ನಮ್ಮ ಹೀರೋಯಿನ್ ಪವಿತ್ರಾ ಗೌಡಗೆ ದರ್ಶನ್ ಸರ್ ಆ ಕಾಲದಲ್ಲೇ ''ಕಾಲ್'' ಮಾಡ್ತಿದ್ದರು...!
ಇವತ್ತು ಪವಿತ್ರಾ ಗೌಡ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿ. ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುವ ಪವಿತ್ರಾ ಬಳಿ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಕೈಗೊಬ್ಬರು - ಕಾಲಿಗೊಬ್ಬರು ಸಹಾಯಕರು.
ಆದರೆ.. ನಿಮಗೆ ಗೊತ್ತಾ, ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸಂಸಾರವನ್ನ ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿರುವ ಪವಿತ್ರಾ ಗೌಡ ಬೆಸಿಕಲಿ ಮಿಡಲ್ ಕ್ಲಾಸ್ ಹುಡುಗಿ. ಆದರೆ ಮಧ್ಯಮ ವರ್ಗದ ಜನರಲ್ಲಿ ಕಾಣಸಿಗುವ ಯಾವ ಲಕ್ಷಣ ಕೂಡ ಈಕೆಯಲ್ಲಿ ಇರಲಿಲ್ಲ.

ಬದಲಿಗೆ ಹೈ - ಫೈ ಜೀವನಕ್ಕೆ ಇವ್ಳ ಮನೆ ಹಾತೊರೆಯುತ್ತಿತ್ತು. ಹೀಗಾಗಿಯೇ ವಿಚ್ಚೇದನದ ಪತ್ರವನ್ನ ಕಟ್ಟಿಕೊಂಡ ಗಂಡನ ಕೈಗಿಟ್ಟು ಈ ಬಣ್ಣದ ಪ್ರಪಂಚದ ಕಡೆ ಬಂದ ಪವಿತ್ರಾ ರ್ಯಾಂಪ್ ವ್ಯಾಕ್ ಮಾಡಲು ಶುರು ಮಾಡಿದಳು. ಎಲ್ಲರ ಗಮನ ಸೆಳೆದಳು. ನೋಡ.. ನೋಡುತ್ತಾ.. ಈಕೆಗೆ ಒಂದಾದ ಮೇಲೊಂದು ಚಿತ್ರಗಳು ಕೂಡ ಸಿಗಲು ಆರಂಭಿಸಿದ್ದವು.
'ಅಗಮ್ಯ' ಎಂಬ ಪರಮತೋಪು ಚಿತ್ರದ ಮೂಲಕ ನಾಯಕಿಯ ಪಟ್ಟಕ್ಕೇರಿದ್ದ ಪವಿತ್ರಾ ಗೌಡ, ಆ ನಂತರ ಎಸ್.ನಾರಾಯಣ್ ನಿರ್ದೇಶನದ 'ಛತ್ರಿಗಳು ಸಾರ್ ಛತ್ರಿಗಳು' ಚಿತ್ರದಲ್ಲಿ ಕೂಡ ಮೂವರು ನಾಯಕಿಯರಲ್ಲಿ ಒಬ್ಳಾಗಿದ್ದಳು. ಆ ನಂತರ ಸಾ.ರಾ.ಗೋವಿಂದು ಮಗ ಅನೂಪ್ ಅಭಿನಯಿಸಿದ್ದ, ಪಂಚ ವಾರ್ಷಿಕ ಯೋಜನೆ ಅಡಿ 2012ರಲ್ಲಿ ಶುರುವಾಗಿ 2017ರಲ್ಲಿ ತೆರೆಗೆ ಬಂದ 'ಸಾಗುವ ದಾರಿಯಲ್ಲಿ' ಎಂಬ ಚಿತ್ರದಲ್ಲಿ ಕೂಡ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಳು ಪವಿತ್ರಾ ಗೌಡ. ಈ ಚಿತ್ರದ ಕುರಿತು ಈಗ ಆ ಚಿತ್ರದ ನಿರ್ದೇಶಕ ಶಿವಕುಮಾರ್ ಸಿ ಎಸ್ ಗೌಡ ಅವರು ಟಿವಿ 09 ಕನ್ನಡ ವಾಹಿನಿ ಜೊತೆ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವತ್ತು ಕೋಟಿ ಬೆಲೆ ಬಾಳುವ ಪವಿತ್ರಾ ಗೌಡಗೆ ಆಗ ನೀಡಿದ್ದ ಸಂಭಾವನೆಯ ಬಗ್ಗೆಯೂ ಮಾತನಾಡಿದ್ದಾರೆ.

