For Quick Alerts
  ALLOW NOTIFICATIONS  
  For Daily Alerts

  ರಾಕ್ ಲೈನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ದರ್ಶನ್ ಪಾತ್ರ ರಿವೀಲ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದ್ದು, ಇದೇ ಮಾರ್ಚ್ 11ರಂದು ರಾಬರ್ಟ್ ಕನ್ನಡ ಮತ್ತು ತೆಲುಗಿನಲ್ಲಿ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

  ರಾಬರ್ಟ್ ಸಿನಿಮಾ ಬಳಿಕ ದರ್ಶನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ರಾಬರ್ಟ್ ಚಿತ್ರೀಕರಣ ಮುಗಿಯುತ್ತಿದ್ದಂತೆ ಡಿ ಬಾಸ್ ರಾಜವೀರ ಮದಕರಿ ನಾಯಕ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಒಂದೆರಡು ದಿನಗಳು ಚಿತ್ರೀಕರಣ ಸಹ ಮಾಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತ ಮಾಡಬೇಕಾಯಿತು.

  ಹಮ್ಮರ್ ಕಾರ್ ಮಾರಿದ್ದೇಕೆ ದರ್ಶನ್? ಮತ್ತೊಂದು ದುಬಾರಿ ಕಾರಿನ ಮೇಲೆ ಕಣ್ಣಿಟ್ಟ ಡಿ ಬಾಸ್ಹಮ್ಮರ್ ಕಾರ್ ಮಾರಿದ್ದೇಕೆ ದರ್ಶನ್? ಮತ್ತೊಂದು ದುಬಾರಿ ಕಾರಿನ ಮೇಲೆ ಕಣ್ಣಿಟ್ಟ ಡಿ ಬಾಸ್

  ಕೊರೊನಾ ಲಾಕ್ ಡೌನ್ ಸಡಿಲಿಕೆ ಆಗಿ ಸಹಜ ಸ್ಥಿತಿಗೆ ಬಂದರೂ ಸಹ ರಾಜವೀರ ಮದಕರಿ ನಾಯಕ ಟೇಕಾಫ್ ಆಗಿಲ್ಲ. ಬಳಿಕ ಈ ಸಿನಿಮಾ ನಿಂತು ಹೋಯಿತು ಎನ್ನುವ ಮಾತುಗಳು ಸಹ ಗಾಂಧಿನಗರದಲ್ಲಿ ಕೇಳಿಬರಲು ಪ್ರಾರಂಭವಾಯಿತು. ಅಷ್ಟರಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ತಂಡ ಚಿತ್ರೀಕರಣಕ್ಕೆ ಲೊಕೇಷನ್ ಹುಡುವುದಾಗಿ ಹೊರಡುವ ಮೂಲಕ ಸಿನಿಮಾ ನಿಂತಿಲ್ಲ ಎನ್ನುವ ಸೂಚನೆ ನೀಡಿದರು.

  ಸದ್ಯ ರಾಜವೀರ ಮದಕರಿ ನಾಯಕ ಸಿನಿಮಾ ಮುಂದಕ್ಕೆ ಹೋಗಿದೆ. ಈ ಸಿನಿಮಾ ಪ್ರಾರಂಭ ಮಾಡುವ ಮೊದಲು ರಾಕ್ ಲೈನ್ ವೆಂಕಟೇಶ್ ಜೊತೆ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ರಾಕ್ ಲೈನ್ ಮತ್ತು ದರ್ಶನ್ ಕಾಂಬಿನೇಷನ್ ಸಿನಿಮಾಗೆ ಗೋಲ್ಡ್ ರಿಂಗ್ ಎಂದು ಟೈಟಲ್ ಇಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada

  ನೌಕಾಪಡೆಯ ಅಧಿಕಾರಿಯಾಗಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಕಥಾಹಂದರವನ್ನು ದರ್ಶನ್ ಅವರೇ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗೋಲ್ಡ್ ರಿಂಗ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ದಕ್ಷಿಣ ಭಾರತದ ಭಾಷೆಗಳ ಜೊತೆಗೆ ಹಿಂದಿಯಲ್ಲೂ ತಯಾರಾಗುತ್ತಿದೆ.

  English summary
  Kannada Actor Darshan to play Navy officer in Gold Ring movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X