ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ

ಆರಂಭದಲ್ಲಿ ನಿಮ್ಹಾನ್ಸ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ದಾಖಲಿಸಲಾಯಿತು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರ ಸ್ಥಿತಿ ನಾರ್ಮಲ್ ಗೆ ತಲುಪಿದೆ ಎಂದು ವೈದ್ಯರು ಹೇಳಿದ್ದಾರೆ.
ವಿಜಯನಗರ ಪೊಲೀಸರು ಛಾಲೆಂಜಿಂಗ್ ನಟ ಬಿರುದಾಂಕಿತ ದರ್ಶನ್ (ತೂಗುದೀಪ ಶ್ರೀನಿವಾಸ್ ಅವರ ಮಗ) ಅವರನ್ನು ಸೆ. 9ರ ಶುಕ್ರವಾರ ಬಂಧಿಸಿದ್ದರು. ನಗರದ ಒಂದನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಜೈಲಿನಲ್ಲಿದ್ದ ದರ್ಶನ್ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನಲೆಯಲ್ಲಿ ಜೈಲಿನ ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರು.
ಪರಪ್ಪನ ಅಗ್ರಹಾರ ತಲುಪಿದ ವಿಐಪಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ದರ್ಶನ್ ಜೈಲು ವಾಸಕ್ಕಿಂತ ಆಸ್ಪತ್ರೆ ವಾಸವೇ ಸೂಕ್ತವೆಂದು ನಾಟಕವಾಡುತ್ತಿರಬಹುದೇ ಎಂಬ ಸಂಶಯ ಕೂಡ ವ್ಯಕ್ತವಾಗಿದೆ.
More from Filmibeat
English summary
Sandalwood actor, Challenging star Darshan Tugudeep, was shifted from Parappana Agrahara jail to Rajiv Gandhi Institute of Chest Diseases in the city.


Click it and Unblock the Notifications











