ದರ್ಶನ್ ಫಾಲೋ ಮಾಡ್ತಿದ್ದ ಆ 6 ಜನ ಯಾರು? ಸುಮಲತಾ ಆಸ್ಕರ್ ಅವಾರ್ಡ್ ಪೋಸ್ಟ್ ಅರ್ಥವೇನು?
ಸೋಶಿಯಲ್ ಮೀಡಿಯಾದಲ್ಲಿ ನಡೆದ ದಿಢೀರ್ ಬೆಳವಣಿಗೆ ಚಂದನವನದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ. ದರ್ಶನ್ ಹಾಗೂ ಅಂಬರೀಶ್ ಕುಟುಂಬದ ನಡುವಿನ ಒಡನಾಟ ಎಂಥದ್ದು ಎನ್ನುವುದು ಗೊತ್ತೇಯಿದೆ. ಅಂಬಿ ಅವರನ್ನು ಅಪ್ಪಾಜಿ ಎನ್ನುತ್ತಿದ್ದ ದರ್ಶನ್, ಸುಮಲತಾ ಅವರನ್ನು ಮದರ್ ಇಂಡಿಯಾ ಎಂದೇ ಕರೆಯುತ್ತಾರೆ.
ಸುಮಲತಾ ಅಂಬರೀಶ್ ಕೂಡ ನನ್ನ ದೊಡ್ಡಮಗ ದರ್ಶನ್ ಎನ್ನುತ್ತಿದ್ದರು. ಆದರೆ ಇದೀಗ ಇಬ್ಬರ ನಡುವೆ ಬಿರುಕು ಮೂಡಿದ್ಯಾ? ಎನ್ನುವ ಅನುಮಾನ ಮೂಡಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಖಾತೆಗಳಲ್ಲಿ ತಮ್ಮ ಆಪ್ತರನ್ನು ಎಲ್ಲರೂ ಫಾಲೋ ಮಾಡುತ್ತಿದ್ದಾರೆ. ನಟ ದರ್ಶನ್ ಕೂಡ ಇನ್‌ಸ್ಟಾಮ್‌ಗಳಲ್ಲಿ ಕೇವಲ 6 ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ಅದರಲ್ಲಿ ಪತ್ನಿ ವಿಜಯಲಕ್ಷ್ಮಿ ಅವರನ್ನು ಬಿಟ್ಟಿದ್ದರು. ಇತ್ತೀಚೆಗೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗಿತ್ತು.

ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್ ದಿಢೀರನೆ ಸುಮಲತಾ ಅಂಬರೀಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಅದರ ಬೆನ್ನಲ್ಲೇ ಸುಮಲತಾ ಮಾಡಿರುವ ಗೂಡಾರ್ಥದ ಪೋಸ್ಟ್ ಕೂಡ ಭಾರೀ ಚರ್ಚೆ ಹುಟ್ಟಾಕ್ಕಿದೆ. ಎರಡೂ ಕುಟುಂಬಗಳ ನಡುವೆ ಬಿರುಕು ಮೂಡಿದ್ಯಾ? ಎನ್ನುವ ಊಹಾಪೋಹ ಶುರುವಾಗಿದೆ. ಅಷ್ಟಕ್ಕೂ ಇದ್ದಕ್ಕಿದಂತೆ ದರ್ಶನ್ ಯಾಕೆ ಇನ್‌ಸ್ಟಾಗ್ರಾಮ್‌ನಲ್ಲಿ ತಾವು ಫಾಲೋ ಮಾಡುತ್ತಿದ್ದ 6 ಖಾತೆಗಳನ್ನು ಅನ್‌ಫಾಲೋ ಮಾಡಿದರು ಎನ್ನುವ ಬಗ್ಗೆ ಗೊಂದಲ ಮೂಡಿದೆ.
