For Quick Alerts
  ALLOW NOTIFICATIONS  
  For Daily Alerts

  ಅಂಬಿ ಸಮಾಧಿಗೆ ನಮನ ಸಲ್ಲಿಸಿದ ದರ್ಶನ್, ಸುಮಲತಾ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಂಡ್ಯ ಸಂಸದೆ ಸುಮಲತಾ ಇಬ್ಬರು ಇಂದು ಬೆಳಿಗ್ಗೆ ಕಂಠೀರವ ಸ್ಟುಡಿಯೋಗೆ ತೆರಳಿ, ಅಂಬರೀಶ್ ಅವರ ಸಮಾಧಿಗೆ ನಮನ ಸಲ್ಲಿಸಿದರು.

  ಇಂದಿಗೆ ಅಂಬರೀಶ್ ಅಗಲಿ ಏಳು ತಿಂಗಳು ಕಳೆದಿದೆ. ಏಳನೇ ತಿಂಗಳ ಪುಣ್ಯ ತಿಥಿಯ ಹಿನ್ನೆಲೆ ಅಂಬಿ ಸಮಾಧಿಗೆ ಪತ್ನಿ ಸುಮಲತಾ ನಮಿಸಿದ್ದಾರೆ. ಅಂಬಿಯ ಇನ್ನೊಬ್ಬ ಮಗ ಎಂದೇ ಕರೆಸಿಕೊಳ್ಳುವ ದರ್ಶನ್ ಕೂಡ ಇಂದು ಕಂಠೀರವ ಸ್ಟುಡಿಯೋಗೆ ಹೋಗಿ ಅಂಬಿ ಅಪ್ಪಾಜಿಗೆ ನಮಸ್ಕರಿಸಿದ್ದಾರೆ.

  ಅಂಬಿ ಚಿಕಿತ್ಸೆಗಾಗಿ ಸಿಂಗಾಪೂರ್ ಗೆ ಹೋಗಿದ್ದು ಅತ್ಯಂತ ಕಷ್ಟದ ಸ್ಥಿತಿ: ಸುಮಲತಾ

  ಅಂದ್ಹಾಗೆ, ನಟ ದರ್ಶನ್ ಅವರು ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಕಂಠೀರವ ಸ್ಟುಡಿಯೋದಲ್ಲೇ ಶೂಟಿಂಗ್ ನಡೆಯುತ್ತಿದೆ. ಹೀಗಾಗಿ, ದರ್ಶನ್ ಜೊತೆ ನಿರ್ದೇಶಕ ತರುಣ್ ಸುಧೀರ್ ಕೂಡ ಅಂಬಿ ಸಮಾಧಿಗೆ ನಮನ ಸಲ್ಲಿಸಿದರು.

  ಮಂಡ್ಯ ಜನರಿಗಾಗಿ ರಾಕ್ ಲೈನ್ ವೆಂಕಟೇಶ್ ಕೈಗೊಂಡ ಹೊಸ ನಿರ್ಧಾರ

  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಅಂಬಿ ಪುತ್ರಿ ಅಭಿಷೇಕ್ ಕೂಡ ಸಮಾಧಿ ಬಳಿ ಭೇಟಿ ನೀಡಿದ್ದರು. ಕಳೆದ ನವೆಂಬರ್ 24 ರಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನರಾಗಿದ್ದರು.

  English summary
  Kannada actor Darshan and sumalatha visit to kanteerava studio and pays homage to Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X