Bad Manners: ಅಭಿಷೇಕ್‌ 'ಬ್ಯಾಡ್ ಮ್ಯಾನರ್ಸ್‌'ಗೆ ಗುಡ್ ಕಿಕ್‌ಸ್ಟಾರ್ಟ್ ಕೊಡೋಕೆ ದರ್ಶನ್ ಎಂಟ್ರಿ

ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ನಲ್ಲಿ ಬರ್ತಿರೋ 'ಬ್ಯಾಡ್ ಮ್ಯಾನರ್ಸ್‌' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸುಕ್ಕಾ ಸೂರಿ ರಾ ಆಕ್ಷನ್ ಥ್ರಿಲ್ಲರ್ ನೋಡೊಕೆ ಒಂದು ವರ್ಗದ ಪ್ರೇಕ್ಷಕರಂತೂ ತುದಿಗಾಗಲಲ್ಲಿ ನಿಂತಿದ್ದಾರೆ. 3 ವರ್ಷಗಳ ಬಳಿಕ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದೇ ಭಾನುವಾರ ಸಿನಿಮಾ ಟ್ರೈಲರ್ ಲಾಂಚ್ ಪ್ಲ್ಯಾನ್ ನಡೀತಿದೆ. 'ಪಾಪ್‌ಕಾರ್ನ್‌ ಮಂಕಿಟೈಗರ್' ಬಳಿಕ ಸೂರಿ ಈ ಚಿತ್ರಕ್ಕೆ ಕೈಗೆತ್ತಿಕೊಂಡಿದ್ದರು. ಕಾರಣಾಂತರಗಳಿಂದ ಸಿನಿಮಾ ತೆರೆಗೆ ಬರೋದು ಕೊಂಚ ತಡವಾಯಿತು.

Darshan to grace Abishek Ambareeshs Bad Manners trailer launch

ಸುಧೀರ್ ಕೆ. ಎಂ ನಿರ್ಮಾಣದ 'ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸೇರಿದಂತೆ ಹಲವರು ಸಾಹಿತ್ಯ ಗೀಚಿದ್ದಾರೆ. ಸುರೇಂದ್ರನಾಥ್, ಅಮ್ರಿ ಈ ಚಿತ್ರಕ್ಕೆ ಕತೆ, ಚಿತ್ರಕತೆ ಒದಗಿಸಿದ್ದಾರೆ. ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಭಾನುವಾರ(ನವೆಂಬರ್ 12) 'ಬ್ಯಾಡ್ ಮ್ಯಾನರ್ಸ್' ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅಭಿ ತಾಯಿ ಸಮಲತಾ ಅಂಬರೀಶ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಈಗಾಗಲೇ ಯೂಟ್ಯೂಬ್‌ ಚಾನಲ್‌ಗಳಿಗೆ ಸೂರಿ, ಅಭಿ ಸಂದರ್ಶನ ನೀಡುತ್ತಿದ್ದಾರೆ. ದರ್ಶನ್ ಟ್ರೈಲರ್ ಲಾಂಚ್ ಮಾಡಿ 'ಬ್ಯಾಡ್ ಮ್ಯಾನರ್ಸ್' ಪ್ರಮೋಷನ್‌ಗೆ ದೊಡ್ಡಮಟ್ಟದಲ್ಲಿ ಕಿಕ್‌ ಸ್ಟಾರ್ಟ್‌ ಕೊಡಲಿದ್ದಾರೆ. ನವೆಂಬರ್ 24ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

Darshan to grace Abishek Ambareeshs Bad Manners trailer launch

'ಅಮರ್' ಸಿನಿಮಾ ಮೂಲಕ ಅಭಿ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಆ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಲಿಲ್ಲ. ಇದೀಗ 'ಮ್ಯಾಡ್ ಮ್ಯಾನರ್ಸ್' ಚಿತ್ರದಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಲೇಟ್ ಆದರೂ ಲೇಟೆಸ್ಟ್ ಆಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಇವತ್ತಿನ ಪಾತಕ ಲೋಕದ ಕತೆಯನ್ನು ಸೂರಿ ಚಿತ್ರದಲ್ಲಿ ಕಟ್ಟಿಕೊಟ್ಟಿರುವಂತೆ ಕಾಣುತ್ತಿದೆ. ಡ್ರಗ್ಸ್ ಮಾಫಿಯಾ ಘಾಟು ಚಿತ್ರದಲ್ಲಿದೆ ಎನ್ನಲಾಗ್ತಿದೆ.

