ಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸ
Recommended Video

ಆ ಹೀರೋಗೆ ಈ ಹೀರೋ ಟಾಂಗ್ ಕೊಟ್ರು, ಇವರಿಗೆ ಅವರು ಕೌಂಟರ್ ಕೊಟ್ರು.....ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ಈ ಸಂಸ್ಕೃತಿ ಹೆಚ್ಚಿದೆ. ಯಾವುದೇ ಮಾಸ್ ಡೈಲಾಗ್ ಬಂದ್ರು, ಅದನ್ನ ಇನ್ನೊಬ್ಬರಿಗೆ ಹೋಲಿಕೆ ಮಾಡಿ ನೋಡಿ, ಇದು ಆ ನಟನಿಗೆ ಕೌಂಟರ್ ಎಂದೇ ಬಿಂಬಿಸುವಂತಾಗಿದೆ.
ದರ್ಶನ್, ಯಶ್, ಸುದೀಪ್, ಪುನೀತ್, ಶಿವಣ್ಣ ಸಿನಿಮಾಗಳಲ್ಲಿ ಇಂತಹ ಡೈಲಾಗ್ ಗಳು ಹೆಚ್ಚಿದೆ. ಈ ಕೌಂಟರ್, ಟಾಂಗ್ ಎಲ್ಲವನ್ನ ಗಮನಿಸಿದ ಡಿ ಬಾಸ್ ದರ್ಶನ್ ತಮ್ಮ ಚಿತ್ರಗಳ ಬರಹಗಾರರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಸಂಭಾಷಣೆ ಬರೆಯೋ ಮೊದಲೇ ಈ ಕೌಂಟರ್, ಟಾಂಗ್ ಕಾಲೆಳೆದ್ರು ಎಂಬ ಡೈಲಾಗ್ ಗಳನ್ನ ಬರೆಯಬಾರದೆಂದು ಪೂರ್ವ ಎಚ್ಚರಿಕೆ ಕೊಟ್ಟಿರ್ತಾರಂತೆ ದರ್ಶನ್. ಈ ಬಗ್ಗೆ ದರ್ಶನ್ ಬಹಿರಂಗವಾಗಿ ಮಾತನಾಡಿದ್ದಾರೆ. ಮುಂದೆ ಓದಿ......

ನಮಗೆ ಏನೂ ಗೊತ್ತಿರಲ್ಲ
''ಎಲ್ಲರ ಸಿನಿಮಾವನ್ನ ಎಲ್ಲರೂ ನೋಡುವುದಿಲ್ಲ. ಇದರಲ್ಲಿ ದರ್ಶನ್ ಏನೋ ಹೇಳ್ತಾರೆ, ಅದರಲ್ಲಿ ಅವರೇನೂ ಹೇಳ್ತಾರೆ. ನಮಗೆ ಗೊತ್ತಿರಲ್ಲ, ಡೈಲಾಗ್ ಏನು ಬರೆದಿರ್ತಾರೋ ಅದನ್ನ ನಾವು ಹೇಳ್ತೀವಿ. ಆಮೇಲೆ ನೋಡಿದ್ರೆ ಟಾಂಗ್, ಕೌಂಟರ್ ಅಂತ ಹೇಳ್ತಾರೆ''

ಪೂರ್ವ ಎಚ್ಚರಿಕೆ ಕೊಟ್ಟಿರುತ್ತೇನೆ
''ಕಥೆ ಬರಯೋರಿಗೆ ಮತ್ತು ಡೈಲಾಗ್ ಬರೆಯೋರಿಗೆ ನಾನು ಮೊದಲೇ ಎಚ್ಚರಿಕೆ ಕೊಟ್ಟಿರುತ್ತೇನೆ. ಅಪ್ಪಿ ತಪ್ಪಿ ಇದು ಕೌಂಟರ್, ಟಾಂಗ್ ಅಂತ ಬಂದ್ರೆ ನಾನು ನಿನ್ನನ್ನು ಕೇಳ್ತೀನಿ''

ಹೇ ಕ್ಯಾಡ್ಬರೀಸ್ ಮೊದಲೇ ಬಳಸಿದ್ದೆ
''ಯಜಮಾನ ಚಿತ್ರಕ್ಕೆ ಡೈಲಾಗ್ ಬರೆದಿರುವುದು ಹರಿಕೃಷ್ಣ ಅವರು ಮತ್ತು ಚೇತನ್ ಕುಮಾರ್. ಹೇ ಕ್ಯಾಡ್ಬರೀಸ್ ಅನ್ನೋದ ಪದ ನಾನು ಮೊದಲು ಬಳಸಿದ್ದು ನವಗ್ರಹ ಚಿತ್ರದಲ್ಲಿ, ಈಗ ಮತ್ತೆ ಯಜಮಾನ ಚಿತ್ರದಲ್ಲಿ. ಇದರಲ್ಲಿ ಟಾಂಗ್ ಅಂತ ಏನೂ ಇಲ್ಲ'' ಎಂದು ದರ್ಶನ್ ಹೇಳಿದ್ರು.

ಮಾರ್ಚ್ 1ಕ್ಕೆ ಗ್ರ್ಯಾಂಡ್ ಎಂಟ್ರಿ
ಮಾರ್ಚ್ 1 ರಂದು ದರ್ಶನ್ ಯಜಮಾನ ತೆರೆಕಾಣುತ್ತಿದ್ದು, ಪಿ ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸಿದ್ದು, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ದೇವರಾಜ್, ಧನಂಜಯ್, ರವಿಶಂಕರ್, ಸಾಧು ಕೋಕಿಲಾ ನಟಿಸಿದ್ದಾರೆ.


Click it and Unblock the Notifications











