ಉಕ್ಕಡ ಮಾರಮ್ಮ ದೇಗುಲಕ್ಕೆ ದರ್ಶನ್ ಭೇಟಿ: 'ಕಾಟೇರ' ಟೀಸರ್, ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕೊನೆಹಂತದ ಚಿತ್ರೀಕರಣ ಮಂಡ್ಯದಲ್ಲಿ ನಡೀತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ ಎನ್ನಲಾಗ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳು ತೆರೆಮೇಲೆ 'ಕಾಟೇರ'ನ ದರ್ಶನಕ್ಕಾಗಿ ಕಾದು ಕೂತಿದ್ದಾರೆ.

ಅಭಿಮಾನಿಗಳು 'ಕಾಟೇರ' ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ತರುಣ್ ಸುಧೀರ್ ಅಂಡ್ ಟೀಂ ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಮುಗಿಸುವ ಪ್ರಯತ್ನದಲ್ಲಿದೆ. ಚಿತ್ರವನ್ನು ಸೊಗಸಾಗಿ ತೆರೆಗೆ ತರುವ ಲೆಕ್ಕಾಚಾರದಲ್ಲಿದೆ. ಈ ವರ್ಷ ದರ್ಶನ್ ನಟಿಸಿದ 'ಕ್ರಾಂತಿ' ಸಿನಿಮಾ ಮಾತ್ರ ರಿಲೀಸ್ ಆಗಿತ್ತು. ಚಾಲೆಂಜಿಂಗ್ ಸ್ಟಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಗರಡಿ' ಸಿನಿಮಾ 2ನೇ ವಾರ ಪ್ರದರ್ಶನ ಕಾಣುತ್ತಿದೆ.

Darshan visits Aarathi Ukkada Maramma Temple, Kaatera trailer, teaser will drop on this date

ಮಂಡ್ಯದಲ್ಲಿ 'ಕಾಟೇರ' ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಈ ವಾರ ಆರಂಭವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಭಾರೀ ಸೆಟ್‌ ನಿರ್ಮಿಸಿ 4 ದಿನಗಳ ಕಾಲ ಸೆರೆಹಿಡಿಯಲಾಗುತ್ತಿದೆ. ದರ್ಶನ್ ಶೂಟಿಂಗ್ ಸೆಟ್‌ಗೆ ಹೋಗುವ ಮುನ್ನ ಶ್ರೀ ಕ್ಷೇತ್ರ ಆರತಿ ಉಕ್ಕಡ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪೋಸ್ಟರ್‌ಗಳು, ಮೋಷನ್ ಪೋಸ್ಟರ್ ಬಿಟ್ಟರೆ 'ಕಾಟೇರ' ಚಿತ್ರದ ಯಾವುದೇ ಗ್ಲಿಂಪ್ಸ್ ಇನ್ನು ರಿವೀಲ್ ಆಗಿಲ್ಲ. ಗಣೇಶ ಹಬ್ಬ, ದಸರಾ, ದೀಪಾವಳಿಗೆ ಸಿನಿಮಾ ಟೀಸರ್ ಬರಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಎಲ್ಲರಿಗೂ ನಿರಾಸೆಯಾಗಿತ್ತು. ಈಗಾಗಲೇ ಆನಂದ್ ಆಡಿಯೋ ಸಂಸ್ಥೆ ಆಡಿಯೋ ರೈಟ್ಸ್ ಕೊಂಡುಕೊಂಡಿದೆ. ಕೊನೆ ಪಕ್ಷ ಒಂದು ಸಾಂಗ್ ಆದ್ರು ರಿಲೀಸ್ ಮಾಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಡಿಸೆಂಬರ್ 23ಕ್ಕೆ 'ಕಾಟೇರ' ಟೀಸರ್ ರಿಲೀಸ್ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಅಂದು ರೈತರ ದಿನ . ಈ ಚಿತ್ರದಲ್ಲಿ ರೈತರ ಕುರಿತಾದ 70ರ ದಶಕದ ಕತೆಯಿದೆ. ಹಾಗಾಗಿ ಆ ವಿಶೇಷ ದಿನದಂದು ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ ಅನ್ನೋದು ಅಭಿಮಾನಿಗಳ ಲೆಕ್ಕಾಚಾರ. ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಕಾಯ್ದೆ ಹಿನ್ನೆಯಲ್ಲಿ ಸಿನಿಮಾ ಕತೆ ಸಾಗುತ್ತದೆ. ಆ ಕಾಯ್ದೆಯಿಂದೆ ಹಳ್ಳಿಗಳಲ್ಲಿ ನಡೆದ ಸಂಘರ್ಷವನ್ನು ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.

Darshan visits Aarathi Ukkada Maramma Temple, Kaatera trailer, teaser will drop on this date

ರೈತರ ದಿನದಂದು 'ಕಾಟೇರ' ಟೀಸರ್ ಬಂದರೆ ದರ್ಶನ್ ಹುಟ್ಟುಹಬ್ಬದ ದಿನ(ಫೆಬ್ರವರಿ 16) ಟ್ರೈಲರ್ ಬರುತ್ತದೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಈ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಸಮೇತ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿತ್ತು. ಮುಂದಿನ ವರ್ಷ ಅದೇ ದಿನ ಟ್ರೈಲರ್ ಬರುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದರ್, ಶ್ರುತಿ, ಕುಮಾರ್ ಗೋವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ.

'ಕಾಟೇರ' ಬಳಿಕ ದರ್ಶನ್ ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಸರಳವಾಗಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಇದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ಪ್ರಕಾಶ್ ಹೇಳಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ.

More from Filmibeat

English summary
Kaatera Trailer to be released on Darshan Birthday feb 16
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X