ಹೌದು. ಟಿವಿ 09 ಕನ್ನಡಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶಿವಕುಮಾರ್ ಸಿ ಎಸ್ ಗೌಡ, ಪವಿತ್ರಾ ಗೌಡ ಅವರನ್ನು ನಾವು ಆಡಿಷನ್ ಮಾಡಿದ್ದು ವಿಜಯನಗರದಲ್ಲಿ ಅಂದಿದ್ದಾರೆ.ಇನ್ನೂ.. ನಮ್ಮ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ. ಈ ಕಾರಣಕ್ಕೆ .. ಖುದ್ದು ನಿರ್ಮಾಪಕರೇ ಹೆಸರು ಮಾಡಿರುವ ನಾಯಕಿಯನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದರೂ ನಾನು ಹೊಸಬರಿಗೆ ಮಣೆ ಹಾಕಲು ನಿರ್ಧರಿಸಿದ್ದೆ, ದೊಡ್ಡ ಹೀರೋಯಿನ್ ಬೇಡ ಎಂದು ಹೇಳಿದ್ದೇ ಎಂದು ಹೇಳಿದ್ದಾರೆ.
ಇನ್ನೂ.. ಸಾಗುವ ದಾರಿಯಲ್ಲಿ ಹೇಳಿ ಕೇಳಿ ಸಾರಾ ಗೋವಿಂದು ಅವರ ಮಗ ಅನೂಪ್ ಅಭಿನಯದ ಸಿನಿಮಾ. ಹೀಗಾಗಿ ಪವಿತ್ರಾ ಗೌಡ ಅವರನ್ನು ಆಯ್ಕೆ ಮಾಡಿದ ನಂತರ, ಪವಿತ್ರಾ ಅವರ ಫೋಟೋವನ್ನು ನಾನು ಆಗ ಸಾರಾ ಗೋವಿಂದು ಅವರಿಗೂ ಕೂಡ ಕಳಿಸಿದ್ದೇ ಎಂದಿರುವ ನಿರ್ದೇಶಕ ಶಿವಕುಮಾರ್ ಸಿ ಎಸ್ ಗೌಡ, ಅದೊಂದು ದಿನ ಕತ್ರಿಗುಪ್ಪೆ ಬಳಿ ಇರುವ ಹೊಟೇಲ್‌ಗೆ ಕರೆಸಿ ಸಾರಾ ಗೋವಿಂದು ಅವರನ್ನು ನೇರವಾಗಿಯೇ ಭೇಟಿ ಮಾಡಿಸಿ ಪವಿತ್ರಾ ಗೌಡ ಅವರನ್ನು ನಾವು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದೇವು ಎಂದು ಕೂಡ ಹೇಳಿದ್ದಾರೆ.

ಹೀಗೆ ''ಸಾಗುವ ದಾರಿಯಲ್ಲಿ'' ಚಿತ್ರಕ್ಕೆ ''ನಾಯಕಿ''ಯಾಗಿ ಆಯ್ಕೆಯಾದ ಪವಿತ್ರಾ ಗೌಡ ಎಲ್ಲಿ..? ಅಗಣಿತ.. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ, ಅದಾಗಲೇ ಮದ್ವೆಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿ? ಇವರಿಬ್ಬರ ನಡುವೆ ಸಂಬಂಧ ಕುದುರೋದಾದರೂ ಹೇಗೆ ಸಾಧ್ಯ ಮುಂತಾದ ಪ್ರಶ್ನೆಗಳು ಸಹಜವೇ.
ಈ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಗಾಂಧಿನಗರದಲ್ಲಿ ಅನೇಕ ಕಥೆ-ಉಪಕಥೆಗಳಿವೆಯಾದರೂ, 'ಸಾಗುವ ದಾರಿಯಲ್ಲಿ' ಚಿತ್ರದ ನಿರ್ದೇಶಕ ಶಿವಕುಮಾರ್ ಸಿ ಎಸ್ ಗೌಡ, ಪವಿತ್ರಾ ಗೌಡ 'ಸಾಗುವ ದಾರಿಯಲ್ಲಿ' ದರ್ಶನ್ ಹೆಜ್ಜೆ ಗುರುತುಗಳನ್ನೂ ನಾನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದ್ದಾರೆ. ಹೌದು, ಟಿವಿ 09 ಕನ್ನಡಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶಿವಕುಮಾರ್ ಸಿ ಎಸ್ ಗೌಡ 2017ರಲ್ಲಿ ಇನ್ನೇನು ಚಿತ್ರೀಕರಣ ಮುಕ್ತಾಯವಾಗಬೇಕೆನ್ನುವಷ್ಟರಲ್ಲಿ, ಅದೊಂದು ದಿನ ಪವಿತ್ರಾ ಗೌಡಗೆ ದರ್ಶನ್ ಅವರ ಕರೆ ಬಂದಿತ್ತು ಎಂದಿದ್ದಾರೆ. ಇನ್ನೂ, ಚಿತ್ರೀಕರಣದಲ್ಲಿದ್ದಾಗ ಪವಿತ್ರಾ ಗೌಡ, ತಮ್ಮ ಮೊಬೈಲ್ ಫೋನ್‌ನ್ನೂ ನನ್ನ ಸಹಾಯಕ ನಿರ್ದೇಶಕ ವೆಂಕಟ್ ಬಳಿ ಕೊಡುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ಹೀಗಾಗಿಯೇ ಅವತ್ತು ದರ್ಶನ್ ಸರ್ ಕರೆ ಬಂದಾಗ, ನನ್ನ ಬಳಿ ಓಡಿ ಬಂದ ವೆಂಕಟ್ ಸರ್ ಪವಿತ್ರಾ ಅವರಿಗೆ 'ಡಿ ಬಾಸ್' ಕಾಲ್ ಮಾಡುತ್ತಿದ್ದಾರೆ ಎಂದು ಹೇಳಿದ ಎಂದು ಆ ದಿನವನ್ನೂ ಮೆಲುಕು ಹಾಕಿದ್ದಾರೆ ಶಿವಕುಮಾರ್ ಸಿ ಎಸ್ ಗೌಡ.

