'ಕ್ರಾಂತಿ' ಪೋಲ್ಯಾಂಡ್ ಶೂಟಿಂಗ್ ಬಗ್ಗೆ ದರ್ಶನ್ ಟ್ವೀಟ್: ಫ್ಯಾನ್ಸ್‌ಗೆ ಋಣಿ ಎಂದ ದಾಸ!

ದರ್ಶನ್​ ನಟನೆಯ ಬಹುನಿರೀಕ್ಷಿತ​ ಸಿನಿಮಾ ಕ್ರಾಂತಿ. ಕ್ರಾಂತಿ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಈಗಾಗಲೇ ಬಹುತೇಕ ಶೂಟಿಂಗ್​ ಮುಕ್ತಾಯವಾಗಿದೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್​​​​​ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಫಸ್ಟ್​ ಲುಕ್ ಟೀಸರ್​ ರಿಲೀಸ್​ ಆಗಿ ಕುತೂಹಲ ಹೆಚ್ಚಿಸಿದೆ.

ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಟ್ಟಿರುವ ನಿರ್ಮಾಪಕಿ ಶೈಲಜಾ ನಾಗ್ ಇದು ಅಕ್ಷರ ಕ್ರಾಂತಿ ಎಂದಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್​ ಮಾಡಿ ಮುಗಿಸಿದೆ ಸಿನಿಮಾ ತಂಡ. ಈಗಾಗಲೇ ಬೆಂಗಳೂರು, ಹೈದರಾಬಾದ್​​ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳ್ತಿದ್ದು, ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ.

ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳೋದರ ಜೊತೆಗೆ ಮ್ಯೂಸಿಕ್​ ಕಂಪೋಸ್​ ಮಾಡ್ತಿದ್ದಾರೆ. ಇನ್ನು ಸಿನಿಮಾದ ಕೆಲವು ಭಾಗವ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು, ಸಾಂಗ್ ಚಿತ್ರೀಕರಣಕ್ಕಾಗಿ ಸಿನಿಮಾತಂಡ ಸದ್ಯ ವಿದೇಶಕ್ಕೆ ಹಾರಿದೆ. ಈ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿ ತಿಳಿದ್ದಾರೆ.

ಪೋಲ್ಯಾಂಡ್‌ನಲ್ಲಿ ಕ್ರಾಂತಿ ಶೂಟಿಂಗ್!

ಪೋಲ್ಯಾಂಡ್‌ನಲ್ಲಿ ಕ್ರಾಂತಿ ಶೂಟಿಂಗ್!

ದರ್ಶನ್ ಮುಂದಿನ ಸಿನಿಮಾ 'ಕ್ರಾಂತಿ'. ವಿ.ಹರಿಕೃಷ್ಣ ನಿರ್ದೇಶಿಸುತ್ತಿರುವ ಈ ಸಿನಿಮಾ ಟಾಕಿ ಪೋಷನ್ ಸದ್ದಿಲ್ಲದೆ ನಡೆದಿತ್ತು. ಈಗ ಇಡೀ ತಂಡ ಪೋಲ್ಯಾಂಡ್‌ಗೆ ಪಯಣ ಬೆಳೆಸಿದೆ. ದರ್ಶನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಅವರ ಪುತ್ರಿ ಪ್ರೈವೆಟ್ ಜೆಟ್‌ನಲ್ಲಿ ಪಯಣ ಬೆಳೆಸಿದ್ದರ ಬಗ್ಗೆ ಈ ಹಿಂದೆಯೇ ವಿಡಿಯೋ ಹಂಚಿಕೊಂಡು ಮಾಹಿತಿ ಹೊರ ಹಾಕಿದ್ದರು. ಕೊನೆಯ ಹಂತದ ಚಿತ್ರೀಕರಣಕ್ಕೆ 'ಕ್ರಾಂತಿ' ಸಿನಿಮಾ ತಂದ ಸದ್ಯ ಪೋಲ್ಯಂಡ್‌ನಲ್ಲಿ ಬೀಡು ಬಿಟ್ಟಿದೆ.

ಕ್ರಾಂತಿಹೊಸ ಫೊಟೋ ಹಂಚಿಕೊಂಡ ದರ್ಶನ್!

