'ವಿಕ್ಟರಿ'ಗೆ ಬಂತು ಆನೆಬಲ: ದರ್ಶನ್ ಭೇಟಿ ಹಿಂದೆ ಹೀಗೊಂದು ಕುತೂಹಲ.!

Recommended Video

ಶರಣ್ ಜೊತೆ ದರ್ಶನ್ ವಿಕ್ಟರಿ ಹಂಚಿಕೊಳ್ಳುತ್ತಾರಾ..? | Filmibeat Kannada

'Rambo-2' ಚಿತ್ರದ ಯಶಸ್ಸಿನ ಬಳಿಕ ನಟ ಶರಣ್ 'ವಿಕ್ಟರಿ-2' ಸಿನಿಮಾ ಮಾಡ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಅಂತಿಮ ಹಂತದಲ್ಲಿದ್ದು, ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆಯಾಗಿ ಸಖತ್ ಸದ್ದು ಮಾಡಿದೆ. ಅದರಲ್ಲೂ ಹುಡುಗಿಯರ ಗೆಟಪ್ ನಲ್ಲಿ ಶರಣ್, ಸಾಧು ಕೋಕಿಲಾ, ರವಿಶಂಕರ್ ಪ್ರತ್ಯಕ್ಷವಾಗಿದ್ದು ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದೆ.

ಅಷ್ಟರಲ್ಲೇ 'ವಿಕ್ಟರಿ' ಚಿತ್ರತಂಡಕ್ಕೆ ಆನೆಬಲ ಬಂದಿದೆ. ಹೌದು, ಇತ್ತೀಚಿಗಷ್ಟೆ 'ವಿಕ್ಟರಿ' ಸೆಟ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು. ಇದು ಸಹಜವಾಗಿ ಚಿತ್ರತಂಡಕ್ಕೆ ಮತ್ತಷ್ಟು ಹುಮ್ಮಸ್ಸು ತಂದಿದೆ.

ಈ ವೇಳೆ ದರ್ಶನ್ ಜೊತೆ ನಟ ಶರಣ್, ರವಿಶಂಕರ್, ತಬಲನಾಣಿ, ನಿರ್ದೇಶಕ ತರುಣ್ ಸುಧೀರ್, ನಿರ್ದೇಶಕ ಹರಿ ಸಂತೋಷ್ ಕಾಣಿಸಿಕೊಂಡಿದ್ದಾರೆ. 'ವಿಕ್ಟರಿ' ಸೆಟ್ ಗೆ ಬಂದಿದ್ದ ದರ್ಶನ್ ಎಲ್ಲರನ್ನ ಮಾತಾಡಿಸಿ, ಯೋಗಕ್ಷೇಮ ವಿಚಾರಿಸಿದ್ದರು. ಅಲ್ಲಿಗೆ ಈ ವಿಷ್ಯ ಮುಗಿಯಿತು. ಆದ್ರೆ, ಇಲ್ಲಿಂದ ಅಭಿಮಾನಿಗಳಲ್ಲಿ ಮತ್ತೊಂದು ಕುತೂಹಲ ಆರಂಭವಾಗಿದೆ. ಏನದು.? ಮುಂದೆ ಓದಿ....

'ವಿಕ್ಟರಿ' ಚಿತ್ರದಲ್ಲಿ ದರ್ಶನ್.?

'ವಿಕ್ಟರಿ' ಚಿತ್ರದಲ್ಲಿ ದರ್ಶನ್.?

'ವಿಕ್ಟರಿ' ಚಿತ್ರದಲ್ಲಿ ದರ್ಶನ್ ಅಭಿನಯಿಸ್ತಾರಾ.?......ಹೀಗೊಂದು ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ. ಸಾಮಾನ್ಯವಾಗಿ ಬೇರೆ ಸೆಟ್ ಗಳಿಗೆ ದರ್ಶನ್ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಯಾವುದಾದರೂ ಕೆಲಸವಿದ್ದರೇ ಮಾತ್ರ ಬೇರೆ ಸಿನಿಮಾಗಳ ಸೆಟ್ ಗೆ ವಿಸಿಟ್ ಕೊಡ್ತಾರೆ. ಬಹುಶಃ ವಿಕ್ಟರಿ ಸೆಟ್ ಗೂ ಶೂಟಿಂಗ್ ಉದ್ದೇಶದಿಂದಲೇ ಬಂದಿರಬಹುದಾ.?