ನಟ ದರ್ಶನ್ ಬೆನ್ನು ನೋವಿನ ಸಮಸ್ಯೆ ನಡುವೆಯೂ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಇನ್ನೇನು ಎಲ್ಲಾ ಸರಿ ಹೋಯಿತು ಎಂದುಕೊಳ್ಳುವ ವೇಳೆಗೆ ಇನ್‌ಸ್ಟಾಗ್ರಾಮ್ ವಿಚಾರ ಚರ್ಚೆಗೆ ಬಂದಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿ ಬ ಜಾಮೀನು ಪಡೆದು ಬರುವಂತಾಯಿತು. ಬೆನ್ನು ನೋವಿನಿ ಸಮಸ್ಯೆಯಿಂದ ಬಳಲಿದ್ದ ಅವರು ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು.

6 ಖಾತೆಗಳು ಅನ್‌ಫಾಲೋ
ನಟ ದರ್ಶನ್ ಇಷ್ಟು ದಿನ ಕೇವಲ 6 ಖಾತೆಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದರು. ಸುಮಲತಾ ಅಂಬರೀಶ್, ಅಭಿಷೇಕ್, ಅವಿವಾ, ಸಹೋದರ ದಿನಕರ್, ಪುತ್ರ ವಿನೀಶ್ ಹಾಗೂ ತಮ್ಮ ಅಭಿಮಾನಿ ಸಂಘದ ಅಧಿಕೃತ ಖಾತೆ ಡಿ-ಕಂಪನಿ ಅಕೌಂಟ್‌ಗಳು ಈ ಲಿಸ್ಟ್‌ನಲ್ಲಿ ಇತ್ತು. ಇದೀಗ ಎಲ್ಲರನ್ನು ಅನ್‌ಫಾಲೋ ಮಾಡಿಬಿಟ್ಟಿದ್ದಾರೆ.
ಅಷ್ಟಕ್ಕೂ ಏನಾಯ್ತು?
ದರ್ಶನ್ ಹೀಗೆ ಎಲ್ಲರನ್ನು ಅನ್‌ಫಾಲೋ ಮಾಡಲು ಕಾರಣ ಏನು ಎನ್ನುವುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ದರ್ಶನ್ ಜೈಲು ಸೇರಿದ ಬಳಿಕ ಸುಮಲತಾ ಅಂಬರೀಶ್ ಅಂತರ ಕಾಯ್ದುಕೊಂಡಿದ್ದರು. ರಕ್ಷಿತಾ, ರಚಿತಾ ರಾಮ್ ಸೇರಿ ಕೆಲ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಭೇಟಿ ಮಾಡಿದ್ದರು. ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾಗಲೂ ಕೆಲವರು ಭೇಟಿ ಯತ್ನಿಸಿದ್ದರು. ಆದರೆ ಸುಮಲತಾ ಹೋಗಿರಲಿಲ್ಲ. ಬಹಳ ದಿನಗಳ ಬಳಿಕ ಸುದೀಪ್ ಪತ್ರ ಬರೆದು ಪ್ರಕರಣದ ಬಗ್ಗೆ ಮೌನ ಮುರಿದಿದ್ದರು. "ದರ್ಶನ್ ಯಾವಾಗಲೂ ನನ್ನ ಮಗನಂತೆ. ಯಾವ ತಾಯಿಯೂ ತನ್ನ ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸುವುದಿಲ್ಲ. ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ಯಾವುದೂ ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ" ಎಂದು ಬರೆದುಕೊಂಡಿದ್ದರು.
25 ವರ್ಷಗಳ ಒಡನಾಟ
ನಟ ದರ್ಶನ್ ಚಿತ್ರರಂಗಕ್ಕೆ ಬರುವುದಕ್ಕೂ ಮೊದಲಿನಿಂದಲೂ ಅಂಬಿ ಹಾಗೂ ತೂಗುದೀಪ ಕುಟುಂಬಗಳ ನಡುವೆ ಒಳ್ಳೆ ಒಡನಾಟವಿದೆ. 'ಮೆಜೆಸ್ಟಿಕ್' ಚಿತ್ರದ ಮುಹೂರ್ತ ಸಮಾರಂಭದಕ್ಕೆ ಅಂಬರೀಶ್- ಸುಮಲತಾ ದಂಪತಿ ಕ್ಲಾಪ್ ಮಾಡಿ ಶುಭ ಕೋರಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಬಂಧನದ ಬಗ್ಗೆ ಸುಮಲತಾ ಬರೆದಿದ್ದ ಪತ್ರದಲ್ಲಿ ಕೂಡ ಈ ಕುರಿತು ಪ್ರಸ್ತಾಪಿಸಿದ್ದರು.
