ್ಲಾ ವಾರ್ಡ್ ಗಳಲ್ಲೂ ದರ್ಶನ್ ಪ್ರಚಾರ ಮಾಡಲಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆ ವೇಳೆ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ ಎದುರಾಳಿ ಪಕ್ಷದಲ್ಲಿದ್ದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಪರವಾಗಿ ಮುನಿರತ್ನ ಮತ ಕೇಳಿದ್ದರು. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ದರ್ಶನ್ ಪ್ರಚಾರ ಮಾಡಿದ್ದರು.

ದರ್ಶನ್ ಮತ್ತು ಮುನಿರತ್ನ ಅವರ ಸ್ನೇಹ ಎಂತಹದ್ದು, ಮಂಡ್ಯ ಚುನಾವಣೆಯ ಮರೆತುಹೋಯಿತೆ ಎಂಬ ಮಾತುಗಳು ಚರ್ಚೆಯಲ್ಲಿದೆ. ಆದ್ರೆ, ವೈಯಕ್ತಿಕವಾಗಿ ಮುನಿರತ್ನ ಮತ್ತು ದರ್ಶನ್ ನಡುವೆ ಉತ್ತಮ ಬಾಂಧವ್ಯವಿದೆ. ಇಬ್ಬರ ಸ್ನೇಹ ಇದಕ್ಕೆ ಕಾರಣ ಎನ್ನಲಾಗಿದೆ.


Click it and Unblock the Notifications











