ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾಕ್ಕೆ ದರ್ಶನ್ ಧ್ವನಿ
ಚಿರಂಜೀವಿ ಸರ್ಜಾ ಅಗಲಿದ ನೋವು ಇನ್ನೂ ಮಾಸಿಲ್ಲ. ಅವರ ಕುಟುಂಬ, ಸ್ನೇಹಿತರು ಆಘಾತದಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಸಮಯದಲ್ಲಿ ಚಿರು ಸರ್ಜಾ ಸಿನಿಮಾಗಳಿಗೆ ಸಹಾಯ ಮಾಡಲು ದರ್ಶನ್ ರೆಡಿಯಾಗಿದ್ದಾರೆ. ಚಿರು ಸರ್ಜಾ ಅಭಿನಯದ ಸಿನಿಮಾಕ್ಕೆ ಧ್ವನಿ ನೀಡುವುದಾಗಿ ದರ್ಶನ್ ಸ್ವತಃ ಮುಂದೆ ಬಂದಿದ್ದಾರೆ.
ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ತಿಯಾಗಿದ್ದು, ಡಬ್ಬಿಂಗ್ ಮಾತ್ರವೇ ಬಾಕಿ ಇದೆ. ಈ ಸಿನಿಮಾಕ್ಕೆ ಧ್ವನಿ ನೀಡುವುದಾಗಿ ಸ್ವತಃ ದರ್ಶನ್ ಅವರೇ ಚಿತ್ರತಂಡಕ್ಕೆ ತಿಳಿಸಿದ್ದಾರೆ.

ರಾಮ್ ನಾರಾಯಣ್ ನಿರ್ದೇಶಿಸಿರುವ ಸಿನಿಮಾ
ರಾಜಮಾರ್ತಾಂಡ ಸಿನಿಮಾವನ್ನು ರಾಮ್ ನಾರಾಯಣ್ ನಿರ್ದೇಶಿಸಿದ್ದು ಸಿನಿಮಾದಲ್ಲಿ ಚಿರು ಸರ್ಜಾ ನಾಯಕ. ಸಿನಿಮಾದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಇದರ ಜೊತೆ ಡಬ್ಬಿಂಗ್ ಸಹ ಬಾಕಿ ಇದೆ. ಚಿರು ಪಾತ್ರಕ್ಕೆ ಡಬ್ಬಿಂಗ್ ಮಾಡಲು ದರ್ಶನ್ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ.

ಧ್ರುವ ಅವರೂ ಡಬ್ಬಿಂಗ್ ಮಾಡಲು ಒಪ್ಪಿಕೊಂಡಿದ್ದಾರೆ
ಧ್ರುವ ಅವರೂ ಸಹ ಚಿರು ಪಾತ್ರಕ್ಕೆ ಡಬ್ಬಿಂಗ್ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ನಿರ್ದೇಶಕರು ಚಿರು ಪಾತ್ರಕ್ಕೆ ಧ್ರುವ ಧ್ವನಿಯನ್ನೇ ಬಳಸುವುದಾಗಿ ಹೇಳಿದ್ದಾರಾದರೂ, ದರ್ಶನ್ ಅವರ ಧ್ವನಿಯೂ ಇರಲಿದೆ ಎಂದಿದ್ದಾರೆ.

ಸಿನಿಮಾದಲ್ಲಿ ದರ್ಶನ್ ಧ್ವನಿ ಇರಲಿದೆ
ದರ್ಶನ್ ಅವರು ರಾಜಮಾರ್ತಾಂಡ ಸಿನಿಮಾದ ನಿರ್ಮಾಪಕರಿಗೆ ಆಪ್ತರಾಗಿದ್ದು, ಧ್ವನಿ ನೀಡುವುದಾಗಿ ಮುಂದೆಬಂದಿದ್ದಾರೆ. ಹಾಗಾಗಿ ದರ್ಶನ್ ಅವರ ಧ್ವನಿಯನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಿದ್ದೇವೆ, ಆದರೆ ಧ್ರುವ ಸರ್ಜಾ ಧ್ವನಿಯನ್ನು ಚಿರು ಪಾತ್ರಕ್ಕೆ ಬಳಸಿಕೊಳ್ಳಲಿದ್ದೇವೆ ಎಂದಿದ್ದಾರೆ.

ರಾಜಮಾರ್ತಾಂಡ ಸಿನಿಮಾಕ್ಕೆ ದರ್ಶನ್ ಬೆನ್ನೆಲುಬು
ದರ್ಶನ್ ಅವರು ನಮ್ಮ ರಾಜಮಾರ್ತಾಂಡ ಸಿನಿಮಾಕ್ಕೆ ಆರಂಭದಿಂದಲೂ ಬೆನ್ನೆಲುಬಾಗಿದ್ದರು. ಅವರ ಗೆಳೆಯನ ಸಿನಿಮಾಕ್ಕೆ ಸಹಾಯ ಮಾಡಲು ಅವರು ಈಗ ಮುಂದೆ ಬಂದಿದ್ದಾರೆ. ಅವರಿಗೆ ಚಿತ್ರತಂಡ ಋಣಿಯಾಗಿದೆ ಎಂದಿದ್ದಾರೆ.


Click it and Unblock the Notifications











