ಚಿರು ನಿಧನಕ್ಕೆ ಕಂಬನಿ ಮಿಡಿದ ದರ್ಶನ್ ತೂಗುದೀಪ

ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಇಂದು ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಚಿರು ಅಕಾಲಿಕ ನಿಧನದ ಶೋಕದಲ್ಲಿ ಇಡೀ ಚಿತ್ರರಂಗ ಮುಳುಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಗೆಳೆಯ ಚಿರಂಜೀವಿ ಸರ್ಜಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Recommended Video

Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | FILMIBEAT KANNADA

ಉಸಿರಾಟದ ಸಮಸ್ಯೆಯಿಂದಾಗಿ ಜಯನಗರದ ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಚಿರಂಜೀವಿ ಸರ್ಜಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಎರಡು ಮೂರು ಬಾರಿ ಅವರನ್ನು ಬದುಕಿಸುವ ಯತ್ನ ಮಾಡಿದರೂ ವಿಫಲವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

ಈ ನಡುವೆ ನಟ ದರ್ಶನ್ ತೂಗುದೀಪ ಅವರು ಟ್ವೀಟ್ ಮಾಡಿ,

ಚಿರು ಅಕಾಲಿಕ ಮರಣದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ವಿಧಿ ನಿಜವಾಗಿಯೂ ತುಂಬಾ ಕ್ರೂರ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಮೇಘನ ಹಾಗು ಸರ್ಜಾ ಕುಟುಂಬದವರಿಗೆ ನೀಡಲಿ. May the soul R.I.P ಎಂದು ಹೇಳಿದ್ದಾರೆ.

ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಎಲ್ಲಿ?

ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಎಲ್ಲಿ?

ಈ ನಡುವೆ ಸಾಗರ್ ಅಪೋಲೊ ಆಸ್ಪತ್ರೆಯ ಬಳಿ ಈಗಾಗಲೇ ಸಂಬಂಧಿಕರು, ಕುಟುಂಬದವರು ನೆರೆದಿದ್ದಾರೆ. ಚಿರಂಜೀವಿ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಹಾಗೂ ಅಜ್ಜಿಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ತುಮಕೂರು ರಸ್ತೆಯಲ್ಲಿರುವ ಶಕ್ತಿ ಪ್ರಸಾದ್ ಹಾಗೂ ಮತ್ತೊಬ್ಬ ಮಾವ ಕಿಶೋರ್ ಸರ್ಜಾ ಅವರ ಸಮಾಧಿ ಸ್ಥಳದ ಬಳಿ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಯಿದೆ.

ದರ್ಶನ್ ತೂಗುದೀಪ ಟ್ವೀಟ್ ನಲ್ಲಿ ಏನಿದೆ?

ಚಿರು ಅಕಾಲಿಕ ಮರಣದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ವಿಧಿ ನಿಜವಾಗಿಯೂ ತುಂಬಾ ಕ್ರೂರ ಎಂದು ದರ್ಶನ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ದರ್ಶನ್ ಹಾಗೂ ಚಿರಂಜೀವಿ ಸರ್ಜಾ ಇಬ್ಬರು ಪುಟ್ಟ ನಾಯಿ ಮರಿ ಜೊತೆಗಿರುವ ಚಿತ್ರವೊಂದು ಈ ಟ್ವೀಟ್ ಗೆ ಪ್ರತಿಕ್ರಿಯೆಯಂತೆ ಹಂಚಿಕೆಯಾಗುತ್ತಿದೆ. ಈ ನಾಯಿ ಮರಿ ಕೂಡಾ ವಿಶೇಷವಾಗಿದ್ದು, ಚಿತ್ರರಂಗ ಈ ಇಬ್ಬರು ನಾಯಕ ನಟರ ನಡುವಿನ ಗೆಳೆತನದ ಕೊಂಡಿಯಾಗಿದೆ

ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯ ಎಂದಿದ್ದ ಚಿರು

ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯ ಎಂದಿದ್ದ ಚಿರು

''ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯ ಇದ್ದ ಹಾಗೆ. ಅವರ ಪ್ರೋತ್ಸಾಹಕ್ಕೆ ನಮ್ಮ ಉಡುಗೊರೆ ಇದು'' ಎಂದಿದ್ದಾರೆ. ದರ್ಶನ್ ಗೆ ಚಿರು ನಾಯಿಮರಿಯನ್ನು ಗಿಫ್ಟ್ ನೀಡಿದ್ದೇವೆ ಎಂದು ತಮ್ಮ ಮನೆಯಲ್ಲೇ ಸಾಕಿದ್ದ ನಾಯಿ ಮರಿಯನ್ನು ದರ್ಶನ್ ಗೆ ಪ್ರೀತಿಯ ಉಡುಗೊರೆಯಾಗಿ ನೀಡಿದ್ದರು. ಚಿರಂಜೀವಿಗೆ ಭಾರಿ ಹೆಸರು ತಂದುಕೊಟ್ಟ 'ಶಾನೆ ಟಾಪಾಗವ್ಳೆ ನಮ್ಮುಡುಗಿ..' ಹಾಡು ಎಂದರೆ ದರ್ಶನ್ ಗೂ ತುಂಬಾ ಇಷ್ಟವಾಗಿತ್ತು.

ಸರ್ಜಾ ಕುಟುಂಬದೊಡನೆ ದರ್ಶನ್ ಅನುಬಂಧ

ಸರ್ಜಾ ಕುಟುಂಬದೊಡನೆ ದರ್ಶನ್ ಅನುಬಂಧ

ಚಿರಂಜೀವಿ ಸರ್ಜಾ ಅವರ ಅಜ್ಜ ದಿವಂಗತ ಶಕ್ತಿ ಪ್ರಸಾದ್ ಹಾಗೂ ದರ್ಶನ್ ಅವರ ತಾಯಿ ತೂಗುದೀಪ ಶ್ರೀನಿವಾಸ್ ಇಬ್ಬರು ಸಮಕಾಲೀನರು, ಒಟ್ಟಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇಬ್ಬರ ಕುಟುಂಬದ ನಡುವೆ ಉತ್ತಮ ಬಾಂಧವ್ಯವಿತ್ತು. ಹಿರಿಯ ನಟ ಸುಂದರ್ ರಾಜ್ ಅವರ ಪುತ್ರಿ ಮೇಘನಾ ರಾಜ್ ಅವರು ದರ್ಶನ್ ಅವರ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದ್ದಾರೆ. ದರ್ಶನ್ ಅವರು ಮೇಘನಾ ಹಾಗೂ ಚಿರಂಜೀವಿ ಚಿತ್ರಗಳ ಬಿಡುಗಡೆಗೂ ನೆರವಾಗಿದ್ದರು.

More from Filmibeat

English summary
Challenging Star Darshan Toogudeepa tweeted and condolences to Chiraneejvi Sarja's death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X