ನೆಚ್ಚಿನ ನಟಿಯ ನೃತ್ಯ ನೋಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್
ಸಾಮಾನ್ಯವಾಗಿ ಸ್ಟಾರ್ ಗಳೆಂದರೆ ಅವರಿಗೆ ಸಾಕಷ್ಟು ಅಭಿಮಾನಿಗಳು, ಸಂಘಗಳು ಇದ್ದೇ ಇರುತ್ತೆ. ಇನ್ನು ಸ್ಟಾರ್ ಗಳು ಕೂಡ ಚಿತ್ರರಂಗಕ್ಕೆ ಬರುವ ಮುನ್ನ, ಬಂದ ನಂತರ ಯಾರಾದರೂ ಒಬ್ಬರಿಗೆ ಅಭಿಮಾನಿ ಆಗಿರುತ್ತಾರೆ. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ಕೂಡ ಒಬ್ಬರಿಗೆ ಅಭಿಮಾನಿ.
ಕೆಲವು ವರ್ಷಗಳ ಹಿಂದೆ ಡಿ ಬಾಸ್ ಈ ವಿಚಾರವನ್ನು ತುಂಬು ಸಭೆಯಲ್ಲಿಯೇ ಹೇಳಿದ್ದರು. ದರ್ಶನ್ ಅಭಿಮಾನಿ ಆಗಿರುವುದು ಯಾರಿಗೆ ಎನ್ನುವುದನ್ನು ತಿಳಿದ ದಾಸನ ಫ್ಯಾನ್ಸ್ ಹಾಗೂ ಗಾಂಧಿನಗರದ ಮಂದಿ ನಿಜಕ್ಕೂ ಆಶ್ಚರ್ಯ ಪಟ್ಟಿದ್ದರು.
ಸುಮಾರು ವರ್ಷದ ನಂತ್ರ ಡಿ ಬಾಸ್ ತನ್ನ ನೆಚ್ಚಿನ ಸ್ಟಾರ್ ಡ್ಯಾನ್ಸ್ ನೋಡಲು ಹೋಗುತ್ತಿದ್ದಾರೆ. 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಕಾರ್ಯಕ್ರಮದಲ್ಲಿ ದರ್ಶನ್ ಇಷ್ಟ ಪಡುವ ನಟಿ ಅನಿಶ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಹಾಗಾದ್ರೆ ದರ್ಶನ್ ಮುಂದೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವ ನಟಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ನೆಚ್ಚಿನ ಸ್ಟಾರ್ ನೋಡಲು ಹೊರಟ ಡಿ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆ ಹಾಗೂ ಬೆಳ್ಳಿತೆರೆಯ ನಾಯಕ ನಟಿ ಅನುಷಾ ರಂಗನಾಥ್ ಅಭಿಮಾನಿ. ಅವರ 'ಗೋಕುಲದಲ್ಲಿ ಸೀತೆ' ಧಾರಾವಾಹಿ ನೋಡಿ ಇಂಪ್ರೆಸ್ ಆಗಿರುವುದಾಗಿ ಖುದ್ದು ದರ್ಶನ್ ಅವರೇ ತಿಳಿಸಿದ್ದರು.

ಅನಿಶ್ ಸಿನಿಮಾ ಕಾರ್ಯಕ್ರಮದಲ್ಲಿ ದರ್ಶನ್
'ವಾಸು ನಾನ್ ಪಕ್ಕಾ ಕಮರ್ಷಿಯಲ್' ಅನಿಶ್ ಅಭಿನಯದ ಸಿನಿಮಾ. ಮುಂದಿನ ತಿಂಗಳು ಬಿಡುಗಡೆ ಆಗುತ್ತಿರುವ ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ನಡೆಯುತ್ತಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ದರ್ಶನ್ ಆಗಮಿಸುತ್ತಿದ್ದಾರೆ.

ವಾಸು ಚಿತ್ರ ಸಮಾರಂಭದಲ್ಲಿ ಅನುಷಾ ಡ್ಯಾನ್ಸ್
ದರ್ಶನ್ ಆಗಮಿಸುತ್ತಿರು ಕಾರ್ಯಕ್ರಮದಲ್ಲಿ ಅನುಷಾ, ಅನಿಶ್ ಅಭಿನಯದ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಸುಮಾರು ವರ್ಷದ ನಂತರ ಸ್ಟಾರ್ ಮತ್ತು ಅಭಿಮಾನಿ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉತ್ತಮ ಅವಕಾಶದ ನಿರೀಕ್ಷೆಯಲ್ಲಿ
ಕಿರುತೆರೆಯಿಂದ ಪ್ರಖ್ಯಾತಿ ಪಡೆದ ನಟಿ ಅನುಷಾ ಸದ್ಯ ಸಿನಿಮಾಗಳಲ್ಲಿ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಎರಡು, ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಅನುಷಾ.


Click it and Unblock the Notifications











