For Quick Alerts
  ALLOW NOTIFICATIONS  
  For Daily Alerts

  ಗಂಡು ಮೆಟ್ಟಿದ ನಾಡಲ್ಲಿ ಜಮೀರ್ ಪುತ್ರನ ಮುಂದೆ ದರ್ಶನ್ ಚಾಲೆಂಜ್!

  |

  ಮಾಜಿ ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್ 'ಬನಾರಸ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜಯತೀರ್ಥ ನಿರ್ದೇಶನದ ಈ ರೊಮ್ಯಾಂಟಿಕ್ ಸಸ್ಪೆನ್ಸ್ ಸಿನಿಮಾ ರಾಜೋತ್ಸವ ಸಂಭ್ರಮದಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸ್ತಿದೆ. ಇದೇ ಶನಿವಾರ ಹುಬ್ಬಳ್ಳಿಯಲ್ಲಿ ಭರ್ಜರಿ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ.

  ತಿಲಕ್ ರಾಜ್ ಬಲ್ಲಾಳ್ ಬಹಳ ಅದ್ಧೂರಿಯಾಗಿ 'ಬನಾರಸ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಝೈದ್ ಖಾನ್ ಜೋಡಿಯಾಗಿ ಸೋನಲ್ ಮಂತೆರಿಯೋ ನಟಿಸಿದ್ದು, ಈಗಾಗಲೇ ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಸಾಂಗ್ಸ್‌ ಸೂಪರ್ ಹಿಟ್ ಆಗಿದೆ. 'ಮಾಯಗಂಗೆ' ಸಾಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಕುತೂಹಲಭರಿತ ಟ್ರೈಲರ್‌ ಕೂಡ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಈಗಾಗಲೇ ಹೊರರಾಜ್ಯಗಳಲ್ಲೂ ಝೈದ್ ಖಾನ್ ಹಾಗೂ ಸೋನಲ್ ಸಿನಿಮಾ ಪ್ರಚಾರ ಮಾಡಿ ಬಂದಿದ್ದಾರೆ.

  "ಈಗ ನಾವಿಬ್ಬರು ಹಾಳಾಗ್ತೀವಿ": ಅಂದು ದರ್ಶನ್‌ಗೆ ಸುದೀಪ್ ಈ ಮಾತು ಹೇಳಿದ್ಯಾಕೆ?

  ಸದ್ಯ ಚಿತ್ರರಂಗದಲ್ಲಿ ಪ್ರೀ ರಿಲೀಸ್ ಈವೆಂಟ್‌ಗಳ ಟ್ರೆಂಡ್ ನಡೀತಿದೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ದೊಡ್ಡ ಈವೆಂಟ್ ಮಾಡಿ ಸೂಪರ್ ಸ್ಟಾರ್‌ಗಳನ್ನು ಕರೆಸಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಲಾಗ್ತಿದೆ. 'ಬನಾರಸ್' ಟೀಂ ಕೂಡ ಹುಬ್ಬಳ್ಳಿ ಭಾರೀ ಈವೆಂಟ್‌ಗೆ ಪ್ಲ್ಯಾನ್ ಮಾಡಿದೆ.

   'ಬನಾರಸ್' ಈವೆಂಟ್‌ಗೆ ದರ್ಶನ್ ಬಲ

  'ಬನಾರಸ್' ಈವೆಂಟ್‌ಗೆ ದರ್ಶನ್ ಬಲ

  ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಬ್ಬಳ್ಳಿಯಲ್ಲಿ ನಡೆಯಲಿರುವ 'ಬನಾರಸ್' ಸಿನಿಮಾ ಪ್ರೀ ರಿಲೀಸ್‌ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ಬರ್ತಿದ್ದಾರೆ. ಮಾಜಿ ಸಚಿವರಾದ ಜಮೀರ್ ಅಹಮದ್ ಹಾಗೂ ದರ್ಶನ್ ಆತ್ಮೀಯ ಸ್ನೇಹಿತರು. ಝೈದ್ ಖಾನ್ ಕೂಡ ದಚ್ಚು ಬಳಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಸಿನಿಮಾ ಪೋಸ್ಟರ್ ಲಾಂಚ್‌ ಸಮಯದಿಂದಲೂ ತಂಡದ ಜೊತೆಗಿದ್ದಾರೆ. ಬಹಳ ದಿನಗಳ ನಂತರ ದರ್ಶನ್ ಸಿನಿಮಾವೊಂದರ ಪ್ರೀ ರಿಲೀಸ್ ಈವೆಂಟ್‌ಗೆ ಬರ್ತಿದ್ದಾರೆ.