ಕ್ರಾಂತಿಹೊಸ ಫೊಟೋ ಹಂಚಿಕೊಂಡ ದರ್ಶನ್!

ಕ್ರಾಂತಿ ಚಿತ್ರದ ಶೂಟಿಂಗ್ ಬಗ್ಗೆ ಸ್ವತಃ ನಟ ದರ್ಶನ್ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದಲ್ಲಿನ ತಮ್ಮ ಹೊಸ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ದರ್ಶನ್ ಫೊಟೋವನ್ನು ಹಂಚಿಕೊಂಡಿದ್ದಾರೆ. ಸೂಟು, ಬೂಟು ತೊಟ್ಟು ನಟ ದರ್ಶನ್ ಗ್ಲಾಮರ್ ಲಯಕ್‌ನಲ್ಲಿ ಮಿಂಚಿದ್ದಾರೆ. ದರ್ಶನ್ ಈ ಲುಕ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

ಅಭಿಮಾನಿಗಳಿಗೆ ದರ್ಶನ್ ಧನ್ಯವಾದ!

ಪೋಲ್ಯಾಂಲ್‌ನಲ್ಲಿ ಶೂಟಿಂಗ್ ವೇಳೆ ಕ್ಲಿಕ್ಕಿಸಿದ ಫೊಟೋ ಹಂಚಿಕೊಂಡಿರುವ ದರ್ಶನ್ ತಮ್ಮಾಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. "ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್ ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ". ಎಂದು ದರ್ಶನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

NRI ಪಾತ್ರದಲ್ಲಿ ದರ್ಶನ್!

NRI ಪಾತ್ರದಲ್ಲಿ ದರ್ಶನ್!

ಪೋಲ್ಯಾಂಡ್‌ನಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಅವರ ಸಾಂಗ್ ಶೂಟಿಂಗ್ ಮಾಡಲಿದೆ. ಜೊತೆಗೆ ಕೆಲವು ಪೋಷನ್‌ಗಳನ್ನೂ ಚಿತ್ರೀಕರಣ ಮಾಡಲಿದೆ ಎಂದು ಆಪ್ತವಲಯಗಳು ತಿಳಿಸಿವೆ. ದರ್ಶನ್ ಈ ಚಿತ್ರದಲ್ಲಿ ಎನ್‌ಆರ್‌ಐ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ 'ಕ್ರಾಂತಿ' ಸಿನಿಮಾದ ಹಾಡುಗಳನ್ನೂ ವಿದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

ವರ್ಷಾಂತ್ಯದಲ್ಲಿ ಕ್ರಾಂತಿ ಅಬ್ಬರ!

ವರ್ಷಾಂತ್ಯದಲ್ಲಿ ಕ್ರಾಂತಿ ಅಬ್ಬರ!

ಕೊರೊನಾ ಕಾರಣಕ್ಕೆ 'ಕ್ರಾಂತಿ' ಸಿನಿಮಾ ಕೂಡ ತಡವಾಗಿ ಶುರುವಾಗಿದೆ. ಆದರೆ ಇನ್ನು ಹೆಚ್ಚು ದಿನ ಕ್ರಾಂತಿಗಾಗಿ ಕಾಯಬೇಕಾಗಿಲ್ಲ. ಜುಲೈ ಅಂತ್ಯದೊಳಗೆ ಸಿನಿಮಾ ಸಿದ್ಧವಾಗಲಿದೆ. ಬಳಿಕ ಸಿನಿಮಾ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗುತ್ತದೆ. ಇನ್ನು 'ಕ್ರಾಂತಿ' ಇದೇ ವರ್ಷ ನವೆಂಬರ್‌ನಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ. ಈ ಬಗ್ಗೆ ಸದ್ಯಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದ್ದು, ಟ್ರೈಲರ್ ಕೂಡ ರಿಲೀಸ್ ಬಗ್ಗೆಯೂ ಮಾಹಿತಿ ಹೊರ ಬೀಳಲಿದೆ.

More from Filmibeat

English summary
Darshan Tweet About Kranti Movie Shootinig In Poland And Shared New Photo, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X