ಸದಾಶಿವ ಬ್ರಹ್ಮಾವರ್ ಅಗಲಿಕೆಗೆ ಸಂತಾಪ ಸೂಚಿಸಿದ ನಟ ದರ್ಶನ್
Recommended Video

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರು ನಿನ್ನೆ (ಸೆಪ್ಟೆಂಬರ್ 19) ಅನಾರೋಗ್ಯದ ಹಿನ್ನಲೆ ಕೊನೆಯುಸಿರೆಳೆದಿದ್ದರು. ಇಂದು ಈ ಸುದ್ದಿ ಹೊರಬಿದ್ದಿದ್ದು, ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ.
ಅಂತಿಮ ಘಳಿಗೆಯಲ್ಲೂ ತಮ್ಮ ಸ್ವಾಭಿಮಾನವನ್ನ ಬಿಡದೆ ಹಿರಿಯ ಕಲಾವಿದನ ಅಗಲಿಕೆಗೆ ಕನ್ನಡ ನಟ ದರ್ಶನ್ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್ ಮೂಲಕ ಕಲಾಬಂಧುವಿನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸದಾಶಿವ ಬ್ರಹ್ಮಾವರ್ ಅವರು ದರ್ಶನ್ ಅವರ ಹಲವು ಚಿತ್ರಗಳಲ್ಲಿ ನಟಿಸಿದ್ದರು.
''ಕನ್ನಡ ಚಿತ್ರರಂಗಕ್ಕಾಗಿ ದುಡಿದ ಹಿರಿಯ ನಟರಾದ ಸದಾಶಿವ ಬ್ರಹ್ಮಾವರ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ'' ಎಂದು ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಸದಾಶಿವ ಬ್ರಹ್ಮಾವರ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಸೆಪ್ಟೆಂಬರ್ 19) ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಇಂದು ಬನಶಂಕರಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾಶಿವ ಬ್ರಹ್ಮಾವರ್ ಅವರು ಬಣ್ಣ ಹಚ್ಚಿದ್ದಾರೆ. ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್ಕುಮಾರ್, ಸುದೀಪ್, ದರ್ಶನ್.. ಸೇರಿದಂತೆ ಹಲವರು ಜೊತೆ ಅಭಿನಯಿಸಿದ್ದರು.


Click it and Unblock the Notifications











