Just In
Don't Miss!
- Sports
SMAT: ಮೊದಲ ಕ್ವಾ.ಫೈನಲ್ನಲ್ಲಿ ಕರ್ನಾಟಕ್ಕೆ ಪಂಜಾಬ್ ಎದುರಾಳಿ
- News
ಅನಾರೋಗ್ಯಕ್ಕೆ ಒಳಗಾದ ಶಶಿಕಲಾಗೆ ಕೋವಿಡ್ ಸೋಂಕು ಪತ್ತೆ
- Finance
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ RBIನಿಂದ 2 ಕೋಟಿ ರು. ದಂಡ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಹೋದರಿ ಚಿತ್ರಕ್ಕೆ ಕ್ಲಾಪ್ ಮಾಡಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

'ಚಾಲೆಂಜಿಂಗ್ ದರ್ಶನ್' ಅಂದ್ರೇನೇ ಹಾಗೆ... ತಮ್ಮವರ ಹಾಗೂ ತನ್ನ ಸುತ್ತ ಮುತ್ತಲಿನವರ ಏಳಿಗೆಗೆ ಶ್ರಮಿಸೋದು ಹಾಗೂ ಅವರ ಕಷ್ಟಕ್ಕೆ ಬೆನ್ನಿಗೆ ನಿಲ್ಲೋದು ಅವರ ಕಾಯಕ. ಅದಷ್ಟೇ ಅಲ್ಲದೆ ಸಿನಿಮಾರಂಗದಲ್ಲಿ ಬೆಳೆಯುತ್ತಿರುವ ಕಲಾವಿದರಿಗೆ ಪ್ರೋತ್ಸಾಹ ನೀಡೋದನ್ನೂ ಕೂಡ ದರ್ಶನ್ ಹಿಂದಿನಿಂದಲೂ ಬೆಳೆಸಿಕೊಂಡು ಬಂದಿದ್ದಾರೆ.
ಸದ್ಯ ದರ್ಶನ್ ತಮ್ಮ ಸಹೋದರಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಕ್ಲಾಪ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಕ್ಕ ಪ್ರೊಡ್ಯೂಸ್ ಮಾಡ್ತಿರೋ ಚಿತ್ರಕ್ಕೆ ಬೆನ್ನೆಲುಬಾಗಿ ನಿಲ್ಲಲ್ಲಿದ್ದಾರೆ. ಅರೇ... ದರ್ಶನ್ ಸಹೋದರಿ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಿದ್ದಾರಾ ಅಂತ ಆಲೋಚನೆ ಮಾಡಬೇಡಿ. ನಾವು ಹೇಳ್ತಿರೋದು ದರ್ಶನ್ ಅವರ ಸ್ವಂತ ಸಹೋದರಿಯ ಬಗ್ಗೆ ಅಲ್ಲಾ, ಮತ್ಯಾರು ? ಮುಂದೆ ಓದಿ...

'ನೀನಾಸಂ' ನಿಂದ ಬೆಳೆದು ಬಂದ ನಂಟು
ರತ್ನ ಶ್ರೀಧರ್.... 'ದರ್ಶನ್' ನೀನಾಸಂ ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಕ್ಯಾಂಟೀನ್ ನಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆ, ದರ್ಶನ್ ರನ್ನ ಅತೀ ಪ್ರೀತಿಯಿಂದ ನೋಡಿಕೊಳ್ತಿದ್ದ 'ರತ್ನ ಶ್ರೀಧರ್' ಅವ್ರನ್ನ ದರ್ಶನ್ ಇಂದಿಗೂ ಅಕ್ಕನಾಗಿಯೇ ನೋಡುತ್ತಾರೆ.

ಸೈಕಲಾಜಿಕಲ್-ಸಸ್ಪೆನ್ಸ್ ಸಿನಿಮಾ
ರತ್ನ ಶ್ರೀಧರ್ ಮೊಟ್ಟ ಮೊದಲಬಾರಿಗೆ ಸಿನಿಮಾವನ್ನ ನಿರ್ದೇಶನ ಮಾಡಲು ಮುಂದಾಗಿದ್ದಾರೆ. 'ಹಿಕೋರಾ' ಅನ್ನೋ ಟೈಟಲ್ ಸಿನಿಮಾಗೆ ಇಡಲಾಗಿದ್ದು ನಿನಾಸಂ ನ ಹಳೆಯ ವಿದ್ಯಾರ್ಥಿ ಕೃಷ್ಣ ಪೂರ್ಣ ನಿರ್ದೇಶನ ಮಾಡುತ್ತಿದ್ದಾರೆ. 'ರತ್ನ ಶ್ರೀಧರ್' ಜೊತೆಯಲ್ಲಿ ವಿನಾಯಕ ರಾಮ್ ಕಲಗಾರು ಚಿತ್ರದ ಸಹನಿರ್ಮಾಣ ಹಾಗೂ ಬರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ

ಹೊಸ ಪ್ರಯತ್ನಕ್ಕೆ ಸಜ್ಜು
'ಹಿಕೋರಾ' ಸಿನಿಮಾದಲ್ಲಿ ಹಿರಿಯ ನಟಿ ಲಕ್ಷ್ಮೀ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಿ ಅವ್ರ ಜೊತೆಯಲ್ಲಿ ಕೃಷ್ಣ ಪೂರ್ಣ ಕೂಡ ಮುಖ್ಯ ಪಾತ್ರವನ್ನ ನಿರ್ವಹಿಸಲಿದ್ದಾರೆ.

ತಾಂತ್ರಿಕ ವರ್ಗದ ಪರಿಚಯ
ಡಿಸೆಂಬರ್ ಮೂರನೇ ವಾರದಲ್ಲಿ 'ಹಿಕೋರಾ' ಸಿನಿಮಾದ ಚಿತ್ರೀಕರಣ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ದರ್ಶನ್ ಚಿತ್ರದ ಮಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ, ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಹಿಕೋರಾ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ದರ್ಶನ್ ತನ್ನ ಸಹೋದರಿ ರತ್ನಕ್ಕಳಿಗೆ ನೆರವ�
�ಗಲಿದ್ದಾರೆ.