"ನನ್ನ ಮೌನದ ಬಗ್ಗೆ ಕಾಮೆಂಟ್ ಮಾಡುವವರಿಗೆ ನನ್ನ ಹಾಗೂ ದರ್ಶನ್ ಕುಟುಂಬದ ಬಾಂಧವ್ಯದ ಬಗ್ಗೆ ಗೊತ್ತಿಲ್ಲ. ಅವರು ಸ್ಟಾರ್ ಮತ್ತು ಸೂಪರ್‌ಸ್ಟಾರ್ ಆಗುವ ಮೊದಲು ನಾನು ಅವರನ್ನು 25 ವರ್ಷಗಳಿಂದ ಬಲ್ಲೆ. ದರ್ಶನ್ ಯಾವಾಗಲೂ ನನಗೆ ಮಗನಂತೆ. ಅವರು ಅಂಬರೀಶ್ ಅವರನ್ನು ಯಾವಾಗಲೂ ತಮ್ಮ ಅಪ್ಪಾಜಿ ಎಂದು ಪರಿಗಣಿಸಿದ್ದಾರೆ. ನನಗೆ ಅವರ ತಾಯಿಯ ಗೌರವ ಮತ್ತು ಸ್ಥಾನ ಮತ್ತು ಮಗನ ಪ್ರೀತಿಯನ್ನು ನೀಡಿದ್ದಾರೆ. ಯಾವ ತಾಯಿಯೂ ತನ್ನ ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸುವುದಿಲ್ಲ" ಎಂದು ಸುಮಲತಾ ಹೇಳಿದ್ದರು.
ಸುಮಲತಾ ಗೂಡಾರ್ಥದ ಪೋಸ್ಟ್
ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್ ತಮ್ಮನ್ನು ಅನ್‌ಫಾಲೋ ಮಾಡುತ್ತಿದ್ದಂತೆ ಸುಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ. "ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಅಂದರೆ.. ಯಾರು ಸತ್ಯವನ್ನ ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದರೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ" ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.
ಅದಕ್ಕೂ ಮುನ್ನ ಎಫ್. ಸ್ಕಾಟ್ ಫಿಟ್ಜ್‌ಗೆರಾಲ್ಡ್ ಉಲ್ಲೇಖ(Quote) ವನ್ನು ಕೂಡ ಸುಮಲತಾ ಅಂಬರೀಶ್ ಹಂಚಿಕೊಂಡಿದ್ದರು. "ಸರಿಯಾಗಿರುವುದಕ್ಕಿಂತ ದಯೆಯಿಂದ ಇರುವುದು ಮುಖ್ಯ. ಹಲವು ಬಾರಿ, ಜನರಿಗೆ ಬೇಕಾಗಿರುವುದು ಮಾತನಾಡುವ ಒಳ್ಳೆ ಮನಸ್ಸಲ್ಲ, ಬದಲಿಗೆ ಕೇಳುವ ವಿಶೇಷ ಹೃದಯ" ಎಂದು ಅದರ ಸಾರಾಂಶ. ಹೀಗೆ ಪರೋಕ್ಷವಾಗಿ ಸುಮಲತಾ ಏನನ್ನೋ ಹೇಳುವ ಪ್ರಯತ್ನ ಮಾಡಿದ್ದಾರೆ.
ಊಹಾಪೋಹ ಯಾಕೆ?