   ರೈಲ್ವೆ ಸ್ಪೋರ್ಟ್ಸ್‌ ಗ್ರೌಂಡ್‌ನಲ್ಲಿ ಈವೆಂಟ್

  ರೈಲ್ವೆ ಸ್ಪೋರ್ಟ್ಸ್‌ ಗ್ರೌಂಡ್‌ನಲ್ಲಿ ಈವೆಂಟ್

  ಹುಬ್ಬಳ್ಳಿಯ ರೈಲ್ವೆ ಸ್ಪೋರ್ಟ್ಸ್‌ ಗ್ರೌಂಡ್‌ನಲ್ಲಿ ಶನಿವಾರ ಸಂಜೆ 7 ಗಂಟೆಗೆ 'ಬನಾರಸ್' ಸಿನಿಮಾ ಈವೆಂಟ್ ಶುರುವಾಗಲಿದೆ. ದೊಡ್ಡ ವೇದಿಕೆಯಲ್ಲಿ ಚಿತ್ರತಂಡದ ಜೊತೆಗೆ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುವ ಸಾಧ್ಯತೆಯಿದೆ.

   'ಬನಾರಸ್' ಚಿತ್ರದಲ್ಲಿ ದರ್ಶನ್ ನಟನೆ?

  'ಬನಾರಸ್' ಚಿತ್ರದಲ್ಲಿ ದರ್ಶನ್ ನಟನೆ?

  ನಟ ದರ್ಶನ್ ಕೂಡ 'ಬನಾರಸ್' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ನೀಡಿಲ್ಲ. ಪ್ರೀ ರಿಲೀಸ್‌ ಈವೆಂಟ್‌ನಲ್ಲೇ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. 'ರಾಬರ್ಟ್' ನಂತರ ದರ್ಶನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹಾಗಾಗಿ 'ಬನಾರಸ್' ಚಿತ್ರದಲ್ಲಿ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಸ್ನೇಹಪೂರ್ವಕವಾಗಿ ದರ್ಶನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ. ಪಾತ್ರಕ್ಕಾಗಿ ಯಾವುದೇ ಸಂಭಾವನೆಯನ್ನು ಪಡೆದಿಲ್ಲವಂತೆ. ಆದರೆ ನಿರ್ಮಾಪಕರು ದರ್ಶನ್‌ಗೆ ಪ್ರೀತಿಯಿಂದ ದುಬಾರಿ ವಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

   ನವೆಂಬರ್ 4ಕ್ಕೆ ಸಿನಿಮಾ ರಿಲೀಸ್

  ನವೆಂಬರ್ 4ಕ್ಕೆ ಸಿನಿಮಾ ರಿಲೀಸ್

  ಟೈಮ್ ಟ್ರಾವೆಲ್ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ 'ಬನಾರಸ್'. ಆಕ್ಷನ್, ಕಾಮಿಡಿ, ಸಸ್ಪೆನ್ಸ್, ಥ್ರಿಲ್ ಎಲ್ಲವೂ ಸಿನಿಮಾದಲ್ಲಿದೆ. 'ಬನಾರಸ್'(ವಾರಣಾಸಿ) ನಗರದ ಹಿನ್ನಲೆಯಲ್ಲಿ ಈ ಕಥೆಯನ್ನು ಹಣೆಯಲಾಗಿದೆ. ಟ್ರೈಲರ್, ಸಾಂಗ್ಸ್‌ನಲ್ಲಿ ಝೈದ್- ಸೋನಲ್ ಕೆಮೆಸ್ಟ್ರಿ ಚೆನ್ನಾಗಿ ಮೂಡಿ ಬಂದಿರುವುದು ಗೊತ್ತಾಗುತ್ತಿದೆ. ಡೀ ಬೀಟ್ಸ್ ಸಂಸ್ಥೆ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಖರೀರಿಸಿದೆ. ಬೇರೆ ಭಾಷೆಗಳ ವಿತರಣೆ ಹಕ್ಕು ಒಳ್ಳೆ ಬೆಲೆಗೆ ಮಾರಾಟವಾಗಿದೆ. ನವೆಂಬರ್ 4ಕ್ಕೆ ತೆರೆಮೇಲೆ 'ಬನಾರಸ್' ಪ್ರೇಮಕಾವ್ಯ ಅನಾವರಣವಾಗಲಿದೆ.

  ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದರ್ಶನ್ ನಟನೆ: ಸಂಭಾವನೆಯಾಗಿ ಸಿಕ್ತು ದುಬಾರಿ ವಾಚ್!ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದರ್ಶನ್ ನಟನೆ: ಸಂಭಾವನೆಯಾಗಿ ಸಿಕ್ತು ದುಬಾರಿ ವಾಚ್!

  English summary
  Darshan to grace Banaras pre-release event in Hubli on October 22nd. a grand event has been planned for the film in City. Banaras is a Mysterious Love Story, Direced By Bell Bottom Fame Director Jayatheerta. The film stars Zaid Khan and Sonal Monteiro in the lead.
  Wednesday, October 19, 2022, 14:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X