"KFI ಕ್ರಿಮಿನಲ್ ದರ್ಶನ್" ಎಂದವರು ದಿಢೀರ್ ಸೈಲೆಂಟ್!

ಸೋಶಿಯಲ್ ಮೀಡಿಯಾದಲ್ಲಿ ಕಳೆದರಡು ದಿನಗಳಿಂದ ನಟ ದರ್ಶನ್ ಫ್ಯಾನ್ಸ್ ಆರ್ಭಟ ಜೋರಾಗಿದೆ. ಕೆಲ ಕಿಡಿಗೇಡಿಗಳ ಹುಚ್ಚಾಟಕ್ಕೆ ಸುಖಾಸುಮ್ಮನೆ ಟ್ರೆಂಡ್ ಶುರುವಾಗಿ ವೈರಲ್ ಆಗುವಂತಾಯಿತು. ಟ್ವಿಟ್ಟರ್ ತುಂಬಾ ಮೀಮ್ಸ್, ಟ್ರೋಲ್ ಪೋಸ್ಟ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಕೆಲವರು ಇನ್ನು ದರ್ಶನ್ ಅಭಿಮಾನಿಗಳನ್ನು ಕೆಣಕುತ್ತಲೇ ಇದ್ದಾರೆ.

"KFI ಕ್ರಿಮಿನಲ್ ದರ್ಶನ್" ಹಾಗೂ "KFI ಕ್ರಿಮಿನಲ್ ಡಿಬಾಸ್" ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಕೆಲವರು ಟ್ರೆಂಡ ಮಾಡುತ್ತಲೇ ಇದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ತಕ್ಕ ಉತ್ತರ ಕೊಡುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲವರು ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ ಎಂದು ಕೇಳುತ್ತಿದ್ದಾರೆ. ಆದರೆ ದರ್ಶನ್ ಫ್ಯಾನ್ಸ್ ಇದಕ್ಕೆ ಒಪ್ಪುತ್ತಿಲ್ಲ. ತೆಲುಗು ಸ್ಟಾರ್ ನಟರ ಅಭಿಮಾನಿಗಳು ದರ್ಶನ್ ಅಭಿಮಾನಿಗಳನ್ನು ಕೆಣಕಿ ಈಗ ರಾಜಿ ಮಾತು ಆಡುತ್ತಿದ್ದಾರೆ.

Darshan Troll War Erupts Online After Chamundi Hills Visit Fans Clash with Telugu Star Supporters

ಇತ್ತೀಚೆಗೆ ನಟ ದರ್ಶನ್ ಫ್ಯಾಮಿಲಿ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ದರ್ಶನ್ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದರು. ಅದನ್ನು ನೋಡಿ ಕೆಲ ತೆಲುಗು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದರು. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಈ ಬಿಲ್ಡಪ್ ಬೇಕಾ? ಎಂದು ಟ್ರೋಲ್ ಮಾಡಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ತಿರುಗೇಟು ಕೊಡಲು ಆರಂಭಿಸಿದರು. ಮುಂದೆ ಇದು ಸೋಶಿಯಲ್ ಮೀಡಿಯಾ ವಾರ್‌ಗೆ ವೇದಿಕೆ ಆಗಿತ್ತು.

ದರ್ಶನ್ ಬಗ್ಗೆ ತೆಲುಗು ನಟರ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಪವನ್ ಕಲ್ಯಾಣ್, ಪ್ರಭಾಸ್, ಜ್ಯೂ. ಎನ್‌ಟಿಆರ್ ಫ್ಯಾನ್ಸ್ ಒಟ್ಟಾಗಿ ಮುಗಿಬಿದ್ದರು. ತಮ್ಮ ತಮ್ಮಲೇ ಕೆಸರೆರಚಾಟ ಮಾಡುತ್ತಿದ್ದವರು ಒಮ್ಮೆಲೆ ದರ್ಶನ್ ಅಭಿಮಾನಿಗಳ ವಿರುದ್ಧ ನಿಂತರು. ಆದರೆ ಅಷ್ಟೇ ಬೇಗ ಸುಮ್ಮನಾಗಿಬಿಟ್ಟರು. "KFI ಕ್ರಿಮಿನಲ್ ದರ್ಶನ್" ಎಂದು ಟ್ರೋಲ್ ಮಾಡುತ್ತಿದ್ದವರು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸೋಣ, ಇದರಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಉಲ್ಟಾ ಹೊಡೆದಿದ್ದಾರೆ.

ಮುಖ್ಯವಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಹೀಗೆ ರಾಜಿಗೆ ಮುಂದಾಗಿದ್ದಾರೆ. ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಜುಲೈ 24ಕ್ಕೆ ತೆರೆಗೆ ಬರಲಿದೆ. ಕರ್ನಾಟಕದಲ್ಲಿಯೂ ದೊಡ್ಡದಾಗಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಅದಕ್ಕೆ ಸಮಸ್ಯೆ ಆಗಬಾರದು ಎಂದು ಈಗ ರಾಜಿ ಬಂದಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಹುಚ್ಚಾಟಕ್ಕೆ ಸೋಶಿಯಲ್ ಮೀಡಿಯಾ ವೇದಿಕೆ ಆಗುತ್ತಿದೆ.

ಸ್ಟಾರ್ ನಟರು ತಮ್ಮ ಪಾಡಿಗೆ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅಭಿಮಾನದ ಹೆಸರಿನಲ್ಲಿ ಕೆಲವರು ಹೀಗೆ ಅತಿಯಾಗಿ ಆಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನೇ ಗ್ರೇಟ್ ಎಂದು ಹೇಳುವ ಭರದಲ್ಲಿ ಹೀಗೆ ಬೇಡದ ವಿಚಾರಗಳನ್ನು ಎಳೆದು ತರುತ್ತಾರೆ. ಫೇಕ್ ಸೋಶಿಯಲ್ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿ ಅಟ್ಟಹಾಸ ಮೆರೆಯುತ್ತಾರೆ. ಈ ಹಿಂದೆ ಕರ್ನಾಟಕದಲ್ಲಿ ಕೂಡ ಕೆಲವರ ಬಗ್ಗೆ ಕಿಡಿಗೇಡಿಗಳು ಇಂತಹ ಕೀಳುಮಟ್ಟದ ಪೋಸ್ಟ್‌ ಮಾಡಿದ್ದರು. ಅದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಮತ್ತೊಂದು ಕಡೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲಿದೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ವಿಚಾರಣಧೀನ ಕೈದಿಯಾಗಿ ಜೈಲಿಗೆ ಹೋಗುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.

More from Filmibeat

English summary
Hashtags like "KFI Criminal Darshan" trend as tensions rise online
Read more about: darshan devil tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X