Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕರಾವಳಿ ತೀರದಲ್ಲಿ ಡಿ ಬಾಸ್ ಗೆ ಸಿಕ್ತು ಮುತ್ತಿನಂತ ಉಡುಗೊರೆ
ಕೋಸ್ಟಲ್ ವುಡ್ ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ. ಹಾಗೊಂದು ಹೀಗೊಂದು ಸಿನಿಮಾ ಮಾಡುತ್ತಿದ್ದ ಮಂಗಳೂರಿನವರು ನಾವು ಯಾರಿಗೂ ಕಮ್ಮಿ ಇಲ್ಲ ಅಂತ ಒಳ್ಳೆ ಚಿತ್ರಗಳನ್ನ ಪ್ರೇಕ್ಷಕರಿಗೆ ನೀಡುವಲ್ಲಿ ಮುಂದಾಗಿದ್ದಾರೆ.
ಸ್ಯಾಂಡಲ್ ವುಡ್ ಸಿನಿಮಾಮಂದಿಗಳು ಕೋಸ್ಟಲ್ ವುಡ್ ಅವರನ್ನು ಪ್ರೀತಿಯಿಂದ ಸ್ಯಾಂಡಲ್ ವುಡ್ ಗೆ ಬರಮಾಡಿಕೊಂಡು ಅವರ ಪ್ರತಿಭೆಗೆ ಬೆಲೆ ಕೊಟ್ಟು ಚಿತ್ರಗಳಿಗೆ ಬೆಂಬಲ ನೀಡುತ್ತಿದ್ದಾರೆ.
ವೃಕ್ಷ ಮಾತೆ ಉಳಿವಿಗಾಗಿ ಟೊಂಕ ಕಟ್ಟಿದ ಚಾಲೆಂಜಿಂಗ್ ಸ್ಟಾರ್
ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಮ್ಮ ಸ್ಟಾರ್ ಗಳು ಭಾಗಿ ಆಗುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆಯಷ್ಟೇ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗಿ ಆಗಿದ್ದರು. ಸಾವಿರಾರು ಅಭಿಮಾನಿಗಳು ಡಿ ಬಾಸ್ ರನ್ನ ಬರಮಾಡಿಕೊಂಡು ಮುತ್ತಿನಂಥ ಉಡುಗೊರೆಯನ್ನು ನೀಡಿದ್ದಾರೆ. ದರ್ಶನ್ ಯಾವ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಚಾಲೆಂಜಿಂಗ್ ಸ್ಟಾರ್ ಗೆ ಸಿಕ್ಕ ಉಡುಗೊರೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ದರ್ಶನ್
ಮಂಗಳೂರಿನಲ್ಲಿ ಇತ್ತೀಚಿಗಷ್ಟೆ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿ ಆಗಿದ್ದರು. ಸಾವಿರಾರು ಅಭಿಮಾನಿಗಳು ದರ್ಶನ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು.

ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನರು
ದರ್ಶನ್ ಬರುತ್ತಾರೆ ಎಂದು ತಿಳಿದ ಅಭಿಮಾನಿಗಳು ಡಿ ಬಾಸ್ ನೋಡಲು ಕಾತುರದಿಂದ ಕಾದಿದ್ದರು. ದರ್ಶನ್ ಬಂದ ನಂತರ ಸೆಲ್ಫಿಗಾಗಿ ಮುಗಿಬಿದ್ದರು. ಸದ್ಯ ಆ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಮುತ್ತಿನಂತ ಉಡುಗೊರೆ
ದರ್ಶನ್ ಅವರ ಅಭಿಮಾನಿಗಳು ತನ್ನ ನೆಚ್ಚಿನ ಸ್ಟಾರ್ ಗೆ ವಿಶೇಷವಾದ ಉಡುಗೊರೆಯನ್ನು ಆಗಾಗ ನೀಡುತ್ತಲೇ ಇರುತ್ತಾರೆ. ಆದರೆ ಮಂಗಳೂರಿನ ಅಭಿಮಾನಿಯೊಬ್ಬರು ವಿಶೇಷವಾದ ವ್ಯಂಗ್ಯ ಚಿತ್ರದ ಫೋಟೋವನ್ನು ಡಿ ಬಾಸ್ ಗೆ ನೀಡಿದ್ದಾರೆ.

ಉಡುಗೊರೆಯನ್ನು ಮೆಚ್ಚಿಕೊಂಡ ಅಭಿಮಾನಿಗಳು
ಮಂಗಳೂರಿನಲ್ಲಿ ಅಭಿಮಾನಿ ಕೊಟ್ಟಿರುವ ಉಡುಗೊರೆಯನ್ನು ಬೆಂಗಳೂರಿನ ಫ್ಯಾನ್ಸ್ ಇಷ್ಟ ಪಟ್ಟಿದ್ದಾರೆ. ಜಗ್ಗುದಾದನನ್ನು ಕಾರ್ಟೂನ್ ಸ್ಟೈಲ್ ನಲ್ಲಿ ನೋಡಿ ಫಿದಾ ಆಗಿದ್ದಾರೆ.