ಫೋಟೋ ವೈರಲ್: ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು (ಮಾರ್ಚ್ 18) ರಾಯರ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದಾರೆ.

Recommended Video

ಮಂತ್ರಾಲಯದಲ್ಲಿ ದರ್ಶನ್ ಗೆ ಸಿಕ್ಕ ವಿಶೇಷ ಅಥಿತಿಗಳು | Filmibeat Kannada

ದರ್ಶನ್ ತಮ್ಮ ಆಪ್ತರ ಜೊತೆ ರಾಯರ ಸನ್ನಿಧಾನಕ್ಕೆ ವರ್ಷಗಳ ಬಳಿಕ ಭೇಟಿ ನೀಡಿದ್ದಾರೆ. ರಾಯರ ಮಠದಲ್ಲಿ ನಡೆದ ವೈಭವೋತ್ಸವ ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಬಳಿಕ ಮಠದ ವತಿಯಿಂದ ದರ್ಶನ್ ಅವರಿಗೆ ಸನ್ಮಾನ ಸಹ ಮಾಡಲಾಗಿದೆ.

ಇದಾದ ಬಳಿಕ ದರ್ಶನ್ ಪ್ರೀತಿಯ ಗೋಶಾಲೆಗೆ ಭೇಟಿ ನೀಡಿದ್ದಾರೆ. ಗೋಶಾಲೆಯ ಹಸುಗಳ ಜೊತೆ ದರ್ಶನ್ ಸ್ವಲ್ಪ ಸಮಯ ಕಾಲ ಕಳೆದಿದ್ದಾರೆ. ಡಿ ಬಾಸ್ ಹಸುಗಳನ್ನು ವೀಕ್ಷಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Darshan visits Mantralaya Goshala photo goes viral on social media

ಅಭಿಮಾನಿಗಳು ನೆಚ್ಚಿನ ನಟನ ಪೋಟೋಗಳನ್ನು ಶೇರ್ ಮಾಡಿ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ರಾಯರ ಸನ್ನಿಧಿಗೆ ಭೇಟಿ ನೀಡಿದ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್, 'ರಾಯರ ಮಠಕ್ಕೆ ಬಂದು ಬಹಳ ಕಾಲವಾಗಿತ್ತು ಹಾಗಾಗಿ ಇಂದು ಬಂದಿದ್ದೇನೆ. ಮಠಕ್ಕೆ ಬರುವುದೇ ಒಂದು ಖುಷಿ. ಇಲ್ಲಿಗೆ ಬಂದರೆ ನೆಮ್ಮದಿ ಎನಿಸುತ್ತದೆ' ಎಂದಿದ್ದಾರೆ.

ಸದ್ಯ ರಾಬರ್ಟ್ ಮುಗಿಸಿ, ಸಂತಸದಲ್ಲಿರುವ ದರ್ಶನ್ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆ ದರ್ಶನ್ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ. ಹಾಗಾಗಿ ಡಿ ಬಾಸ್ ಮುಂದಿನ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗಿದೆ.

More from Filmibeat

English summary
Challenging star Darshan visits Mantralaya Goshala photo goes viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X