For Quick Alerts
  ALLOW NOTIFICATIONS  
  For Daily Alerts

  'ಬ್ಯಾಡ್ ಮ್ಯಾನರ್ಸ್' ಸೆಟ್‌ಗೆ ಭೇಟಿ ನೀಡಿದ ಡಿ ಬಾಸ್: ಸಹೋದರನಿಗೆ ಶುಭಾಶಯ

  |

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಟನೆಯ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಮುಹೂರ್ತ ಇಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೆರವೇರಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಪಾಲ್ಗೊಂಡಿದ್ದರು.

  'ಬ್ಯಾಡ್ ಮ್ಯಾನರ್ಸ್' ಮುಹೂರ್ತ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಬಹುದು ಎಂಬ ನಿರೀಕ್ಷೆ ಇತ್ತು. ಮುಹೂರ್ತದಲ್ಲಿ ಡಿ ಬಾಸ್ ಇರಲಿಲ್ಲ. ಆದ್ರೆ, ಚಿತ್ರದ ಸೆಟ್‌ಗೆ ಭೇಟಿ ನೀಡಿದ ಚಾಲೆಂಜಿಂಗ್ ಸ್ಟಾರ್, ಅಭಿಷೇಕ್ ಹಾಗೂ ಸೂರಿ ಅವರಿಗೆ ಶುಭಕೋರಿದ್ದಾರೆ.

  'ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ': ದರ್ಶನ್‌ಗೆ ಅಭಿಷೇಕ್ ಹೀಗೆ ಹೇಳಿದ್ದೇಕೆ?

  ಬ್ಯಾಡ್ ಮ್ಯಾನರ್ಸ್ ಸಿನಿಮಾ ಮೈಸೂರಿನಲ್ಲಿ ಇಂದಿನಿಂದಲೇ ಚಿತ್ರೀಕರಣ ಆರಂಭಿಸಿದೆ. ಹೀಗಾಗಿ, ಸೆಟ್‌ಗೆ ಬಂದ ಡಿ ಬಾಸ್, ಸಹೋದರ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ.

  ಸುಮಾರು 12 ದಿನಗಳ ಕಾಲ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲೂ ಮೊದಲ ಹಂತದ ಚಿತ್ರೀಕರಣ ಮಾಡಲಿದೆ. ಆರಂಭದಲ್ಲಿ ಆಕ್ಷನ್ ದೃಶ್ಯಗಳ ಶೂಟಿಂಗ್ ನಡೆಯಲಿದ್ದು, ಹಿರಿಯ ನಟಿ ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ಹೆಚ್ಚು ಜೂನಿಯರ್ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸಾಹಸ ದೃಶ್ಯಗಳನ್ನು ರವಿವರ್ಮ ನಿರ್ದೇಶನ ಮಾಡಲಿದ್ದಾರೆ.

  'ಅಮರ್' ಸಿನಿಮಾ ಬಳಿಕ ಅಭಿಷೇಕ್ ಮಾಡುತ್ತಿರುವ ಎರಡನೇ ಸಿನಿಮಾ ಎಂಬ ಕಾರಣಕ್ಕೆ ಹಾಗೂ ಸುಕ್ಕು ಸೂರಿ ನಿರ್ದೇಶನ ಮಾಡುತ್ತಿರುವ ಕಾರಣಕ್ಕೆ ಈ ಪ್ರಾಜೆಕ್ಟ್ ಭಾರಿ ನಿರೀಕ್ಷೆ ಮೂಡಿಸಿದೆ.

  ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಅಂಬಿ ಪುತ್ರನ 'ಬ್ಯಾಡ್ ಮ್ಯಾನರ್ಸ್' ಆರಂಭ

  ಈ ಚಿತ್ರಕ್ಕಾಗಿ ಅಭಿಷೇಕ್ ಅಂಬರೀಶ್ ಬಾಡಿ ಟ್ರಾನ್ಸ್‌ಫರ್‌ಮೇಶನ್‌ನ ಸಹ ಮಾಡಲಿದ್ದಾರೆ ಎನ್ನಲಾಗಿದೆ. ಸುಧೀರ್ ಕೆಎಂ ಈ ಚಿತ್ರ ನಿರ್ಮಾಣ ಮಾಡಲಿದ್ದು, ಚರಣ್ ರಾಜ್ ಸಂಗೀತ ಇರಲಿದೆ. ಸದ್ಯಕ್ಕೆ ಹೀರೋಯಿನ್ ಯಾರೆಂದು ಫಿಕ್ಸ್ ಆಗಿಲ್ಲ.

  English summary
  Challenging star Darshan has visited to Bad Manners Movie set at mysore and he wishes to actor abhishek ambarish and director suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X