ನೆನಪಿರಲಿ ಪ್ರೇಮ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚಿತ್ರಗಳ ಟೈಟಲ್, ಟ್ರೈಲರ್ ಮತ್ತು ಹಾಡುಗಳನ್ನು ಲಾಂಚ್ ಮಾಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಹೊಸಬರ ಚಿತ್ರಗಳಿಗೆ ಸಾಥ್ ನೀಡುವ ದಚ್ಚು ಹೊಸಬರ ಶ್ರಮ ನೋಡಿ ಸಂತಸಪಟ್ಟು ಚಿತ್ರತಂಡಕ್ಕೆ ಶುಭಹಾರೈಸಿ ಅವರ ಬೆನ್ನು ತಟ್ಟುತ್ತಾರೆ.
ಸದ್ಯ ಡಿ ಬಾಸ್, ಗೆಳೆಯ ನೆನಪಿರಲಿ ಪ್ರೇಮ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಹೌದು ಪ್ರೇಮ್ ಅಭಿನಯದ ಬಹು ನಿರೀಕ್ಷೆಯ 25ನೇ 'ಪ್ರೇಮಂ ಪೂಜ್ಯಂ' ಚಿತ್ರಕ್ಕೆ ದರ್ಶನ್ ಚಾಲನೆ ನೀಡಲಿದ್ದಾರಂತೆ. ಮೇ 2ರಂದು ನಡೆಯುವ ಅದ್ಧೂರಿ ಮುಹೂರ್ತದಲ್ಲಿ ದರ್ಶನ್ ಅತಿಥಿಯಾಗಿ ಭಾಗಿಯಾಗಿ ಗೆಳೆಯ ಪ್ರೇಮ್ ಕನಸಿನ 25ನೇ ಚಿತ್ರಕ್ಕೆ ಶುಭಹಾರೈಸಲಿದ್ದಾರೆ.
ಅಂದ್ಹಾಗೆ ಲವ್ಲಿ ಸ್ಟಾರ್ ಅವರ 'ಪ್ರೇಮಂ ಪೂಜ್ಯಂ'ಗೆ ಯುವ ನಿರ್ದೇಶಕ ಡಾ. ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. 25ನೇ ಚಿತ್ರ ವಿಭಿನ್ನವಾಗಿ ಇರಬೇಕೆಂದು ಪ್ರೇಮ್ ಯುವ ನಿರ್ದೇಶಕರ ಕೈಯಲ್ಲಿ ಬಹುನಿರೀಕ್ಷೆಯ ಚಿತ್ರದ ಜವಬ್ದಾರಿ ವಹಿಸಿದ್ದಾರೆ.

ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಪೋಸ್ಟರ್ಸ್ ನಲ್ಲಿ ಪ್ರೇಮ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 'ಪ್ರೇಮಂ ಪೂಜ್ಯಂ'ನಲ್ಲಿ ಪ್ರೇಮ್ ಅವರು ನಾಲ್ಕೈದು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರೇಮ್ ಗೆ ನಾಯಕಿಯಾಗಿ ಐಂದ್ರಿತಾ ರೈ ಕಾಣಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೇ 2ರಿಂದ ಚಿತ್ರೀಕರಣ ಪ್ರಾರಭವಾಗಲಿದೆ.


Click it and Unblock the Notifications











