ಡೆಡ್ಲಿ ಆದಿತ್ಯಗೆ ಮತ್ತೊಮ್ಮೆ ಸಾಥ್ ನೀಡಿದ ಡಿ-ಬಾಸ್ ದರ್ಶನ್
ಡೆಡ್ಲಿ ಖ್ಯಾತಿಯ ಆದಿತ್ಯ ಅಭಿನಯದ 'ಮುಂದುವರೆದ ಅಧ್ಯಾಯ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿಂದೆ ಟೀಸರ್ ರಿಲೀಸ್ ಮಾಡಿ ಕುತೂಹಲ ಮೂಡಿಸಿದ್ದ ಚಿತ್ರತಂಡ ಈಗ ಟ್ರೈಲರ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.
ಜನವರಿ 29 ರಂದು 'ಮುಂದುವರೆದ ಅಧ್ಯಾಯ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಲಿದ್ದಾರೆ. ನಾಳೆ ಸಂಜೆ 6.30ಕ್ಕೆ ಯೂಟ್ಯೂಬ್ನಲ್ಲಿ ಟ್ರೈಲರ್ ನೋಡಲು ಸಿಗಲಿದೆ.
ಈ ಹಿಂದೆ ಮುಂದುವರೆದ ಅಧ್ಯಾಯ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ್ದು ಕೂಡ ದರ್ಶನ್ ಅವರೇ. ಆದಿತ್ಯ ಮತ್ತು ದರ್ಶನ್ ಆತ್ಮೀಯ ಸ್ನೇಹಿತರಾಗಿದ್ದು, ಆದಿತ್ಯ ಸಿನಿಮಾಗಳಿಗೆ ಸದಾ ಜೊತೆಯಾಗಿ ನಿಲ್ಲುತ್ತಾರೆ ಚಾಲೆಂಜಿಂಗ್ ಸ್ಟಾರ್.

ಅಂದ್ಹಾಗೆ, ಈ ಚಿತ್ರ ನಿರ್ದೇಶನ ಮಾಡುತ್ತಿರುವುದು ಬಾಲು ಚಂದ್ರಶೇಖರ್. ರೆಗ್ಯುಲರ್ ಥ್ರಿಲ್ಲರ್ ಚಿತ್ರಗಳನ್ನು ಬಿಟ್ಟು ವಿಶೇಷವಾಗಿ ಮನರಂಜನೆ ನೀಡಬೇಕು ಎಂಬ ಉದ್ದೇಶದಿಂದ ಥ್ರಿಲ್ಲರ್ ಜಾನರ್ ನಲ್ಲಿ ಹೊಸ ಕ್ರಾಂತಿ ಹುಟ್ಟಿಸುವಂತೆ ಈ ಚಿತ್ರ ಮಾಡಿದ್ದಾರೆ ಎನ್ನಲಾಗಿದೆ.
ಬಾಲು ಚಂದ್ರಶೇಖರ್ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಮುಂದುವರೆದ ಅಧ್ಯಾಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ವತಂತ್ರ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ರೆ ಶ್ರೀಕಾಂತ್ ಸಂಕಲನ ಮಾಡುತ್ತಿದ್ದಾರೆ.
ಬೀಟ್ ಗುರು ತಂಡದಲ್ಲಿನ ಜಾನಿ ಮತ್ತು ನಿತಿನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕಣಜ ಎಂಟರ್ ಪ್ರೈಸಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.


Click it and Unblock the Notifications