ಇನ್ನೂ 'ಡಿ ಬಾಸ್' ಎಂಬ ಹೆಸರಿನಲ್ಲಿ ದರ್ಶನ್ ಅವರ ನಂಬರ್ ಸೇವ್ ಆಗಿತ್ತಾದರೂ, ಆರಂಭದಲ್ಲಿ ನನಗೆ ನಂಬಿಕೆ ಬರಲಿಲ್ಲ. ಯಾಕೆಂದರೆ ಆಗಿನ್ನೂ ಡಿ ಬಾಸ್ ಎಂಬ ಬಿರುದು ಅಷ್ಟೊಂದು ಪ್ರಚಲಿತದಲ್ಲಿ ಇರಲಿಲ್ಲ ಎಂದಿರುವ 'ಸಾಗುವ ದಾರಿಯಲ್ಲಿ' ನಿರ್ದೇಶಕ ಶಿವಕುಮಾರ್, ಡಿ ಬಾಸ್ ಅಂದರೆ ದರ್ಶನ್ ಸರ್ ಅವರೇ ಎಂದು ನೀನು ಹೇಗೆ ಅಷ್ಟು ವಿಶ್ವಾಸದಿಂದ ಹೇಳ್ತೀಯಾ ಎಂದು ನಾನು ವೆಂಕಟ್ ಗೆ ಮರು ಪ್ರಶ್ನೆಯನ್ನೂ ಮಾಡಿದ್ದೇ ಎಂದಿದ್ದಾರೆ. ಇಲ್ಲ ಸರ್ ಡಿ ಬಾಸ್ ಅಂದರೆ ದರ್ಶನ್ ಅವರೇ ಎಂದು ವೆಂಕಟ್ ಹೇಳಿದಾಗ ನನಗೆ ನಿಜಕ್ಕೂ ಶಾಕ್ ಆಗಿತ್ತು ಎಂದು ಕೂಡ ಹೇಳಿದ್ದಾರೆ ಶಿವಕುಮಾರ್.
ಮುಂದುವರೆದು ಮಾತನಾಡಿರುವ ಶಿವಕುಮಾರ್, ಈ ಫೋನ್ ವಿಚಾರ ನಮಗೆ ಗೊತ್ತಾದ ಬೆನ್ನಲ್ಲಿಯೇ ಪವಿತ್ರಾ ಗೌಡ ತನ್ನ ಫೇಸ್‌ಬುಕ್ಕಲ್ಲಿ ದರ್ಶನ್ ಜೊತೆಗಿನ ಫೋಟೋವನ್ನು ಮೊದಲ ಬಾರಿ ಹಾಕಿ, ನಮಗೆಲ್ಲ ಇನ್ನೂ ಗಾಬರಿ ಬೀಳಿಸಿದರು ಎಂದಿದ್ದಾರೆ. ಅವರ ಅಮ್ಮ ತಮ್ಮ ಮಗಳ ಜೊತೆ ದಿನನಿತ್ಯ ಚಿತ್ರೀಕರಣಕ್ಕೆ ಬರುತ್ತಿದ್ದ ಹಿನ್ನೆಲೆ ನಾನು ಹೋಗಿ ಅವರ ಬಳಿ ಹೋಗಿ ಈ ವಿಚಾರ ಕೇಳಿದಾಗ ಅವರು ದರ್ಶನ್ ಸರ್ ಮತ್ತು ಪವಿತ್ರಾ ಗೌಡ ಅವರ ಸಂಬಂಧವನ್ನು ಒಪ್ಪಿಕೊಂಡಿದ್ದರು ಎಂದು ಕೂಡ ಶಿವಕುಮಾರ್ ಸಿ ಎಸ್ ಗೌಡ ಹೇಳಿದ್ದಾರೆ. ಪವಿತ್ರಾ ಗೌಡ ಅವರ ಮುಖದಲ್ಲಿರುವ ಮುಗ್ದತೆ ಮತ್ತು ಆಕರ್ಷಕ ವ್ಯಕ್ತಿತ್ವಕ್ಕೆ ದರ್ಶನ್ ಅವರ ಮನಸು ಸೋತಿದ್ದರೂ ಸೋತಿರಬಹುದು ಎಂದು ಕೂಡ ಅಂದಾಜಿಸಿದ್ದಾರೆ.


Click it and Unblock the Notifications