ಸರ್ಪ್ರೈಸ್ ಇದ್ರೂ ಅಚ್ಚರಿಯಿಲ್ಲ.!

ಸರ್ಪ್ರೈಸ್ ಇದ್ರೂ ಅಚ್ಚರಿಯಿಲ್ಲ.!

ಅಂದ್ಹಾಗೆ, ವಿಕ್ಟರಿ ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಕ್ರಿಯೆಟೀವ್ ಹೆಡ್ ಆಗಿ ಕೆಲಸ ಮಾಡ್ತಿದ್ದಾರೆ. ತರುಣ್, ಶರಣ್ ಮತ್ತು ದರ್ಶನ್ ನಡುವೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ತರುಣ್ ನಿರ್ದೇಶನದ ಚೌಕ ಚಿತ್ರದಲ್ಲಿ ದರ್ಶನ್ ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು. ಇಲ್ಲಿಯೂ ಹಾಗೆ ಇರಬಹುದು ಎಂಬ ನಿರೀಕ್ಷೆ. ಹೀಗಾಗಿ, ಏನಾದರೂ ಸರ್ಪ್ರೈಸ್ ಇರಬಹುದಾ ಎಂಬ ಲೆಕ್ಕಾಚಾರ. ಆದ್ರೆ, ಅದನ್ನ ಚಿತ್ರತಂಡವೇ ಹೇಳಬೇಕಿದೆ.

ತರುಣ್ ಜೊತೆ ದರ್ಶನ್ ಸಿನಿಮಾ

ತರುಣ್ ಜೊತೆ ದರ್ಶನ್ ಸಿನಿಮಾ

'ಕುರುಕ್ಷೇತ್ರ' ಮುಗಿಸಿ, 'ಯಜಮಾ'ನ ಶೂಟಿಂಗ್ ಮಾಡ್ತಿರುವ ದರ್ಶನ್ ಮುಂದೆ ಎಂ.ಡಿ ಶ್ರೀಧರ್ ನಿರ್ದೇಶನದ 'ಒಡೆಯ' ಸಿನಿಮಾ ಮಾಡಲಿದ್ದಾರೆ. ಅದಾದ ಬಳಿಕ ತರುಣ್ ಹಾಗೂ 'ಹೆಬ್ಬುಲಿ' ಉಮಾಪತಿ ಜೋಡಿಯ ಚಿತ್ರದಲ್ಲಿ ನಟಿಸಲಿದ್ದಾರೆ.

'ವಿಕ್ಟರಿ' ಬಾರಿಸಲು ಶರಣ್ ಸಜ್ಜು

'ವಿಕ್ಟರಿ' ಬಾರಿಸಲು ಶರಣ್ ಸಜ್ಜು

ಅಂದ್ಹಾಗೆ, ವಿಕ್ಟರಿ 2 ಚಿತ್ರವನ್ನ 'ಅಲೆಮಾರಿ' ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ. 'ಕಾಲೇಜ್ ಕುಮಾರ' ನಂತರ ಸಂತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಶರಣ್ ಗೆ ಜೋಡಿಯಾಗಿ ನಟಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ. 'ಅಪೂರ್ವ' ಚಿತ್ರದ ನಂತರ ನಟಿ ಅಪೂರ್ವ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಮತ್ತೊಬ್ಬ ನಾಯಕಿಯಾಗಿ 'ವಿಕ್ಟರಿ' ಚಿತ್ರದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಅವರೇ ಇರಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

More from Filmibeat

English summary
Challenging star darshan his visit to sharan's victory 2 movie set. the directed by hari santosh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X