twitter
    For Quick Alerts
    ALLOW NOTIFICATIONS  
    For Daily Alerts

    ಟಿವಿಯಲ್ಲೂ ದರ್ಶನ್ ಕಿಂಗ್: ಹೆಚ್ಚು ಮಂದಿ ನೋಡಿದ್ದು ಈ ಸಿನಿಮಾವನ್ನು

    |

    ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಸಿನಿಮಾಗಳು ಕೋಟಿ-ಕೋಟಿ ಬಾಚುವುದು ಮಾಮೂಲಿ ವಿಷಯವೆಂಬಂತಾಗಿದೆ. ಆದರೆ ಅವರು ಚಿಕ್ಕಪರದೆಯಲ್ಲೂ ಟಿವಿಯಲ್ಲೂ ಮೆಚ್ಚಿನ ನಟ ಆಗಿ ಹೊರಹೊಮ್ಮಿದ್ದಾರೆ.

    ಟಿವಿಗಳ ವೀಕ್ಷಣೆಯ ಅಂಕಿ-ಅಂಶಗಳನ್ನು ಮಾಪಿಸುವ ಬಾರ್ಕ್ ಇಂಡಿಯಾ ಬಿಡುಗಡೆ ಮಾಡಿರುವ ಏಪ್ರಿಲ್ 18 ರಿಂದ ಏಪ್ರಿಲ್ 24 ರ ವರೆಗೆ ಪ್ರಸಾರವಾದ ಕರ್ನಾಟಕದ ಟಿವಿ ಕಾರ್ಯಕ್ರಮಗಳಲ್ಲಿ ದರ್ಶನ್ ಅವರ ಸಿನಿಮಾ ಹೆಚ್ಚು ಜನರಿಂದ ವೀಕ್ಷಣೆಗೆ ಒಳಪಟ್ಟಿದೆಯಂತೆ.

    ಟಾಪ್ 5 ಹೆಚ್ಚು ವೀಕ್ಷಣೆಗೆ ಒಳಪಟ್ಟ ಕಾರ್ಯಕ್ರಮಗಳ ಪಟ್ಟಿಯನ್ನು ಬಾರ್ಕ್ ಬಿಡುಗಡೆ ಮಾಡಿದ್ದು, ದರ್ಶನ್ ಸಿನಿಮಾ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ ಎರಡನೇ ಸ್ಥಾನವೂ ಸಹ ದರ್ಶನ್ ಸಿನಿಮಾಕ್ಕೆ ಸಂದಿದೆ. ಯಾವುದು ಆ ಎರಡು ಸಿನಿಮಾಗಳು, ಇನ್ನುಳಿದ ಮೂರು ಸ್ಥಾನಗಳಲ್ಲಿ ಯಾವ ಕಾರ್ಯಕ್ರಮಗಳಿವೆ ತಿಳಿಯಲು ಮುಂದೆ ಓದಿ...

    ಐತಿಹಾಸಿಕ ಸಿನಿಮಾಕ್ಕೆ ಮೊದಲ ಸ್ಥಾನ

    ಐತಿಹಾಸಿಕ ಸಿನಿಮಾಕ್ಕೆ ಮೊದಲ ಸ್ಥಾನ

    ಏಪ್ರಿಲ್ 18 ರಿಂದ ಏಪ್ರಿಲ್ 24 ರ ವರೆಗೆ ಪ್ರಸಾರವಾದ ಟಿವಿ ಕಾರ್ಯಕ್ರಮಗಳು, ಸಿನಿಮಾಗಳ ಪೈಕಿ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾವನ್ನು ಅತಿ ಹೆಚ್ಚು ಮಂದಿ ನೋಡಿದ್ದಾರೆ. 4809 ಇಂಪ್ರೆಶನ್ಸ್ ಕುರುಕ್ಷೇತ್ರ ಸಿನಿಮಾಕ್ಕೆ ದಾಖಲಾಗಿದೆ.

    ಎರಡನೇ ಸ್ಥಾನವೂ ಸಹ ದರ್ಶನ್ ಸಿನಿಮಾಕ್ಕೆ ದೊರೆತಿದೆ

    ಎರಡನೇ ಸ್ಥಾನವೂ ಸಹ ದರ್ಶನ್ ಸಿನಿಮಾಕ್ಕೆ ದೊರೆತಿದೆ

    ಟಾಪ್‌ 5 ನಲ್ಲಿ ಮೊದಲೆರಡು ಸ್ಥಾನಗಳು ದರ್ಶನ್ ಅವರ ಸಿನಿಮಾಕ್ಕೆ ದೊರೆತಿರುವುದು ವಿಶೇಷ. ಮತ್ತೊಂದು ಕನ್ನಡ ಚಾನೆಲ್ ನಲ್ಲಿ ಪ್ರಸಾರವಾದ ಮಿ.ಐರಾವತ ಸಿನಿಮಾವನ್ನು ಸಹ ಹೆಚ್ಚು ಮಂದಿ ವೀಕ್ಷಿಸಿದ್ದು, ಟಾಪ್ ಐದರಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

    ನಟಸಾರ್ವಭೌಮ ಸಿನಿಮಾಕ್ಕೆ ಮೂರನೇ ಸ್ಥಾನ

    ನಟಸಾರ್ವಭೌಮ ಸಿನಿಮಾಕ್ಕೆ ಮೂರನೇ ಸ್ಥಾನ

    ಪುನೀತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾಕ್ಕೆ ಮೂರನೇ ಸ್ಥಾನ ಲಭಿಸಿದೆ. ಈ ಸಿನಿಮಾಕ್ಕೆ ಬಾರ್ಕ್ ಇಂಡಿಯಾ ಪ್ರಕಾರ 4065 ಇಂಪ್ರೆಶನ್ಸ್ ದೊರೆತಿದೆ.

    ನಾಲ್ಕನೇ ಸ್ಥಾನದಲ್ಲಿದೆ ಧಾರಾವಾಹಿ

    ನಾಲ್ಕನೇ ಸ್ಥಾನದಲ್ಲಿದೆ ಧಾರಾವಾಹಿ

    ಧಾರಾವಾಹಿ 'ಗಟ್ಟಿಮೇಳ' ನಾಲ್ಕನೇ ಸ್ಥಾನದಲ್ಲಿದೆ. ಟಾಪ್ ಐದು ಪಟ್ಟಿಯಲ್ಲಿ ನಾಲ್ಕು ಸಿನಿಮಾಗಳಿವೆ. ಇದರ ಮಧ್ಯೆ ಧಾರಾವಾಹಿಯೊಂದು ಸ್ಥಾನ ಪಡೆದುಕೊಂಡಿರುವುದು ವಿಶೇಷ.

    ಐದನೇ ಸ್ಥಾನದಲ್ಲಿದೆ ಶರಣ್ ಚಿತ್ರ

    ಐದನೇ ಸ್ಥಾನದಲ್ಲಿದೆ ಶರಣ್ ಚಿತ್ರ

    ನಟ ಶರಣ್ ಅಭಿನಯದ ವಿಕ್ಟರಿ-2 ಸಿನಿಮಾ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪಟ್ಟಿಯು ಕೇವಲ ಏಪ್ರಿಲ್ 18 ರಿಂದ ಏಪ್ರಿಲ್ 24 ರ ವರೆಗೆ ಪ್ರಸಾರವಾದ ಕಾರ್ಯಕ್ರಮಗಳದ್ದಾಗಿದೆ.

    English summary
    Actor Darshan's two movies listed top in barc India list of April 18 to April 24 week.
    Friday, May 1, 2020, 21:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X