For Quick Alerts
  ALLOW NOTIFICATIONS  
  For Daily Alerts

  ನಟ ಶ್ರೀಮುರಳಿಯನ್ನು ದಿಢೀರ್ ಭೇಟಿಯಾದ ಡಿ ಬಾಸ್ ದರ್ಶನ್: ಕಾರಣವೇನು?

  |

  ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ 'ಮದಗಜ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊರಾನಾ ಲಾಕ್ ಡೌನ್ ನಿಂದ ಸಿನಿಮಾಗಳು ಕೆಲಸಗಳು ಸಹ ಸಂಪೂರ್ಣ ಬಂದ್ ಆಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಆಗುತಿದ್ದಂತೆ ಚಿತ್ರೀಕರಣ ಪ್ರಾರಂಭವಾಗಿದ್ದು, ಸಾಕಷ್ಟು ಸಿನಿಮಾಗಳು ಶೂಟಿಂಗ್ ನಲ್ಲಿ ನಿರತವಾಗಿವೆ.

  ನಟ ಶ್ರೀಮುರಳಿ ಸಹ ತಿಂಗಳುಗಳ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಲಾಕ್ ಡೌನ್ ಗೂ ಮೊದಲು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಚಿತ್ರೀಕರಣ ಮಾಡಿರುವ 'ಮದಗಜ'ತಂಡ ಈಗ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಹೌದು, ಬಹುನಿರೀಕ್ಷೆಯ 'ಮದಗಜ' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಈ ಸಮಯದಲ್ಲಿ ನಟ ದರ್ಶನ್ ಭೇಟಿ ಇಡೀ ತಂಡಕ್ಕೆ ಅಚ್ಚರಿ ಮೂಡಿಸಿದೆ. ಮುಂದೆ ಓದಿ..

  ಸೆಪ್ಟೆಂಬರ್ 19ರಿಂದ 'ಮದಗಜ'ನ ಸವಾರಿ ಮತ್ತೆ ಶುರುಸೆಪ್ಟೆಂಬರ್ 19ರಿಂದ 'ಮದಗಜ'ನ ಸವಾರಿ ಮತ್ತೆ ಶುರು

  'ಮದಗಜ' ತಂಡಕ್ಕೆ ಖುಷಿತಂದ ದರ್ಶನ್ ಭೇಟಿ

  'ಮದಗಜ' ತಂಡಕ್ಕೆ ಖುಷಿತಂದ ದರ್ಶನ್ ಭೇಟಿ

  ಚಿತ್ರೀಕರಣ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಿಢೀರ್ ಭೇಟಿ ನೀಡಿ ಇಡೀ ತಂಡಕ್ಕೆ ಸರ್ಪ್ರೈಸ್ ನೀಡಿದ್ದಾರೆ. ದರ್ಶನ್ ಅಚಾನಕ್ ಭೇಟಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಂದ್ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನೂ ಚಿತ್ರೀಕರಣ ಪ್ರಾರಂಭಮಾಡಿಲ್ಲ. ಹಾಗಾಗಿ ದರ್ಶನ್ ಸದ್ಯ ಮೈಸೂರಿನಲ್ಲೇ ಕಾಲಕಳೆಯುತ್ತಿದ್ದಾರೆ. ಈ ಸಮಯದಲ್ಲಿ 'ಮದಗಜ' ಸೆಟ್ ಗೆ ಭೇಟಿ ನೀಡಿದ್ದಾರೆ.

  ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟ ಸಿನಿಮಾತಂಡ

  ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟ ಸಿನಿಮಾತಂಡ

  ಚಾಮುಂಡಿ ದೇವಸ್ಥಾನಕ್ಕೆ ತೆರಳುತ್ತಿದ್ದ ದರ್ಶನ್, ಮಾರ್ಗದಲ್ಲೇ ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಳಿಕ ಚಿತ್ರೀಕರಣ ಸೆಟ್ ಗೆ ಭೇಟಿ ನೀಡಿದ್ದಾರೆ. ದರ್ಶನ್ ಎಂಟ್ರಿ ಇಡೀ ತಂಡಕ್ಕೆ ಸಂತಸ ತಂದಿದೆ. ಇಡೀ 'ಮದಗಜ' ತಂಡ ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ.

  'ಮದಗಜ' ಸಿನಿಮಾದಲ್ಲಿ ಹಳ್ಳಿ ಹುಡುಗಿಯಾದ ಆಶಿಕಾ ರಂಗನಾಥ್'ಮದಗಜ' ಸಿನಿಮಾದಲ್ಲಿ ಹಳ್ಳಿ ಹುಡುಗಿಯಾದ ಆಶಿಕಾ ರಂಗನಾಥ್

  ಶ್ರೀಮುರಳಿ ಹೇಳಿದ್ದೇನು?

  ಶ್ರೀಮುರಳಿ ಹೇಳಿದ್ದೇನು?

  ದರ್ಶನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 'ಪ್ರೀತಿಯ ದರ್ಶನ್ ಅವರನ್ನು ಭೇಟಿ ಮಾಡಿರುವುದು ತುಂಬಾ ಸಂತೋಷವಾಗಿ.' ಎಂದು ಬರೆದುಕೊಂಡು ದರ್ಶನ್ ಜೊತೆ ಸೆಲ್ಫಿ ಫೋಟೋವನ್ನು ಶೇರ್ ಮಾಡಿದ್ದಾರೆ. ಇಬ್ಬರ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ಹರಿದು ಬರುತ್ತಿದೆ.

  ಆಶಿಕಾ ರಂಗನಾಥ್ ನಾಯಕಿ

  ಆಶಿಕಾ ರಂಗನಾಥ್ ನಾಯಕಿ

  'ಮದಗಜ', 'ಅಯೋಗ್ಯ' ಮಹೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ನಟ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಆಶಿಕಾ ಮತ್ತು ಶ್ರೀಮುರಳಿ ಜೋಡಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಚಿತ್ರದಲ್ಲಿ ಆಶಿಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಎರಡೂ ಸಿನಿಮಾಗೆ ಒಬ್ಬರೇ ನಿರ್ಮಾಪಕರು

  ಎರಡೂ ಸಿನಿಮಾಗೆ ಒಬ್ಬರೇ ನಿರ್ಮಾಪಕರು

  'ಮದಗಜ' ಚಿತ್ರಕ್ಕೆ ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ. ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾವನ್ನು ಉಮಾಪತಿ ಅವರೇ ನಿರ್ಮಾಣ ಮಾಡಿರುವುದು ವಿಶೇಷ. ರಾಬರ್ಟ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದ್ದು, ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Challenging star Darshan visits to Sri Murali starrer Madagaja shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X