For Quick Alerts
  ALLOW NOTIFICATIONS  
  For Daily Alerts

  ಅರಣ್ಯಸಂಚಾರ ಆರಂಭಿಸಿದ ಚಾಲೆಂಜಿಂಗ್ ಸ್ಟಾರ್

  By Pavithra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರೀಕರಣದಲ್ಲಿ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ತಮ್ಮ ಬಿಡುವಿನ ವೇಳೆಯ ಬಹುತೇಕ ಸಮಯವನ್ನು ಮೈಸೂರಿನಲ್ಲೇ ಕಳೆಯುತ್ತಾರೆ ಚಾಲೆಂಜಿಂಗ್ ಸ್ಟಾರ್. ಸದ್ಯ ದರ್ಶನ್ ಕಬಿನಿ ಹಿನ್ನಿರಿನ ಅರಣ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಬೀಡು ಬಿಟ್ಟಿದ್ದಾರಂತೆ.

  ದಟ್ಟಾರಣ್ಯದಲ್ಲಿ ದಚ್ಚು ಅರಣ್ಯ ಸಂಚಾರ ಆರಂಭಿಸಿದ್ದಾರೆ. ಮೈಸೂರಿನ ಕಬಿನಿ ಹಿನ್ನಿರಿನ ಅರಣ್ಯದಲ್ಲಿ ಸಫಾರಿ ಮಾಡಿರುವ ದರ್ಶನ್, ಇಡೀ ದಿನ ಅಲ್ಲೇ ವಿಶ್ರಾಂತಿ ಪಡೆದಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ಬ್ರೇಕ್ ಸಿಕ್ಕಿರುವ ಹಿನ್ನಲೆಯಲ್ಲಿ ಗೆಳೆಯರೊಂದಿಗೆ ಕಾಡಿನಲ್ಲಿ ಕಾಲಕಳೆಯುತ್ತಿದ್ದಾರೆ.

  'ಬಾಸ್'ಗಾಗಿ ದರ್ಶನ್ ಮನೆಮುಂದೆ ಅಭಿಮಾನಿಗಳು ಮಾಡಿದ ಕೆಲಸ ನೋಡಿ'ಬಾಸ್'ಗಾಗಿ ದರ್ಶನ್ ಮನೆಮುಂದೆ ಅಭಿಮಾನಿಗಳು ಮಾಡಿದ ಕೆಲಸ ನೋಡಿ

  ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಪ್ರಾಣಿ ಪ್ರೇಮಿ ಅವರ ಫಾರ್ಮ್ ಹೌಸ್ ನಲ್ಲೇ ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ. ಇತ್ತೀಚಿಗಷ್ಟೆ ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ ಈ ಎಲ್ಲಾ ಕಾರಣದಿಂದ ಮತ್ತು ಸಫಾರಿ ಮಾಡಲೇಂದೆ ಕಬಿನಿ ಹಿನ್ನಿರಿನ ಅರಣ್ಯಕ್ಕೆ ಡಿ ಬಾಸ್ ಎಂಟ್ರಿ ಕೊಟ್ಟಿದ್ದಾರೆ.

  ಕಬಿನಿ ಹಿನ್ನಿರಿನ ಅರಣ್ಯ ಕಚೇರಿಯಲ್ಲಿ ತಮ್ಮ ಸ್ನೇಹಿತರು ಹಾಗೂ ಅಧಿಕಾರಿಗಳ ಜೊತೆ ದರ್ಶನ್ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

  English summary
  Kannada actor Darshan visited Kabini back forest with his friends. Darshan has been selected as the Ambassador of the Forest Department recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X