ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡೇಶ್ವರಿ ತಾಯಿಯ ಅಪ್ಪಟ ಭಕ್ತ. ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಆಷಾಢ ಬಂತೆಂದ್ರೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಆಷಾಢದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಧಿದೇವತೆಯ ಆರಾಧನೆ ಮಾಡುತ್ತಾರೆ. ಪ್ರತೀ ವರ್ಷ ಮೊದಲ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.

Recommended Video

Darshan,ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್ | Filmibeat Kannada

ಈ ವರ್ಷವೂ ಸಹ ದರ್ಶನ್ ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ. ಕೊರೊನಾ ಭೀತಿಯ ನಡುವೆಯೂ ದರ್ಶನ್ ಚಾಮುಂಡಿಬೆಟ್ಟಕ್ಕೆ ಹೋಗಿ ದೇವರ ದರ್ಶನ ಪಡೆದೆದಿದ್ದಾರೆ. ದರ್ಶನ್ ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಸ್ನೇಹಿತರು ಸಾಥ್ ನೀಡಿದ್ದಾರೆ.

ಆಷಾಢ ಶುಕ್ರವಾರ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುತ್ತೆ. ಕೊರೊನಾ ಭೀತಿ ಇದ್ದರು ಭಕ್ತರು ಭೇಟಿ ನೀಡಿ ತಾಯಿಯ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಅಪಾರ ಸಂಖ್ಯೆಯ ಭಕ್ತ ನಡುವೆಯೂ ದರ್ಶನ್ ಮಾಸ್ಕ್ ಧರಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಆಷಾಢದಲ್ಲಿ ದರ್ಶನ್ ಪ್ರತಿ ಶುಕ್ರವಾರ ವಿಶೇಷ ಪೂಜೆ ಮಾಡುತ್ತಾರೆ. ಫಾರ್ಮ್ ಹೌಸ್ ನಲ್ಲಿರುವ ಚಾಮುಂಡಿ ತಾಯಿ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾರೆ. ಕೊನೆಯ ಶುಕ್ರವಾರ ಸಹ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆಯುತ್ತಾರೆ.

Darshan Visits Chamundeshwari Temple For Ashada Special Pooja

ದರ್ಶನ್ ಸದ್ಯ ಫಾರ್ಮ್ ಹೌಸ್ ನಲ್ಲಿ ಪ್ರೀತಿಯ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ಸದ್ಯಕ್ಕೆ ಬಿಡುಗಡೆಯಾಗುತ್ತಿಲ್ಲ. ಇನ್ನೂ ಮದಕರಿನಾಯಕ ಸಿನಿಮಾದ ಚಿತ್ರೀಕರಣ ಸಹ ಸ್ಥಗಿತವಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ.

More from Filmibeat

English summary
Challenging star Darshan visits Chamundeshwari temple for Ashada Friday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X