ದಯೆ ಇಲ್ಲದ ಖಡಕ್ ಪೊಲೀಸ್ ಆಫೀಸರ್ ರುದ್ರ ಪಾತ್ರದಲ್ಲಿ ಅಭಿಷೇಕ್ ನಟಿಸಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಡೈಲಾಗ್ ಪ್ರೋಮೊಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದ ಸೆನ್ಸಾರ್ ಕೂಡ ಕಂಪ್ಲೀಟ್ ಆಗಿದ್ದು ಬಹಳ ವೈಲೆಂಟ್ ಆಗಿರುವ ಒಂದಷ್ಟು ಸನ್ನಿವೇಶಗಳಿಗೆ ಸೆನ್ಸಾರ್ ಕಟ್ ಹೇಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

ಜಯಣ್ಣ ಕಂಬೈನ್ಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದೆ. 'ದುನಿಯಾ' ಸಿನಿಮಾದಿಂದಲೂ ಜಯಣ್ಣ ಸಂಸ್ಥೆ ಸೂರಿ ಜೊತೆಗಿದೆ. ಇದೇ ಕಾರಣಕ್ಕೆ ಈ ಸಂಸ್ಥೆಗೆ ನಿರ್ದೇಶಕರು ಮುಂದಿನ ಸಿನಿಮಾ ಮಾಡಿಕೊಡಲಿದ್ದಾರೆ. 'ಮ್ಯಾಡ್ ಮ್ಯಾನರ್ಸ್' ಸಿನಿಮಾ ರನ್‌ಟೈಮ್ 2 ಗಂಟೆ 10 ನಿಮಿಷ 34 ಸೆಕೆಂಡ್ ಅನ್ನೋದು ಗೊತ್ತಾಗುತ್ತಿದೆ. ಚಿಕ್ಕದಾಗಿ ಚೊಕ್ಕದಾಗಿ ಸೂರಿ ಸಿನಿಮಾ ಕಟ್ಟಿಕೊಟ್ಟಿರುವಂತೆ ಕಾಣುತ್ತಿದೆ.

ಎಂದಿನ ಸೂರಿ ಸಿನಿಮಾಗಳಂತೆ ವಿಚಿತ್ರ ಹೆಸರಿನ ಕ್ಯಾರೆಕ್ಟರ್‌ಗಳು 'ಮ್ಯಾಡ್ ಮ್ಯಾನರ್ಸ್' ಇರಲಿವೆ. ಕತ್ತಲು ಬೆಳಕಿನ ಆಟ, ವಿಭಿನ್ನ ಕ್ಯಾಮರಾ ಕೋನಗಳನ್ನು ಸನ್ನಿವೇಶಗಳನ್ನು ಸೆರೆದಿರುವುದು ಟೀಸರ್‌ನಲ್ಲೇ ಗೊತ್ತಾಗುತ್ತಿದೆ. ಇನ್ನು ಚಿತ್ರದ ಸಣ್ಣ ಡೈಲಾಗ್ ಮ್ಯೂಟ್ ಮಾಡೋಕೆ ಸೆನ್ಸಾರ್ ಮಂಡಳಿ ಹೇಳಿದೆ. ಜೊತೆಗೆ 5 ಸನ್ನಿವೇಶಗಳಲ್ಲಿ ಸಣ್ಣ ಸಣ್ಣ ಕಟ್‌ ಅಥವಾ ಬದಲಾವಣೆಗೆ ಸೂಚಿಸಿದೆ. ಇದನ್ನೆಲ್ಲಾ ನೋಡಿದರೆ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಹಬ್ಬ ಎನ್ನುವಂತೆ ಇರುವ ಸುಳಿವು ಸಿಗುತ್ತಿದೆ.

ಅಭಿ ಹಾಗೂ ಸೂರಿ ಇಬ್ಬರಿಗೂ ದರ್ಶನ್ ಬಹಳ ಆಪ್ತರು. ದರ್ಶನ್ ನಟನೆಯ 'ಸುಂಟರಗಾಳಿ' ಚಿತ್ರದಲ್ಲಿ ಸೂರಿ ಕೆಲಸ ಮಾಡಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಒಳ್ಳೆ ಬಾಂಧವ್ಯ ಇದೆ. ಇನ್ನು ಅಭಿಗೆ ದರ್ಶನ್ ಅಣ್ಣನಂತೆ. ಹಾಗಾಗಿ ದರ್ಶನ್ 'ಬ್ಯಾಡ್ ಮ್ಯಾನರ್ಸ್' ಟ್ರೈಲರ್ ಲಾಂಚ್‌ ಮಾಡಿ ಗಜಬಲ ತಂದುಕೊಡಲಿದ್ದಾರೆ.

More from Filmibeat

English summary
Darshan as a special guest at the trailer launch event of Bad Manners.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X