ದರ್ಶನ್ ಹಾಗೂ ಸುಮಲತಾ ನಡುವೆ ಶೀತಲ ಸಮರ ಶುರುವಾಗಿದೆ ಎನ್ನುವ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ದರ್ಶನ್ ಜಾಮೀನು ಪಡೆದು ಹೊರಬಂದ ಮೇಲೆ ಕೂಡ ಸುಮಲತಾ ಭೇಟಿ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಫೋನ್ ಮಾಡಿ ಮಾತನಾಡಿರಬಹುದು ಎನ್ನುವುದು ಕೆಲವರ ವಾದ. ತಮ್ಮನ್ನು ಬೆಂಬಲಿಸಲಿಲ್ಲ ಎನ್ನುವ ಕಾರಣಕ್ಕೆ ಮನಸ್ತಾಪ ಮೂಡಿರಬಹುದು ಎಂದು ಕೆಲವರು ಭಾವಿಸುತ್ತಿದ್ದಾರೆ.
ಅಭಿ ಮಗನ ನಾಮಕರಣ
ಮಾರ್ಚ್ 14ರಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ದಂಪತಿ ಮಗನ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕಾರ್ಯಕ್ರಮದಕ್ಕೆ ದರ್ಶನ್ ಕೂಡ ಭಾಗಿ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದಿಢೀರನೆ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಲತಾ, ಅಭಿ, ಅವಿವಾ ಅವರನ್ನು ಅನ್‌ಫಾಲೋ ಮಾಡಿ ಏನಾದರೂ ಪರೋಕ್ಷವಾಗಿ ಸಂದೇಶ ರವಾನಿಸಿದ್ರಾ? ಎನ್ನುವ ಅನುಮಾನ ಕೂಡ ಮೂಡಿದೆ.
ಅಂಬಿ ಮನೆ ಕಾರ್ಯಕ್ರಮಗಳಲ್ಲಿ ದರ್ಶನ್ ಸದಾ ಮುಂದೆ ಇರುತ್ತಿದ್ದರು. ಇನ್ನು ಸುಮಲತಾ ಅಂಬರೀಶ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಬೆಂಬಲಕ್ಕೆ ನಿಂತಿದ್ದರು. ಯಶ್ ಜೊತೆ ಸೇರಿ ಪ್ರಚಾರ ಮಾಡಿದ್ದರು. ಜೋಡೆತ್ತುಗಳ ಬೆಂಬಲದಿಂದ ಸುಮಲತಾ ಅಂಬರೀಶ್ ಮಂಡ್ಯ ಸಂಸದೆಯಾಗಿ ಆಯ್ಕೆ ಆಗಿದ್ದರು. ಇನ್ನು ಅಭಿ ನಿಶ್ಚಿತಾರ್ಥ ಸಮಾರಂಭದಲ್ಲಿ ದರ್ಶನ್ ಭಾಗಿ ಆಗಿದ್ದರು. ಅಭಿ ಮದುವೆಗೆ ಹೋಗದಿದ್ದರೂ ಸಂಗೀತ್ ಕಾರ್ಯಕ್ರಮಕ್ಕೆ ಹಾಜರಾಗಿ ಕುಣಿದು ಕುಪ್ಪಳಿಸಿದ್ದರು.
ಸದ್ಯ ಹುಟ್ಟಿಕೊಂಡಿರುವ ಊಹಾಪೋಹಗಳಿಗೆಲ್ಲ ಶೀಘ್ರದಲ್ಲೇ ಉತ್ತರ ಸಿಗಲಿದೆ. ಮತ್ತೊಂದು ಕಡೆ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭವಾಗ್ತಿದೆ. 2ನೇ ಶೆಡ್ಯೂಲ್‌ನಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಯಲಿದೆ. ದರ್ಶನ್ ಕೂಡ ಬಣ್ಣ ಹಚ್ಚಲಿದ್ದಾರೆ. ಬೆಂಗಳೂರಿನಲ್ಲೇ ಚಿತ್ರೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. ಮುಂದೆ ಹೈದರಾಬಾದ್, ರಾಜಸ್ಥಾನ, ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡ್ತಿದೆ.


Click it and Unblock the Notifications











